daali dhananjaya
ನಟ ರಾಕ್ಷಸ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದು, ಕರೆಯೊಲೆ ಹಂಚುತ್ತಿದ್ದಾರೆ. ಭಾವಿ ಪತ್ನಿ ಧನ್ಯತಾ ಜೊತೆಯಲ್ಲಿಯೇ ತೆರಳಿ ಆಪ್ತರಿಗೆ ಆಮಂತ್ರಣ ಪತ್ರಿಕೆ ನೀಡುವ ಮೂಲಕ ಮದುವೆಗೆ ಆಹ್ವಾನಿಸುತ್ತಿದ್ದಾರೆ.
ಇಂದು ಮೈಸೂರಿನ ಚಾಮುಂಡಿ ದೇಗುಲಕ್ಕೆ ಭೇಟಿ ನೀಡಿರುವ ಧನಂಜಯ್ ಮತ್ತು ಧನ್ಯತಾ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಸ್ಥಾನಕ್ಕೆ ಭೇಟಿ ನೀಡಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗತ್ತಿದೆ.
ಕೆಲ ದಿನಗಳ ಹಿಂದೆಯಷ್ಟೇ ಮಾಜಿ ಪ್ರಧಾನಿಗಳಾದ ಹೆಚ್‌ಡಿ ದೇವೇಗೌಡರನ್ನ ಭೇಟಿಯಾಗಿ ಧನಂಜಯ್-ಧನ್ಯತಾ ಆಶೀರ್ವಾದ ಪಡೆದುಕೊಂಡು ಮೈಸೂರಿನಲ್ಲಿ ನಡೆಯುವ ಮದುವೆಗೆ ಆಹ್ವಾನಿಸಿದ್ದರು.
ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಡಿಸಿಎಂ ಡಿಕೆ ಶಿವಕುಮಾರ್, ಮಾಜಿ ಸಂಸದ ಡಿಕೆ ಸುರೇಶ್, ಹಿರಿಯ ನಟ ಶಿವರಾಜ್‌ಕುಮಾರ್ ಸೇರಿದಂತೆ ಹಲವು ಗಣ್ಯರ ನಿವಾಸಕ್ಕೆ ಧನಂಜಯ್ ಮತ್ತು ಧನ್ಯತಾ ಜೊತೆಯಾಗಿ ತೆರಳಿ ಮದುವೆ ಆಹ್ವಾನಿಸುತ್ತಿದ್ದಾರೆ.
ಇತ್ತೀಚೆಗೆ ಧನಂಜಯ್ ಅಭಿಮಾನಿಯೊಬ್ಬರು ತಮ್ಮ ಆಟೋದ ಮೇಲೆ ಹಾಕಿಸಿಕೊಂಡಿರುವ ಫೋಟೋ ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಧನಂಜಯ್-ಧನ್ಯತಾ ಫೋಟೋ ಹಾಕಿ, ಪ್ರೀತಿ ಅಂದ್ರೆ ನೆನಪಾದಾಗ ಬರೋದಲ್ಲ, ಪ್ರಾಣ ಇರೋವರೆಗೂ ಅವರ ನೆನಪಲ್ಲೇ ಬದುಕೋದು ಎಂಬ ಸಾಲುಗಳನ್ನು ಬರೆದುಕೊಂಡಿದ್ದರು.
ಒಟ್ಟಿನಲ್ಲಿ ಜೋಡಿ ಜೊತೆಯಾಗಿ ಮದುವೆ ಪತ್ರಿಕೆ ಹಂಚಿಕೆ ಮಾಡುತ್ತಿದ್ದು, ಎಲ್ಲರನ್ನು ಆಹ್ವಾನಿಸುತ್ತಿದ್ದಾರೆ. ಧನಂಜಯ್ ಸ್ವಗ್ರಾಮದಲ್ಲಿಯೇ ಕುಟುಂಬಸ್ಥರ ಸಮ್ಮುಖದದಲ್ಲಿ ಇಬ್ಬರ ನಿಶ್ಚಿತಾರ್ಥ ತುಂಬಾ ಸರಳವಾಗಿ ನೆರವೇರಿತ್ತು. ಇಷ್ಟು ಮಾತ್ರವಲ್ಲ ಮದುವೆ ಪತ್ರಿಕೆಯೂ ತುಂಬಾ ಸಿಂಪಲ್ ಮತ್ತು ಅಚ್ಚುಕಟ್ಟಾಗಿದೆ.
ಧನಂಜಯ್ ಮತ್ತು ಧನ್ಯತಾ ಮದುವೆ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗದಲ್ಲಿರುವ ವಸ್ತು ಪ್ರದರ್ಶನ ಮೈದಾನದಲ್ಲಿ 2025 ಫೆಬ್ರವರಿ 15 ಮತ್ತು 16ರಂದು ನಡೆಯಲಿದೆ. ನೆಚ್ಚಿನ ನಟನ ಮದುವೆಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಧನಂಜಯ್ ಆಮಂತ್ರಣ ಪತ್ರಿಕೆ
ಪ್ರೀತಿಯ ಬಂಧು ಮಿತ್ರರೇ,
ನಿಮ್ಮ ಪ್ರೀತಿಯ ಧನಂಜಯ ಹಾಗೂ ಧನ್ಯತ ಮಾಡುವ ನಮಸ್ಕಾರಗಳು. ನಾವು ಖುಷಿಯಾಗಿದ್ದೇವೆ, ನಮ್ಮಿ ವಿಷಯ ತಿಳಿದು ನೀವು ಸಂಭ್ರಮಿಸಿದ್ದು ನಮ್ಮ ಖುಷಿಯನ್ನು ಇಮ್ಮಡಿಗೊಳಿಸಿದೆ. ನಮ್ಮಿ ಮದುವೆ ಸಂಭ್ರಮವನ್ನು ನಿಮ್ಮೆಲ್ಲರ ಜೊತೆಗೂಡಿ ಆಚರಿಸಬೇಕು ಎಂಬ ಮಾಹದಾಸೆಯಿಂದ ಈ ಪತ್ರ ಬರೆಯುತ್ತಿದ್ದೇನೆ. ತಾವು ಎಲ್ಲಿದ್ದರೂ, ಜಗದ ಯಾವ ಮೂಲೆಯಲ್ಲಿದ್ದರೂ, ಕುಟುಂಬ ಸಮೇತರಾಗಿ ಬಂದು ನಮ್ಮಿ ಸಮಾಗಮಕ್ಕೆ ನೀವು ಆಶೀರ್ವಾದ ಮಾಡಬೇಕು. ಪ್ರೇಮದ ಭರವಸೆಯಲ್ಲಿ ಬಾಳಿನ ಬೆಳಕು ನಮ್ಮ ಪ್ರೀತಿ ದೀಪದ ಪ್ರಕಾಶಕ್ಕೆ ಸಾಕ್ಷಿಯಾಗಬೇಕು ಎಂಬುದು ನಮ್ಮ ಆಶಯ.
ಮತ್ತೆಲ್ಲಾ ಕ್ಷೇಮವಷ್ಟೇ!
ನಿಮ್ಮನ್ನು ಸ್ವಾಗತಿಸುವ ನಿರೀಕ್ಷೆಯಲ್ಲಿ
ಧನಂಜಯ-ಧನ್ಯತ