ಚಿರಂಜೀವಿ ಯಾವುದೇ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಬಂದರು. ಆಗಲೇ ಎನ್‌ಟಿಆರ್, ಎಎನ್‌ಆರ್, ಕೃಷ್ಣ, ಕೃಷ್ಣಂರಾಜು, ಶೋಭನ್ ಬಾಬು ಮುಂತಾದ ದಿಗ್ಗಜರು ಚಿತ್ರರಂಗದಲ್ಲಿ ಮೆರೆಯುತ್ತಿದ್ದರು. ಅವರ ಪೈಪೋಟಿಯನ್ನು ಎದುರಿಸಿ ಚಿರಂಜೀವಿ ತಮ್ಮದೇ ಆದ ಛಾಪು ಮೂಡಿಸಿದರು. ನೃತ್ಯ ಮತ್ತು ಆಕ್ಷನ್‌ನಲ್ಲಿ ಪರಿಶ್ರಮಪಟ್ಟು ಯಶಸ್ಸು ಗಳಿಸಿದರು.