ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌: ಸಿಂಘಮ್‌ ಗರ್ಲ್‌ ಕಾಜಲ್‌ ಪ್ರೆಗ್ನೆಂಟ್‌?

First Published | Sep 18, 2021, 2:28 PM IST

ಸಿಂಘಮ್ ಗರ್ಲ್ ಎಂದೇ ಖ್ಯಾತರಾದ ಕಾಜಲ್ ಅಗರ್ವಾಲ್ ಪ್ರೆಗ್ನೆಂಟ್‌ ಎಂಬ ಸುದ್ದಿ ವೈರಲ್ ಆಗುತ್ತಿದೆ. ದಕ್ಷಿಣದೊಂದಿಗೆ ಹಲವಾರು ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿರುವ ಕಾಜಲ್ ಕಳೆದ ವರ್ಷ ಅಕ್ಟೋಬರ್ 30ರಂದು ಮುಂಬೈನಲ್ಲಿ ತಮ್ಮ ಬಹು ಕಾಲದ ಬಾಯ್‌ಫ್ರೆಂಡ್‌ ಗೌತಮ್ ಕಿಚ್ಲು ಅವರನ್ನು ವಿವಾಹವಾದರು. ಮದುವೆಯಾದಾಗಿನಿಂದ, ಆಕೆಯ ಪ್ರೆಗ್ನೆಂಸಿಯ ಬಗ್ಗೆ ಸುದ್ದಿ ಹಾರಾಡುತ್ತಿದೆ. ಇತ್ತೀಚಿಗೆ ಕಾಜಲ್ ತಮ್ಮ ಮುಂಬರುವ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಮಾಧ್ಯಮ ವರದಿಗಳ ಪ್ರಕಾರ, ಈಗ ಅವರು ಚಲನಚಿತ್ರಗಳಲ್ಲಿ ಕೆಲಸ ಮಾಡಲು ನಿರಾಕರಿಸಿದ್ದಾರೆ. ಆಕೆ ತಮ್ಮ ಮುಂಬರುವ ಸಿನಿಮಾ ಘೋಸ್ಟ್‌ನಿಂದ ಸಹ ಹೊರ ಬಿದ್ದಿದ್ದಾರೆ. ಇದಕ್ಕೆ ಕಾರಣ ಅವರ ಪ್ರೆಗ್ನೆಂಸಿ ಎನ್ನುತ್ತಿವೆ ವರದಿಗಳು. ಇಲ್ಲಿದೆ ಪೂರ್ತಿ ವಿವರ. 

ಕಾಜಲ್ ಯಾವಾಗಲೂ ಪೂರ್ಣ ಪ್ರಮಾಣದ ಆ್ಯಕ್ಷನ್ ಸಿನಿಮಾ ಮಾಡಲು ಬಯಸಿದ್ದರು ಮತ್ತು ಅಂತಿಮವಾಗಿ ಅವರು ಘೋಸ್ಟ್ ಸಿನಿಮಾದಲ್ಲಿ ಅವಕಾಶ ಪಡೆದರು. ಅವರು ಚಿತ್ರದಲ್ಲಿ ಸ್ಟಂಟ್ ದೃಶ್ಯಗಳನ್ನು ಮಾಡಲು ತರಬೇತಿಯನ್ನೂ ತೆಗೆದುಕೊಂಡರು. ಆದರೆ ಈಗ ಅವರು ಈ ಸಿನಿಮಾದಿಂದ ಹಿಂದೆ ಸರಿದಿದ್ದಾರೆ ಎಂಬ ಸುದ್ದಿ ಹರಡುತ್ತಿದೆ.

ಆದಾಗ್ಯೂ, ಆಕೆ  ಪ್ರೆಗ್ನೆಂಸಿಯಲ್ಲಿ ಯಾವುದೇ ರಿಸ್ಕ್‌ ತೆಗೆದುಕೊಳ್ಳಲು ಬಯಸದ ಕಾರಣ ಚಲನಚಿತ್ರವನ್ನು ಬಿಡಬೇಕಾಯಿತು ಎಂದು ವರದಿಗಳು ಹೇಳುತ್ತಿವೆ. ಮದುವೆಯಾದ ಕೆಲವೇ ತಿಂಗಳಲ್ಲಿ ಕಾಜಲ್ ಅಗರ್ವಾಲ್ ಗರ್ಭಿಣಿಯಾಗಿದ್ದಾರೆ. ಇದು  ಅನಿರೀಕ್ಷಿತವಾಗಿದ್ದು , ಸದ್ಯಕ್ಕೆ ಅವರು ಅದಕ್ಕೆ ಸಿದ್ಧವಾಗಿರಲಿಲ್ಲ, ಆದರೆ ಅವರು ಇದರಿಂದ ಸಂತೋಷವಾಗಿದ್ದಾರೆ ಎಂದು ಮೂಲಗಳು ಹೇಳುತ್ತವೆ.

Tap to resize

ಈ ಕಾರಣಕ್ಕಾಗಿಯೇ ಅವರು ಘೋಸ್ಟ್  ಸಿನಿಮಾ ಮೇಕರ್ಸ್‌ಗೆ ಮಾಹಿತಿ ನೀಡಿದ್ದಾರೆ ಮತ್ತು ಅವರು ಸಹ ಒಪ್ಪಿಕೊಂಡಿದ್ದಾರೆ. ಆದಾಗ್ಯೂ, ಪ್ರೆಗ್ನೆಂಸಿ ಬಗ್ಗೆ ಕಾಜಲ್ ಕಡೆಯಿಂದ ಯಾವುದೇ ಹೇಳಿಕೆ ಇನ್ನೂ ಹೊರ ಬಿದ್ದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಕಾಜಲ್ ಅಗರ್‌ವಾಲ್ ಬಹಳ ದಿನಗಳಿಂದ ದೂರವಿದ್ದರು ಮತ್ತು ಇದಕ್ಕೆ ಕಾರಣ ಆಕೆಯ ಗರ್ಭಾವಸ್ಥೆ ಎಂದು ನಂಬಲಾಗಿದೆ.

kajal aggarwal and husband

ಕಾಜಲ್ ಅಗರ್ವಾಲ್ ಅವರ ಸಹೋದರಿ ನಿಶಾ ಕೆಲವು ತಿಂಗಳ ಹಿಂದೆ  ಚಿಕ್ಕಮ್ಮನಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಕಾಜಲ್ ಶೀಘ್ರದಲ್ಲೇ ಮಗುವನ್ನು ಹೊಂದಬೇಕೆಂದು ನಾನು ಭಾವಿಸುತ್ತೇನೆ ಮತ್ತು ಅದರ ಹಿಂದೆ ನನ್ನದೇ ಆದ ವೈಯಕ್ತಿಕ ಕಾರಣವಿದೆ. ಮದುವೆಯ ಸಮಯದಿಂದ ನಾನು ಅವಳಿಗೆ ಇದನ್ನು ಹೇಳುತ್ತಿದ್ದೇನೆ. ಏಕೆಂದರೆ ಅವರು ಲೇಟ್‌ ಮಾಡಿದರೆ, ವಯಸ್ಸಿನ ಅಂತರದಿಂದಾಗಿ ನನ್ನ ಮಗ ಅವರ ಮಗುವಿನ ಜೊತೆ ಬೆರೆಯಲು ಸಾಧ್ಯವಾಗುವುದಿಲ್ಲ,' ಎಂದು ಸಂದರ್ಶನವೊಂದರಲ್ಲಿ ನಿಶಾ ಹೇಳಿದ್ದರು.

ಕಾಜಲ್ ಅಗರ್ವಾಲ್ ಅವರ ಪತಿ ಗೌತಮ್ ಕಿಚ್ಲೂ ವೃತ್ತಿಯಲ್ಲಿ ಉದ್ಯಮಿ ಮತ್ತು ಡಿಸೆರ್ನ್ ಲಿವಿಂಗ್ ಡಿಸೈನ್ ಶಾಪ್‌ನ ಸ್ಥಾಪಕ ಮತ್ತು ಒಳಾಂಗಣ ವಿನ್ಯಾಸಕಾರ. ಮನೆಯ ವಿನ್ಯಾಸದ ಹೊರತಾಗಿ, ಅವರ ಕಂಪನಿಯು ಪೀಠೋಪಕರಣಗಳು, ಅಲಂಕಾರಿಕ ವಸ್ತುಗಳು, ವರ್ಣಚಿತ್ರಗಳು ಮತ್ತು ಇತರ ಗೃಹೋಪಯೋಗಿ ವಸ್ತುಗಳನ್ನು ಮಾರುತ್ತಾರೆ.

ಗೌತಮ್ ಮತ್ತು ನಾನು ಪರಸ್ಪರ 3 ವರ್ಷಗಳ ಕಾಲ ಡೇಟಿಂಗ್ ಮಾಡಿದ್ದೇವೆ. ಸ್ನೇಹಿತರಾಗಿ, ನಾವು ಪ್ರತಿ ಹಂತದಲ್ಲೂ ಒಬ್ಬರಿಗೊಬ್ಬರು ಜೊತೆಯಾಗಿದ್ದೆವು. ಪರಸ್ಪರ ಅರ್ಥ ಬಹಳಷ್ಟು ಮಾಡಿಕೊಂಡಿದ್ಧೇವೆ ಎಂದು ಕಾಜಲ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಮದುವೆಯ ಘೋಷಣೆಯ ನಂತರ, ಮೊದಲ ಬಾರಿಗೆ ದಸರಾ ಪೂಜೆಯ ಸಮಯದಲ್ಲಿ, ಕಾಜಲ್ ಅಗರ್‌ವಾಲ್ ಗೌತಮ್ ಕಿಚ್ಲುವನ್ನು ಜನರಿಗೆ ಪರಿಚಯಿಸಿದರು.

ಕಾಜಲ್ ಕಳೆದ 16 ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಕ್ಯು ಹೋ ಗಯಾ ನಾ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಇದರ ನಂತರ ಅವರು ದಕ್ಷಿಣದ ಸಿನಿಮಾ ಕಡೆಗೆ ತಿರುಗಿದರು. ದಕ್ಷಿಣದ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿರುವ ಇವರು ಬಾಲಿವುಡ್‌ನಲ್ಲೂ ಫೇಮಸ್‌ ಆಗಿದ್ದಾರೆ.  

ಸಿಂಘಮ್ ಚಿತ್ರದಲ್ಲಿ ಅಜಯ್ ದೇವಗನ್ ಎದುರು ಕಾಜಲ್ ಅಗರ್ವಾಲ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿನ ಅವರ ನಟನೆ ಪ್ರೇಕ್ಷಕರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಸಿಂಗಮ್ ಹೊರತಾಗಿ, ಕಾಜಲ್ ಹಿಂದಿ 26 ವಿಶೇಷ ಚಿತ್ರ, ದೋ ಲಾಫ್ಜೋನ್ ಕಿ ಕಹಾನಿ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

Latest Videos

click me!