ಮಾಲ್ಡೀವ್ಸ್‌ನಲ್ಲಿ ಅನುಷ್ಕಾ-ವಿರಾಟ್ ದಂಪತಿ; ಫೋಟೋ ಶೇರ್ ಮಾಡಿ ಮಗಳಿಗೆ ಪ್ರಾಮಿಸ್ ಮಾಡಿದ ನಟಿ

First Published | Jun 10, 2022, 1:16 PM IST

ಅನುಷ್ಕಾ ಮಗಳು ವಮಿಕಾ ಮತ್ತು ಪತಿ ವಿರಾಟ್ ಜೊತೆ ಮಾಲ್ಡೀವ್ಸ್ ಟ್ರಿಪ್ ‌ನಲ್ಲಿದ್ದಾರೆ. ಮಾಲ್ಡೀವ್ಸ್ ನಲ್ಲಿ ಮಸ್ತ್ ಮಜಾಮಾಡುತ್ತಿರುವ ಅನುಷ್ಕಾ ಒಂದಿಷ್ಟು ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅನುಷ್ಕಾ ಹಂಚಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮಗಳಿಗೆ ಜನ್ಮ ನೀಡಿದ ಬಳಿಕ ಮತ್ತೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮಗಳು ವಮಿಕಾ ಆರೈಕೆಯಲ್ಲಿ ಬ್ಯುಸಿಯಾಗಿರವ ಅನುಷ್ಕಾ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಜೊತೆಗೆ ಹೊಸ ಸ್ಕ್ರಿಪ್ಟ್ ಆಯ್ಕೆಯಲ್ಲಿ ನಿರತರಾಗಿದ್ದಾರೆ.
 

ಸದ್ಯ ಅನುಷ್ಕಾ ಮಗಳು ವಮಿಕಾ ಮತ್ತು ಪತಿ ವಿರಾಟ್ ಜೊತೆ ಮಾಲ್ಡೀವ್ಸ್ ಟ್ರಿಪ್ ‌ನಲ್ಲಿದ್ದಾರೆ. ಮಾಲ್ಡೀವ್ಸ್ ನಲ್ಲಿ ಮಸ್ತ್ ಮಜಾಮಾಡುತ್ತಿರುವ ಅನುಷ್ಕಾ ಒಂದಿಷ್ಟು ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 
 

Tap to resize

ಅನುಷ್ಕಾ ಹಂಚಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮಗಳ ವಮಿಕಾಗಾಗಿ ವಿಶೇಷವಾಗಿ ತಯಾರಿಸಿರುವ ಬೇಬಿ ಕ್ಯಾರಿಯರ್ ಶೇರ್ ಮಾಡಿದ್ದಾರೆ. ಅನುಷ್ಕಾ ಬೇಬಿ ಕ್ಯಾರಿಯರ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಜೊತೆಗೆ ಆಕಾಶದ ಸುಂದರ ಫೋಟೋವನ್ನು ಶೇರ್ ಮಾಡಿದ್ದಾರೆ. 

'ನಾನು ನಿನ್ನನ್ನು ಈ ಪ್ರಪಂಚ ಮತ್ತು ಪ್ರಪಂಚದಾಚೆಗೂ ಕರೆದೊಯ್ಯುತ್ತೀನಿ, ನನ್ನ ಜೀವ' ಎಂದು ಅನುಷ್ಕಾ ಬರೆದುಕೊಂಡಿದ್ದಾರೆ. ಅನುಷ್ಕಾ ಮಗಳಿಗಾಗಿ ಬರೆದ ಪ್ರೀತಿಯ ಸಾಲು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. 

ಮಗಳಿಗೆ ಪ್ರಾಮಿಸ್ ಮಾಡಿರುವ ಜೊತೆಗೆ ಆರೋಗ್ಯಕರ ಆಹಾರದ ಬಗ್ಗೆಯೂ ಹೇಳಿದ್ದಾರೆ. ಆರೋಗ್ಯಕರವಾದ ಆಹಾರದ ಮೂಲಕ ದಿನ ಪ್ರಾರಂಭಿಸಿದೆ ಎಂದಿರುವ ಅನುಷ್ಕಾ ಒಂದಿಷ್ಟ ಫ್ರೂಟ್ ಸಲಾಡ್ ತಿನ್ನುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.

ಇತ್ತೀಚಿಗಷ್ಟೆ ಅನುಷ್ಕಾ ಮತ್ತು ವಿರಾಟ್ ದಂಪತಿ ಮಾಲ್ಡೀವ್ಸ್‌ನನಿಂದ ಸುಂದರ ಫೋಟೋ ಶೇರ್ ಮಾಡಿದ್ದರು. ಪವರ್ ಕಪಲ್‌ನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಫೋಟೋಗೆ ಅಭಿಮಾನಿಗಳು ತರಹೇವಾರಿ ತಾಮೆಂಟ್ ಮಾಡಿದ್ದರು.  

ಅನುಷ್ಕಾ ಶರ್ಮಾ ಸಿನಿಮಾ ವಿಚಾರಕ್ಕೆ ಬರುವುದಾರೆ ಕೊನೆಯದಾಗಿ ಅನುಷ್ಕಾ ಜೀರೋ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ 2018ರಲ್ಲಿ ರಿಲೀಸ್ ಆಗಿದ್ದು ಶಾರುಖ್ ಖಾನ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೀನಾಯ ಸೋಲು ಕಂಡಿತ್ತು. 
 

ಈ ಸಿನಿಮಾ ಬಳಿಕ ಅನುಷ್ಕಾ ಸಿನಿಮಾ ಮತ್ತು ವೆಬ್ ಸೀರಿಸ್ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದರು. ಪಾತಾಲ್ ಲೋಕ್, ಬುಲ್ ಬುಲ್ ಮತ್ತು ಎ ಮದರ್ಸ್ ರೇಜ್ ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ. ಸದ್ಯ ಚಕ್ದ ಎಕ್ಸ್‌ಪ್ರೆಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕ್ರಿಕೆಟ್ ಲೆಜೆಂಡ್ ಜೂಲನ್ ಗೋಸ್ವಾಮಿ ಬಯೋಪಿಕ್ ಇದಾಗಿದ್ದು ಅನುಷ್ಕಾ ಜೂಲನ್ ಗೋಸ್ವಾಮಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Latest Videos

click me!