ಆದರೆ ಈಗ ಅಜ್ಜಿ (ಅಂಜನಾದೇವಿ) ತನಗೆ ಸಂಬಂಧಿಸಿದ ಎಲ್ಲಾ ಸಿನಿಮಾಗಳನ್ನು ನೋಡುತ್ತಾರೆ. ಅದೇ ಸಮಯದಲ್ಲಿ ಮತ್ತೊಂದು ಅದೃಷ್ಟ ಕೂಡ ಅವರಿಗೂ, ತಮಗೂ ಸಿಕ್ಕಿದೆ ಎಂದಿದ್ದಾರೆ. `ಆಚಾರ್ಯ` ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ ವಿಷಯ ಗೊತ್ತೇ ಇದೆ. ಒಂದೇ ಮೂವಿಯಲ್ಲಿ ಮಗನನ್ನು, ಮೊಮ್ಮಗನನ್ನು ನೋಡುವ ಅವಕಾಶ ಅಜ್ಜಿಗೆ ಸಿಕ್ಕಿದೆ ಎಂದು ಹೇಳಿದ್ದಾರೆ. ಆದರೆ ಅಜ್ಜಿಗೆ ಪೈಪೋಟಿ ಇರುತ್ತದೆ, ಅಮ್ಮ ಸುರೇಖಾ ಅವರನ್ನು ಆಟ ಆಡಿಸುತ್ತಿರುತ್ತಾರೆ ಎಂದು ಹೇಳಿದ್ದಾರೆ. ಏನ್ ಸುರೇಖಾ ನಮ್ಮವನು (ಚಿರಂಜೀವಿ) ನೋಡು ಹೇಗೆ ಮಾಡಿದ್ದಾನೆಂದು ದೊಡ್ಡದಾಗಿ ಹೇಳುತ್ತಾರಂತೆ. ಅಂತಹ ತುಂಟಾಟದ ಕೆಲಸಗಳನ್ನು ಮಾಡ್ತಾರೆ ಎಂದಿದ್ದಾರೆ, ಈ ಮೂವಿಯನ್ನು ಅಪ್ಪ, ಅಜ್ಜಿ, ಅಮ್ಮ, ನಾನು ಒಟ್ಟಿಗೆ ನೋಡಿದರೆ ಮಜಾ ಇರುತ್ತದೆ ಎಂದು ಹೇಳಿದ್ದಾರೆ.