ವಿಶ್ವ ಮಹಿಳಾ ದಿನದ ಪ್ರಯುಕ್ತ ಮೆಗಾಸ್ಟಾರ್ ಚಿರಂಜೀವಿ ಸಂದರ್ಶನದಲ್ಲಿ ಭಾಗವಹಿಸಿದ್ದರು. ತಾಯಿ ಅಂಜನಮ್ಮ, ಸಹೋದರ ನಾಗಬಾಬು, ಸಹೋದರಿಯರಾದ ಮಾಧವಿ, ವಿಜಯ್ ದುರ್ಗಾ ಅವರೊಂದಿಗೆ ಚಿರಂಜೀವಿ ಈ ಸಂದರ್ಶನದಲ್ಲಿ ಭಾಗವಹಿಸಿದ್ದರು. ಅಂಜನಮ್ಮ ಮಕ್ಕಳನ್ನು ಹೇಗೆ ಬೆಳೆಸಿದರು, ಕಷ್ಟದಲ್ಲಿ ಏನೆಲ್ಲಾ ಸಲಹೆ ನೀಡಿದರು ಎಂಬ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.