ರಣಬೀರ್‌ ಯಾ ರಣವೀರ್‌ ಯಾರಿಗೆ ದೀಪಿಕಾ ಪಡುಕೋಣೆ ಬೆಸ್ಟ್ ಪೇರ್, ರಣಬೀರ್‌ ಹೇಳಿದ್ದಾರೆ ಕೇಳಿ!

First Published | Jan 2, 2024, 5:30 PM IST

ದೀಪಿಕಾ ಪಡುಕೋಣೆ ( Deepika Padukone) ಮತ್ತು ರಣಬೀರ್‌ ಕಪೂರ್‌ (Ranbir Kapoor) ಹಳೆ ಪ್ರೇಮಿಗಳು. ಇಂದು ಇಬ್ಬರು ಅವರ ಅವರ ಜೀವನದಲ್ಲಿ ಮುಂದೆವರೆದಿದ್ದು ತಮ್ಮ ಜೀವನ ಸಂಗಾತಿಯ ಜೊತೆ ವೈವಾಹಿಕ ಜೀವನವನ್ನು ಆನಂದಿಸುತ್ತಾರೆ. ಆದರೆ ಇಂದಿಗೂ ರಣಬೀರ್‌ ಮತ್ತು ದೀಪಿಕಾರ ಲವ್‌ಸ್ಟೋರಿ ಚರ್ಚೆ ಮುನ್ನಲೆಗೆ ಬರುತ್ತಲೇ ಇರುತ್ತದೆ. ದೀಪಿಕಾ ಮತ್ತು ರಣಬೀರ್‌ ಹಳೆಯ ವಿಡೀಯೋ ಕ್ಲಿಪ್‌ ಈಗ ಮತ್ತೆ ವೈರಲ್‌ ಆಗಿದೆ. ಅಷ್ಷಕ್ಕೂ ಏನಿದೆ ಆ ವೀಡಿಯೋದಲ್ಲಿ ಗೊತ್ತಾ?

ದೀಪಿಕಾ ಪಡುಕೋಣೆ ಮತ್ತು ರಣಬೀರ್ ಕಪೂರ್ ಅನ್‌ ಸ್ಕ್ರೀನ್‌ ಕೆಮಿಸ್ಟ್ರಿ ಜೊತೆ ಅವರ ರಿಲ್‌ ಲೈಫ್‌ ಸಂಬಂಧ ಕೂಡ ಫ್ಯಾನ್ಸ್‌ಗೆ ಅಚ್ಚುಮೆಚ್ಚಾಗಿತ್ತು.ಇಬ್ಬರ ನಡುವಿನ ಬ್ರೇಕಪ್ ನಂತರವೂ ನಟರು ಪರದೆಯ ಮೇಲೆ ಒಂದಾಗಬೇಕೆಂದು ಬಯಸುವ ಅಭಿಮಾನಿಗಳು ಇದ್ದಾರೆ.

ದೀಪಿಕಾ ,  ಬನ್ಸಾಲಿ ಚಲನಚಿತ್ರಗಳಲ್ಲಿ ತನ್ನ ಪತಿ ರಣವೀರ್ ಸಿಂಗ್ ಜೊತೆ ಜೋಡಿಯಾಗಲು ಪ್ರಾರಂಭಿಸಿದಾಗ,  ಅಭಿಮಾನಿಗಳು ರಣವೀರ್‌ ಮತ್ತು ರಣಬೀರ್‌ ನಡುವೆ  ಹೋಲಿಕೆಗಳನ್ನು ಮಾಡಲು ಪ್ರಾರಂಭಿಸಿದರು.

Tap to resize

ಅಂತಹ ಒಂದು ಸಂದರ್ಶನದಲ್ಲಿ, ಮಾಧ್ಯಮದವರು ದೀಪಿಕಾ ಅವರನ್ನು ನೀವು ಯಾರೊಂದಿಗೆ ಹೆಚ್ಚು ಹಾಟ್ ಆಗಿ ಕಾಣುತ್ತೀರಿ - ರಣಬೀರ್ ಅಥವಾ ರಣವೀರ್? ಎಂದು ಕೇಳಲಾಯಿತು.

ಈ ಪ್ರಶ್ನೆಗೆ  ದೀಪಿಕಾ ಪಡುಕೋಣೆ  ಓ ದೇವರೇ, ನನಗೆ ಈ ಪ್ರಶ್ನೆಯನ್ನು ಹಿಂದೆಂದೂ ಕೇಳಲಾಗಿಲ್ಲ ಎಂದು ಉತ್ತರಿಸಿದರು. ರಣಬೀರ್‌ ಕಪೂರ್‌ ಅವರಿಗೆ ಪಾಸ್‌ ಮಾಡಿದರು.

ಇದು ರಣಬೀರ್ ಕಪೂರ್ ಜೊತೆಗೆ ದೀಪಿಕಾ ನಟಿಸಿದ ತಮಾಶಾ ಚಿತ್ರದ ಪ್ರಚಾರದಲ್ಲಿದ್ದಾಗ ನಡೆದ ಘಟನೆಯಾಗಿದ್ದು,  ಕಾನ್ಫರೆನ್ಸ್ ಕಾಲ್ ಮೂಲಕ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

ರಣಬೀರ್ ಕಪೂರ್, ನಾನು ಯಾರೊಂದಿಗೆ ಉತ್ತಮವಾಗಿ ಕಾಣುತ್ತೇನೆ ಎಂದು ನೀವು ಭಾವಿಸುತ್ತೀರಿ? ನಿಮ್ಮ ಆಯ್ಕೆಗಳು ಎ. ರಣಬೀರ್ ಕಪೂರ್, ಬಿ. ರಣವೀರ್ ಸಿಂಗ್ ಎಂದು ದೀಪಿಕಾ ರಣಬೀರ್‌ ಕಪೂರ್‌ ಮುಂದೆ ಈ ಪ್ರಶ್ನೆಯನ್ನು ಇಟ್ಟರು.

ನೀವು ಉತ್ತಮವಾಗಿ ಕಾಣಲು ಯಾರಾದರೂ ಬೇಕು ಎಂದು ನಾನು ಭಾವಿಸುವುದಿಲ್ಲ. ನೀವು ಹೇಗಿದ್ದೀರೋ ಹಾಗೆಯೇ ನೀವು ಚೆನ್ನಾಗಿ ಕಾಣುತ್ತೀರಿ! ಎಂದು ರಣಬೀರ್‌ ಉತ್ತರಿಸಿದಾಗ ಪ್ರೇಕ್ಷಕರು ಜೋರಾಗಿ ಕೂಗಿ ಮೆಚ್ಚುಗೆ ಸೂಚಿಸಿದ್ದರು.

Latest Videos

click me!