ದೇಹದ ಬಗ್ಗೆ ಕಾಮೆಂಟ್‌ ಮಾಡೋದು ಕೀಳು ಮನಸ್ಥಿತಿ: ರಾಷ್ಟ್ರಪ್ರಶಸ್ತಿ ವಿಜೇತ ನಟಿ ನಿತ್ಯಾ ಮೆನನ್

First Published | Oct 25, 2024, 6:05 PM IST

ರಾಷ್ಟ್ರಪ್ರಶಸ್ತಿ ವಿಜೇತ ನಟಿ ನಿತ್ಯಾ ಮೆನನ್ ಬಾಡಿ ಶೇಮಿಂಗ್‌ ಬಗೆಗಿನ ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಕಲಾವಿದರಿರಲಿ, ಇತರರೇ ಆಗಿರಲಿ ಅವರ ದೈಹಿಕತೆಯನ್ನಿಟ್ಟು ಕಾಮೆಂಟ್‌ ಮಾಡೋದು ಕೀಳು ಮನಸ್ಥಿತಿ. ಆದರೂ ಜನ ಹೀಗೆ ನೋಯಿಸುತ್ತಾರೆ’ ಎಂದು ರಾಷ್ಟ್ರಪ್ರಶಸ್ತಿ ವಿಜೇತ ನಟಿ ನಿತ್ಯಾ ಮೆನನ್ ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ನಟಿ ನಿತ್ಯಾ ಮೆನನ್  ಅವರು, ನಾನು ಸಿನಿಮಾ ರಂಗಕ್ಕೆ ಕಾಲಿಟ್ಟ ಆರಂಭದಲ್ಲಿ ತೆಲುಗು ಸಿನಿಮಾವೊಂದರಲ್ಲಿ ನಟಿಸಲು ಹೋಗಿದ್ದೆ. 
 

Tap to resize

ಅಲ್ಲಿ ನನ್ನ ಗುಂಗುರು ಕೂದಲಿನ ಬಗ್ಗೆ, ದಪ್ಪ, ಕುಳ್ಳ ದೇಹಪ್ರಕೃತಿಯ ಬಗ್ಗೆ ಟೀಕೆ ಮಾಡಿ ಮಾತಾಡಿದ್ದರು. ಅವರ ಕಾಮೆಂಟ್‌ಗೆ ತಲೆಕೆಡಿಸಿಕೊಂಡು ನಾನು ನನ್ನ ಐಡೆಂಟಿಟಿಯನ್ನು ಬದಲಾಯಿಸಲಿಲ್ಲ. ಅದೇ ಇಂದಿಗೂ ಉಳಿದುಕೊಂಡಿದೆ. 

ನನ್ನೊಳಗಿನ ಕಲಾವಿದೆಯೇ ಜಯಿಸಿದ್ದಾಳೆ ಎಂದು ಹೇಳಿದ್ದಾರೆ. ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಬೆಂಗಳೂರಿನ ಕನ್ನಡದ ಹುಡುಗಿ ನಿತ್ಯಾ ಸದ್ಯ ಧನುಷ್ ಜೊತೆಗೆ ‘ಇಡ್ಲಿ ಕಡಾಯ್‌’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
 

ಬಣ್ಣದ ಬದುಕಿಗೆ ಬಂದ ಮೇಲೆ ಏನಾದರೂ ಬದಲಾವಣೆ ಆಗಿದೆಯಾ ಎಂಬ ಪ್ರಶ್ನೆಗೆ, ನಿತ್ಯಾ,  ನಾವು ಹೇಗೆ ಚಿಕ್ಕ ವಯಸ್ಸಿನಲ್ಲಿ ಇರುತ್ತೇವೆಯೋ ಹಾಗೆಯೇ ಇರುತ್ತೇವೆ. 

ನಮ್ಮ ಕೈಗೆ ದುಡ್ಡು ಬಂದಾಗ, ಹೆಸರು ಸಿಕ್ಕಾಗ ಒಳಗಡೆ ಏನು ಇರುತ್ತೋ ಅದು ಹೊರಗಡೆ ಬರುತ್ತದೆ. ಯಾರೂ ಚೇಂಜ್​ ಆಗಲ್ಲ. ರಿಯಾಲಿಟಿ ಹೊರಗೆ ಬರುವುದು ದುಡ್ಡು, ಹೆಸರು ಬಂದಾಗ ಎಂದಿದ್ದಾರೆ. 

Latest Videos

click me!