ಕೋಲ್ಕತ್ತಾ(ಜ. 16) ಹಿಂದೂ ನಂಬಿಕೆ ಅವಮಾನ ಮಾಡಿ ನಟಿಯೊಬ್ಬರು ಸಂಕಷ್ಟಕ್ಕೆ ಸಿಲುಕಿದ್ದು ಕೊನೆಗೆ ಕ್ಷಮೆ ಕೇಳಿದ್ದಾರೆ. ತನ್ನ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದು ವಿಚಾರ ಇಲ್ಲಿಗೆ ಬಿಟ್ಟುಬಿಡಿ ಎಂದು ಕೇಳಿಕೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಶಿವಲಿಂಗ ವನ್ನು ನಟಿ ಅವಮಾನಿಸಿದ್ದರು ಎಂಬ ಕೂಗು ಕೇಳಿಬಂದಿತ್ತು. ಹಿಂದೂ ದೇವರುಗಳು ಪ್ರಯೋಜನವಿಲ್ಲ ಎಂಬ ಅರ್ಥದಲ್ಲಿ ಟ್ವಿಟ್ ಮಾಡಿದ್ದರು ಎಂಬ ದೂರು ಬಂದಿದ್ದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದರು. ಕಾಂಡೋಮ್ ಚಿತ್ರ ವನ್ನು ಟ್ವಿಟ್ ಮಾಡಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು. ಮೊದಲು ನನ್ನ ಖಾತೆ ಹ್ಯಾಕ್ ಮಾಡಲಾಗಿತ್ತು ಎಂದ ನಟಿ ಜನರಿಂದ ಟೀಕೆಗಳ ಸುರಿಮಳೆ ಬಂದ ಮೇಲೆ ಕ್ಷಮೆ ಕೇಳುವ ಕೆಲಸ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸ್ಕ್ರೀನ್ ಶಾಟ್ ವೈರಲ್ ಆಗಿದ್ದು ನೀವು ಒಬ್ಬರು ಹಿಂದೂ ಆಗಿ ಇಂಥ ಕೆಲಸ ಮಾಡಬಹುದೆ? ಎಂದು ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದ್ದಾರೆ. ಬೆಂಗಾಳಿ ನಟಿ ಬೆಂಗಾಳಿ ಸಿನಿಮಾ ಸೋರಿದಂತೆ ಅನೇಕ ಕಿರುಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಾಂಡೋಮ್ ಮತ್ತು ಶಿವಲಿಂಗವನ್ನು ಒಂದೇ ಸಂದರ್ಭದಲ್ಲಿ ಟ್ವೀಟ್ ಮಾಡಿದ್ದು ಹಳೆಯ ಟ್ವೀಟ್ ಎಂದು ತಪ್ಪಿಕೊಳ್ಳುವ ಯತ್ನವನ್ನು ನಟಿ ಮಾಡಿದ್ದರು. ಇದು ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸ, ಕ್ರಿಮಿನಲ್ ಅಪರಾಧ ಆಗುತ್ತದೆ ನಿಮಗೆ ಗೊತ್ತಿದೆಯಾ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಸದ್ಯಕ್ಕೆ ನಟಿ ಮತ್ತೆ ಸೋಶಿಯಲ್ ಮೀಡಿಯಾ ಮುಖೇನ ಮುಂದೆ ಬಂದು ಕ್ಷಮೆ ಕೇಳಿದ್ದು ಒಂದು ಅಂತ್ಯ ಕಂಡಿದೆ. Condom over Shivling Netizens slam actress Sayoni Ghosh for desecrating Hindu symbol, expose her dubious ‘account hacked’ claim ಹಿಂದೂ ಭಾವನೆಗೆ ನಟಿಯಿಂದ ಧಕ್ಕೆ, ಹ್ಯಾಕ್ ಆಗಿದೆ ಎಂದ ಸುಂದರಿ