ಪ್ರೆಗ್ನೆನ್ಸಿ ಫೋಟೋಶೂಟ್ ಮೂಲಕ ಟೀಕೆಗೆ ದೀಪಿಕಾ ಉತ್ತರ, ಗಂಡು ಮಗು ಖಚಿತ ಎಂದ ಮೆಹಂದಿ ಆರ್ಟಿಸ್ಟ್!

Published : Sep 02, 2024, 08:46 PM IST

ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಸಂಭ್ರಮದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ದೀಪಿಕಾ ಪ್ರೆಗ್ನೆನ್ಸಿ ಫೋಟೋಶೂಟ್ ಮೂಲಕ ಸಂತಸದ ಜೊತೆ ಟೀಕೆ, ಊಹಾಪೋಹ ಹರಡಿದವರಿಗೆ ಉತ್ತರ ನೀಡಿದ್ದಾರೆ. ಆದರೆ ದೀಪಿಕಾಗೆ ಗಂಡು ಮಗು ಎಂದು ಮೆಹಂದಿ ಆರ್ಟಿಸ್ಟ್ ಖಚಿತಪಡಿಸಿದ್ದಾರೆ.

PREV
17
ಪ್ರೆಗ್ನೆನ್ಸಿ ಫೋಟೋಶೂಟ್ ಮೂಲಕ ಟೀಕೆಗೆ  ದೀಪಿಕಾ ಉತ್ತರ, ಗಂಡು ಮಗು ಖಚಿತ ಎಂದ ಮೆಹಂದಿ ಆರ್ಟಿಸ್ಟ್!

ಬಾಲಿವುಡ್‌ನ ಸೆಲೆಬ್ರೆಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ದಂಪತಿ ಪೋಷಕರಾಗುತ್ತಿರುವ ಖುಷಿ ವಿಚಾರ ಹಂಚಿಕೊಂಡ ಬಳಿಕ ಹಲವು ಊಹಾಪೋಹಗಳು ಹರಿದಾಡಿದೆ. ದೀಪಿಕಾ ಗರ್ಭಿಣಿ ಅನ್ನೋದು ಸುಳ್ಳು ಎಂದೆಲ್ಲಾ ಹಲವು ಗೊಂದಲದ ಹಾಗೂ ಆತಂಕಕಾರಿ ಮಾಹಿತಿ ಹರಿದಾಡಿತ್ತು. ಆದರೆ ಎಲ್ಲಾ ಟೀಕೆ, ಆರೋಪಗಳಿಗೆ ಇದೀಗ ದೀಪಿಕಾ ಪಡುಕೋಣೆ ತಮ್ಮ ಪ್ರೆಗ್ನೆನ್ಸಿ ಫೋಟೋಶೂಟ್ ಮೂಲಕ ಉತ್ತರ ನೀಡಿದ್ದಾರೆ.
 

27

ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಜೊತೆಯಾಗಿ ಪ್ರಗೆನ್ಸಿ ಫೋಟೋಶೂಟ್ ಮಾಡಿಸಿದ್ದಾರೆ. ಬೇಬಿ ಬಂಪ್ ತೋರಿಸಿದ ಹಲವು ಫೋಟೋಗಳನ್ನು ದೀಪಿಕಾ ಹಂಚಿಕೊಂಡಿದ್ದಾರೆ. ಎಲ್ಲಾ ಫೋಟೋಗಳು ಕಪ್ಪು ಬಿಳುಪಿನಲ್ಲಿ ಪೋಸ್ಟ್ ಮಾಡಿದ್ದಾರೆ. 
 

37

ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ದೀಪಿಕಾ ಪಡುಕೋಣೆ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮಲೈಕಾ ಅರೋರಾ, ಬಿಪಾಶಾ ಬಸು ಸೇರಿದಂತೆ ಹಲವು ನಟ ನಟಿಯರು ಪ್ರತಿಕ್ರಿಯೆ ನೀಡಿದ್ದಾರೆ. ದೀಪಿಕಾಗೆ ಶುಭ ಹಾರೈಸಿದ್ದಾರೆ. ಅಭಿಮಾನಿಗಳು ತಮ್ಮ ಕಾತರವನ್ನು ವ್ಯಕ್ತಪಡಿಸಿದ್ದಾರೆ. 
 

47

ಸೆಪ್ಟೆಂಬರ್ ತಿಂಗಳಲ್ಲಿ ದೀಪಿಕಾ ಮಗುವಿಗೆ ಜನ್ಮ ನೀಡಲಿದ್ದಾರೆ ಅನ್ನೋ ಮಾಹಿತಿ ಹಲವು ದಿನಗಳಿಂದ ಕೇಳಿಬರುತ್ತಿದೆ. ಆದರೆ ಇದೀಗ ಸೆಪ್ಟೆಂಬರ್ 28 ರಂದು ದೀಪಿಕಾ ಪಡುಕೋಣೆ ಹಾಗೂ ರಣವೀರ್ ದಂಪತಿ ಮಗುವನ್ನು ಬರ ಮಾಡಿಕೊಳ್ಳಲಿದ್ದರೆ ಅನ್ನೋ ಮಾಹಿತಿ ಬಹಿರಂಗವಾಗಿದೆ. 
 

57

ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಟಲಿಯಲ್ಲಿ ನಡೆದ ಅದ್ಧೂರಿ ಮದುವೆಯಲ್ಲಿ ರಣವೀರ್ ಸಿಂಗ್ ಹಾಗೂ ದೀಪಿಕಾ ಸತಿ ಪತಿಗಳಾಗಿದ್ದಾರೆ. ಇನ್ನು ಸೆಲೆಬ್ರೆಟಿ ದಂಪತಿ 2024ರ ಫೆಬ್ರವರಿ 29 ರಂದು ಪೋಷಕರಾಗುತ್ತಿರುವ ಖುಷಿ ಮಾಹಿತಿಯನ್ನು ಹಂಚಿಕೊಂಡಿದ್ದರು

67

ದೀಪಿಕಾ ತಾಯಿಯಾಗುತ್ತಿರುವ ಮಾಹಿತಿ ಹೊರಬಿದ್ದ ಬೆನ್ನಲ್ಲೇ ಹಲವು ಸುಳ್ಳು ಸುದ್ದಿಗಳು ಹರಿದಾಡಿತ್ತು. ದೀಪಿಕಾ ಹೊಟ್ಟೆ ಕುರಿತು ಹಲವರು ಕಮೆಂಟ್ ಮಾಡಿದ್ದರು. ದೀಪಿಕಾ ಗರ್ಭಿಣಿ ಆಗಿಲ್ಲ ಎಂದೂ ಆರೋಪಗಳು ಕೇಳಿಬಂದಿತ್ತು. ದೀಪಿಕಾ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುತ್ತಿದ್ದಾರೆ ಅನ್ನೋ ಸುಳ್ಳು ಮಾಹಿತಿಗಳು ಹರಿದಾಡಿತ್ತು.

77

ಇದರ ನಡುವೆ ದೀಪಿಕಾಗೆ ಗಂಡು, ಮಗು ಹೆಣ್ಣು ಮಗು ಅನ್ನೋ ಸುಳ್ಳು ಹರಿದಾಡಿತ್ತು. ಇದೀಗ ಸೆಲೆಬ್ರೆಟಿಗಳಿಗೆ ಮೆಹಂದಿ ಹಾಕುವ ಆರ್ಟಿಸ್ಟ್ ವೀಣಾ ನಗ್ಡಾ ಸೆಲೆಬ್ರೆಟಿ ದಂಪತಿಗೆ ಗಂಡು ಮಗು ಎಂದು ಖಚಿತಪಡಿಸಿದ್ದಾರೆ. ಈ ಕುರಿತು ರಣವೀರ್ ಹಾಗೂ ದೀಪಿಕಾಗೂ ಹೇಳಿರುವುದಾಗಿ ಇತ್ತೀಚೆಗೆ ಖಾಸಗಿ ವಾಹನಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
 

Read more Photos on
click me!

Recommended Stories