ತೆಲಗು ಸಿನಿ ಇಂಡಸ್ಟ್ರಿಯಲ್ಲಿ ಕನ್ನಡತಿಯರ ಜಡೆ ಜಗಳ ಕಡಿಮೆ ಆಗಿದ್ಯಾ?

First Published | Feb 25, 2024, 12:52 PM IST

ತೆಲಗು ಸಿನಿಮಾ ಇಂಡಸ್ಟ್ರಿಯನ್ನು ಆಳುತ್ತಿರುವುದು ಕನ್ನಡದ ನಟಿಯರು. ಒಂದು ಕಡೆ ಕರಾವಳಿ ಬೆಡಗಿ ಪೂಜೆ ಹೆಗ್ಡೆ, ಮತ್ತೊಂದೆಡೆ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ, ಎಲ್ಲರ ನಡುವೆ ಸೈಲಾಂಟಾಗಿ ತಮ್ಮ ಪ್ರತಿಭೆ ಪ್ರದರ್ಶಿಸುತ್ತಿರುವ ಕಿಸ್ ಬೆಡಗಿ ಶ್ರೀಲೀಲಾ. ಆಗಾಗ ಈ ಮೂವರ ನಡುವಿನ ಆಂತರಿಕ ಜಗಳ ಪ್ರದರ್ಶಿತವಾಗುತ್ತಿತ್ತು. ಆದರೆ ಈಗ ಎಲ್ಲವೂ ಸರಿಯಾಗಿದ್ಯಾ? 

ಗುಂಟೂರ್ ಖಾರಂನಲ್ಲಿ ಪೂಜೆ ಹೆಗ್ಡೆ ಜಾಗದಲ್ಲಿ ಶ್ರೀಲೀಲಾ ಹಾಕಿದ್ದಕ್ಕೆ ದೊಡ್ಡ ಇಶ್ಯೂ ಆಗಿತ್ತು. ಕರಾವಳಿ ಬೆಡಗಿ ಹಾಗೂ ಕಿಸ್ ಬೆಡಗಿ ಯಾರಿಗೂ ಗೊತ್ತಿಲ್ಲದಂತೆ ಸಣ್ಣದಾಗಿ ಕೋಲ್ಡ್ ವಾರ್ ಆಗಿತ್ತು. 

ಅಷ್ಟೇ ಅಲ್ಲ ಮತ್ತೊಂದು ಚಿತ್ರ ವೆಂಕಿ ಕುಡುಮಲದಲ್ಲಿಯೂ ಕೊಡಗಿನ ಕುವರಿ, ಕಿರಿಕ್ ಪಾರ್ಟಿ ಬ್ಯೂಟಿ ರಶ್ಮಿಕಾ ಮಂದಣ್ಣನ ಬದಲು ಶ್ರೀಲೀಲಾಗೆ ಮಣೆ ಹಾಕಿದ್ದೂ ಕನ್ನಡತಿಯ ನಡುವಿನ ಕೋಲ್ಡ್ ವಾರ್‌ಗೆ ಎಣೆ ಮಾಡಿಕೊಟ್ಟಿತ್ತು. 

Tap to resize

ಒಟ್ಟಿನಲ್ಲಿ ತೆಲಗು ಚಿತ್ರರಂಗವನ್ನಾಗಲಿ, ಕಿರುತೆರೆಯನ್ನಾಗಲಿ ಆಳುತ್ತಿರುವುದು ಕನ್ನಡದ ನಟಿಯರೇ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ, ಶ್ರೀಲೀಲಾ, ಪೂಜಾ ಹೆಗ್ಡೆ ಹಾಗೂ ರಶ್ಮಿಕಾ ಮಂದಣ್ಣ ಮಾತ್ರ ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ. 

ಅವರು ಕೊಟ್ಟ ಸೂಪರ್ ಹಿಟ್ ಚಿತ್ರಗಳು ಮಾತ್ರ ಇದಕ್ಕೆ ಕಾರಣವಲ್ಲ. ಆಗಾಗ ಈ ನಟಿಯರ ನಡುವೆ ನಡೆಯುವ ಕೋಲ್ಡ್ ವಾರ್ ಸಹ ಸದ್ದು ಮಾಡುತ್ತಲೇ ಇರುತ್ತವೆ. ತಾ ಮುಂದು, ನಾ ಮುಂದು ಅಂತ ಈ ನಟಿಯರು ಕಿತ್ತಾಡಿಕೊಳ್ಳುತ್ತಿರುತ್ತಾರೆ. 

ಆದರೆ, ನಿಜವಾಗಿ ಹೇಳಬೇಕೆಂದರೆ ಯಾರು, ಯಾರಿಗೂ ಕಡಿಮೆ ಇಲ್ಲ. ಮೂವರ ಚಿತ್ರಗಳು ಟಾಲಿವುಡ್‌ನ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದರಲ್ಲಿ ಅನುಮಾನವೇ ಇಲ್ಲ. 

ಪೂಜೆ ಹೆಗ್ಡೆ ಅತ್ತ ಬಾಲಿವುಡ್ ಕಡೆ ಮುಖ ಮಾಡಿದ್ದಕ್ಕೆ, ತೆಲಗಿನಲ್ಲಿ ಸ್ವಲ್ಪ ಡಿಮ್ಯಾಂಡ್ ಕಡಿಮೆ ಮಾಡಿಕೊಂಡ್ರೋ, ಅಥವಾ ತೆಲಗು ಚಿತ್ರರಂಗಕ್ಕೆ ಪೂಜಾ ಬೇಡವಾಯಯಿತೋ ಗೊತ್ತಿಲ್ಲ. ಒಟ್ಟಿನಲ್ಲಿ ಪೂಜಾ ಸ್ಥಿತಿ ಮಾತ್ರ ಅತ್ತ ಅಲ್ಲಿಯೂ ಇಲ್ಲ, ಇಲ್ಲಿಯೂ ಇಲ್ಲ ಎನ್ನುವಂತಾಗಿದೆ. 

ಹಾಗೆ ನೋಡಿದರೆ ರಶ್ಮಿಕಾ ಮಂದಣ್ಣ ಸಹ ಬಾಲಿವುಡ್ ಕಡೆ ಮುಖ ಮಾಡಿದ್ದು ಸುಳ್ಳಲ್ಲ. ರಣಬೀರ್ ಕಪೂರ್ ಜೊತೆ ಆ್ಯನಿಮಲ್ ಚಿತ್ರದಲ್ಲಿ ನಟಿಸಿ, ಬಾಲಿವುಡ್‌ನಲ್ಲಿಯೂ ತಮ್ಮದೇ ಛಾಪು ಮೂಡಿಸಿದರೂ, ಸ್ಯಾಂಡಲ್‌ವುಡ್ ನಂಟು ಬಿಟ್ಟಂತೆ, ಕಾಲಿವುಡ್ ನಂಟು ಬಿಟ್ಟು ಕೊಡಲಿಲ್ಲ. 

ಯಾರ ಭವಿಷ್ಯ ಎಲ್ಲಿ ಹೇಗಿರುತ್ತೆ ಅಂತ ಹಣೆ ಬರಹ ಬರೆಯೋ ಆ ಬ್ರಹ್ಮನಿಗೆ ಮಾತ್ರ ಗೊತ್ತು ಅನ್ನೋ ಮಾತಿದೆ. ಆದ್ರೆ ಬಣ್ಣದ ಜಗತ್ತಿನ ಸ್ಟಾರ್ ಸೆಲೆಬ್ರೆಟಿಗಳ ಸಿನಿ ಭವಿಷ್ಯ (prediction) ಗೊತ್ತಾಗೋದು ಸೆಲೆಬ್ರೆಟಿ ಜ್ಯೋತಿಷಿ ವೇಣು ಸ್ವಾಮಿಗೆ ಮಾತ್ರ ಅನ್ನಿಸುತ್ತೆ. ಆಗಾಗ ನಟ ನಟಿಯರ ಭವಿಷ್ಯ ಹೇಳಿ ಚಿತ್ರರಂಗದಲ್ಲಿ ಭಾರಿ ಸುದ್ದಿಯಾಗುತ್ತಿರುತ್ತಾರೆ. ಕನ್ನಡತಿ, ಕಿಸ್ ಬ್ಯೂಟಿ ಶ್ರೀಲೀಲಾ(Srileela) ದಕ್ಷಿಣ ಸಿನಿ ರಂಗದ ಯುವರಾಣಿ ಆಗ್ತಾರೆ ಅಂತ ಭವಿಷ್ಯಾ ನುಡಿದಿದ್ದರು ಸ್ಟಾರ್ ಜ್ಯೋತಿಷಿ ವೇಣು ಸ್ವಾಮಿ. ಆಗಿಂದಲೇ ಲೀಲಾ ಲಕ್ ಕುದುರಿದ್ದು ಸುಳ್ಳಲ್ಲ. 

ಒಟ್ಟಿನಲ್ಲಿ ರಶ್ಮಿಕಾ ಮಂದಣ್ಣ ಮತ್ತು ಲೀಲಾ ತಮ್ಮ ಜಾಗವನ್ನು ಎಲ್ಲೆಡೆ ಗಟ್ಟಿ ಮಾಡಿಕೊಂಡಿದ್ದಾರೆ. ಆದರೆ, ಪೂಜಾ ಹೆಗ್ಡೆ ಮಾತ್ರ ಸೈಡ್ ಲೈನ್ ಆಗುತ್ತಿರುವುದು ಮಾತ್ರ ಸುಳ್ಳಲ್ಲ. 

ಒಟ್ಟಿನಲ್ಲಿ ಲೀಲಾ, ರಶ್ಮಿಕಾ ಮತ್ತು ಪೂಜಾ ಮಾತ್ರ ಅತ್ತ ಕಾಲಿವುಡ್‌ನಲ್ಲಿ ಹೆಸರು ಮಾಡಿದ್ದು ಸುಳ್ಳಲ್ಲ. ಇತ್ತೀಚೆಗೆ ಈ ಮೂವರ ನಡುವಿನ ಕೋಲ್ಡ್ ವಾರ್ ಸಹ ಸದ್ದು ಮಾಡುತ್ತಿಲ್ಲ. ನಿಮಗೇನಾದ್ರೂ ಈ ವಿಷಯ ಗೊತ್ತಾ? 

ಕಿಸ್, ಭರಾಟೆ, ಬೈ ಟು ಲವ್ ನಂಥ ಕೆಲವು ಚಿತ್ರಗಳಲ್ಲಿ ನಟಿಸಿದ ನಂತರ ಶ್ರೀಲೀಲಾ ಕನ್ನಡ ಯಾವ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿಲ್ಲ. ಅತ್ತ ರಶ್ಮಿಕಾ ಮಂದಮ್ಣರಿಗಂತೂ ಕನ್ನಡ ಚಿತ್ರಗಳಲ್ಲಿ ನಟಿಸಲು ಪುರುಸೊತ್ತೂ ಸಹ ಇಲ್ಲ. 

ಒಟ್ಟಿನಲ್ಲಿ ತೆಲಗು ಚಿತ್ರರಂಗವನ್ನು ಆಳುತ್ತಿರುವ ಕನ್ನಡದ ನಟಿಯರ ಬಗ್ಗೆ ಹೆಮ್ಮೆ ಪಡಬೇಕೋ, ಆಗಾಗ ಅವರು ಮಾಡಿಕೊಳ್ಳುವ ಕೋಲ್ಡ್‌ವಾರ್ ನಾಚಿಕೆ ಪಡಬೇಕೋ ಎನ್ನುವುದು ಮಾತ್ರ ಗೊತ್ತಾಗೋಲ್ಲ. 

Latest Videos

click me!