ಪ್ರತಿ ಸಲ ಡಿಫರೆಂಟ್ ಲುಕ್ ಟ್ರೈ ಮಾಡಿ ಕ್ಯಾಮೆರಾ ಎದುರು ಬರುವ ನಟಿ ಉರ್ಫಿ ಜಾವೇದ್ ಇದೀಗ ಮೈ ಮೇಲೆ ಚಿತ್ತಾರ ಬಿಡಿಸಿಕೊಂಡಿದ್ದಾರೆ.
ಹೌದು! ವೈಟ್ ಶೂಟ್‌ನಲ್ಲಿ (White Suit) ಕಾಣಿಸಿಕೊಂಡಿರುವ ಉರ್ಫಿ (Urfi) ಒಳ ಉಡುಪಿನ ಬದಲು ಪೇಂಟಿಂಗ್ ಮಾಡಿಸಿಕೊಂಡಿದ್ದಾರೆ.
ಪಿಂಕ್ ಮತ್ತು ಬ್ಲಾಕ್ ಕಾಂಬಿನೇಷನ್‌ನಲ್ಲಿ ಹೂವುಗಳನ್ನು ಮಾಡಿಸಿಕೊಂಡಿದ್ದಾರೆ. ಇದಕ್ಕೆ ಮ್ಯಾಚ್ ಆಗುವಂತೆ ಪಿಂಕ್ ಲಿಪ್‌ಸ್ಟಿಕ್ ಹಾಕಿದ್ದಾರೆ.
ಆರಂಭದ ದಿನಗಳಲ್ಲಿ ಉರ್ಫಿ ಹರಿದಿರುವ ಬಟ್ಟೆಗಳನ್ನು ಧರಿಸುತ್ತಿದ್ದರು ಆದರೀಗ ಒಳ ಉಡುಪುಗಳಿಲ್ಲದೆ ಬಟ್ಟೆ ಧರಿಸುತ್ತಾರೆ. ಹೀಗಾಗಿ ಕೆಲವರಿಗೆ ಮುಜುಗರ ಆಗಿರುವುದು ಉಂಟು.
ಕೆಲವು ದಿನಗಳ ಹಿಂದೆ ತಮ್ಮ ಹೈಟ್‌ಗೆ ಮೀರಿರುವ ಹೀಲ್ಸ್ ಧರಿಸಿ ಮೆಟ್ಟಿಲು ಹತ್ತಲಾಗದೆ ಮುಗ್ಗರಿಸಿಕೊಂಡು ಬೀಳುವ ಸ್ಥಿತಿ ಎದುರಾಗಿತ್ತು.
ಉರ್ಫಿ ಧರಿಸುವ ಬಟ್ಟೆ ನೋಡಿ ನೆಟ್ಟಿಗರು ಹಣ ಸಂಗ್ರಹ ಮಾಡಿ ಆಕೆ ಮೈ ತುಂಬಿಕೊಳ್ಳುವಂತ ಉಡುಪು ಕೊಡಿಸುವ ಪ್ಲ್ಯಾನ್ ಮಾಡಿದ್ದಾರೆ. ಇದು ಎಷ್ಟು ಯಶಸ್ವಿಯಾಗಲಿದೆ ಎಂದು ಕಾದು ನೋಡಬೇಕಿದೆ.