ಆದರೆ ವೃತ್ತಿಜೀವನದ ಆರಂಭದಲ್ಲಿ ಸುಧಾಕರ್ ನಾಯಕನಾಗಿ, ಖಳನಾಯಕನಾಗಿ ಕೂಡ ನಟಿಸಿದ್ದಾರೆ. ತಮಿಳಿನಲ್ಲಿ ಅನೇಕ ಚಿತ್ರಗಳಲ್ಲಿ ಸುಧಾಕರ್ ನಾಯಕನಾಗಿ ನಟಿಸಿದ್ದಾರೆ. ತಮಿಳಿನಲ್ಲಿ ಸುಧಾಕರ್ ಎಂಟ್ರಿ ಕೊಟ್ಟಿದ್ದು ಹೀರೋ ಆಗಿಯೇ. ಅಂದಿನ ಸ್ಟಾರ್ ನಾಯಕಿ ರಾಧಿಕಾ ಜೊತೆ ಸುಧಾಕರ್ ಬರೋಬ್ಬರಿ 13 ಚಿತ್ರಗಳಲ್ಲಿ ನಟಿಸಿದ್ದಾರೆ. ಅಷ್ಟು ಚೆನ್ನಾಗಿ ಇಬ್ಬರ ನಡುವೆ ಕೆಮಿಸ್ಟ್ರಿ ಹೊಂದಾಣಿಕೆಯಾಯಿತು. ಆದರೆ ಇವರಿಬ್ಬರ ಪರಿಚಯವೇ ದೊಡ್ಡ ಜಗಳದೊಂದಿಗೆ ಪ್ರಾರಂಭವಾಯಿತು.