ಜೀವನದಲ್ಲಿ ಖುಷಿಯಾಗಿರಲು ಮದ್ವೆಯೊಂದೇ ಮಾರ್ಗವಲ್ಲವೆಂದು ತೋರಿಸಿಕೊಟ್ಟ ಸೆಲೆಬ್ರಿಟಿಗಳು!

First Published | Nov 26, 2024, 10:51 AM IST

ಬಾಲಿವುಡ್ ನ ಈ ಜನಪ್ರಿಯ ಸೆಲೆಬ್ರಿಟಿಗಳ ವಯಸ್ಸು 40 ಅಥವಾ 50 ಕಳೆದಿದೆ, ಆದರೂ ಇನ್ನೂ ಮದ್ವೆಯಾಗಿಲ್ಲ, ಹಾಗಂತ ಇವರ ಜೀವನ ಏನೂ ಬೋರಿಂಗ್ ಆಗಿಲ್ಲ, ಸಂತೋಷವಾಗಿ ಜೀವನ ನಡೆಸ್ತಿದ್ದಾರೆ ಈ ಸೆಲೆಬ್ರಿಟಿಗಳು. 
 

ಬಾಲಿವುಡ್ ತಾರೆಯರು (bollywood celebrities) ತಮ್ಮ ವೃತ್ತಿಪರ ಜೀವನ ಮತ್ತು ಅವರ ಪ್ರೀತಿಯ ಜೀವನದ ಬಗ್ಗೆ ಸಾಕಷ್ಟು ಸುದ್ದಿಯಲ್ಲಿರುತ್ತಾರೆ. ಕೆಲವರು ತಮ್ಮ ಮದ್ವೆಯಿಂದ ಸುದ್ದಿಯಾಗುತ್ತಿದ್ದರೆ, ಇನ್ನೂ ಕೆಲವರು ಮದುವೆಯಾಗದೇನೆ ಸುದ್ದಿಯಲ್ಲಿರುತ್ತಾರೆ. ಹೌದು, ಬಾಲಿವುಡ್ ನಲ್ಲಿ ಕೆಲವು ನಟ ನಟಿಯರು ಇನ್ನೂ ಸಹ ಮದ್ವೆಯಾಗದೇ ಇರುವ ಹಲವು ಸೆಲೆಬ್ರಿಟಿಗಳಿದ್ದಾರೆ, ಬನ್ನಿ ಅವರ ಬಗ್ಗೆ ನೋಡೋಣ. 
 

ಸಲ್ಮಾನ್ ಖಾನ್ (Salman Khan)
ಬಾಲಿವುಡ್ ನ ಅತ್ಯಂತ ಜನಪ್ರಿಯ ಬ್ಯಾಚುಲರ್ ಸಲ್ಮಾನ್ ಖಾನ್ ಗೆ 58 ವರ್ಷ. ಸಲ್ಮಾನ್ ಅನೇಕ ನಟಿಯರೊಂದಿಗೆ ಸಂಬಂಧ ಹೊಂದಿದ್ದರೂ, ಆದರೆ ಇಲ್ಲಿವರೆಗೆ ನಟ ಯಾರ ಜೊತೆಗೂ ಮದ್ವೆ ಆಗಿಯೇ ಇಲ್ಲ.

Tap to resize

ಟಬು (Tabu)
ನಾಗಾರ್ಜುನ ಅವರೊಂದಿಗೆ ದೀರ್ಘಕಾಲದ ಸಂಬಂಧದಲ್ಲಿದ್ದ ಟಬು ಇನ್ನೂ ಮದುವೆಯಾಗಿಲ್ಲ. 51 ವರ್ಷದ ಟಬು ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ.
 

ಕರಣ್ ಜೋಹರ್ (Karan Johar)
50ರ ಹರೆಯದ ಜನಪ್ರಿಯ ಚಿತ್ರ ನಿರ್ದೇಶಕ ಕರಣ್ ಜೋಹರ್ ಇನ್ನೂ ಮದುವೆಯಾಗಿಲ್ಲ. ಆದರೆ ಕರಣ್ ಬಾಡಿಗೆ ತಾಯ್ತನದ ಮೂಲಕ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. 

ತುಷಾರ್ ಕಪೂರ್ (Tusshar Kapoor)
2016 ರಲ್ಲಿ ಬಾಡಿಗೆ ತಾಯ್ತನದ ಮೂಲಕ ಒಬ್ಬ ಮಗನ ತಂದೆಯಾಗಿರುವ ತುಷಾರ್ ಕಪೂರ್ ಇನ್ನೂ ಮದುವೆಯಾಗಿಲ್ಲ.  47 ವರ್ಷದ ತುಷಾರ್ ತನ್ನ ಮಗನೊಂದಿಗೆ ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ.
 

ಅಮೀಷಾ ಪಟೇಲ್ (Ameesha Patel)
48 ವರ್ಷದ ಅಮೀಷಾ ಪಟೇಲ್ ಮತ್ತು ವಿಕ್ರಮ್ ಭಟ್ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ, ಆದರೆ ಅವರು ಇನ್ನೂ ಮದುವೆಯಾಗಲಿಲ್ಲ. ತಾನು ಸಿಂಗಲ್ ಆಗಿ ತುಂಬಾನೆ ಖುಷಿಯಾಗಿದ್ದೇನೆ ಎನ್ನುತ್ತಾರೆ ಅಮೀಷಾ. 

ಅಕ್ಷಯ್ ಖನ್ನಾ (Akshaye Khanna)
48 ವರ್ಷದ ನಟ ಅಕ್ಷಯ್ ಖನ್ನಾ ಕೂಡ ಮದುವೆಯಾಗಿಲ್ಲ. ಆದಾಗ್ಯೂ, ಕರಿಷ್ಮಾ ಕಪೂರ್ ಅವರೊಂದಿಗಿನ ಅವರ ಸಂಬಂಧದ ಬಗ್ಗೆ  ಕೂಡ ಭಾರಿ ಚರ್ಚೆಯಾಗಿತ್ತು. 

ಉದಯ್ ಚೋಪ್ರಾ (Uday Chopra)
ಖ್ಯಾತ ಚಲನಚಿತ್ರ ನಿರ್ಮಾಪಕ ಯಶ್ ಚೋಪ್ರಾ ಅವರ ಕಿರಿಯ ಪುತ್ರ ಉದಯ್ ಚೋಪ್ರಾ 2000 ರಲ್ಲಿ 'ಮೊಹಬ್ಬತೇನ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 51 ವರ್ಷದ ಉದಯ್ ಇನ್ನೂ ಮದುವೆಯಾಗಿಲ್ಲ.   
 

ದಿವ್ಯಾ ದತ್ತಾ (Divya Dutta)
ದಿವ್ಯಾ ದತ್ತಾ 2005 ರಲ್ಲಿ ಲೆಫ್ಟಿನೆಂಟ್ ಕಮಾಂಡರ್ ಸಂದೀಪ್ ಶೆರ್ಗಿಲ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು, ಆದರೆ ನಂತರ ಅವರ ಸಂಬಂಧ ಮುರಿದುಬಿದ್ದಿತು. ಇದಾದ ನಂತರ ದಿವ್ಯಾ ಮದುವೆಯಾಗಿರಲಿಲ್ಲ.
 

Latest Videos

click me!