ತಾಯಿಯಾಗುತ್ತಿದ್ದಾರೆ ಸೋನಂ ಕಪೂರ್, ಬಿಕಿನಿ ಧರಿಸಿ ಬೇಬಿ ಬಂಪ್ ತೋರಿಸಿದ ನಟಿ!

First Published | Mar 21, 2022, 2:34 PM IST

ನಟಿ ಸೋನಂ ಕಪೂರ್ ಮತ್ತು ಆನಂದ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಡಿಫರೆಂಟ್ ಆಗಿರುವ ಫೋಟೋ ಹಂಚಿಕೊಂಡ ನಟಿ. 

ಬಾಲಿವುಡ್ ಸ್ಟೈಲ್ ಐಕಾನ್ ಸೋನಂ ಕಪೂರ್ ಮತ್ತು ಉದ್ಯಮಿ ಆನಂದ್ ಅಹುಜಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಬಿಕಿನಿ ಧರಿಸಿ ಬೇಬಿ ಬಂಪ್ ತೋರಿಸುತ್ತಿರುವ ಫೋಟೋ ಹಂಚಿಕೊಂಡ ನಟಿ ಸೋನಂ ಕಪೂರ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳು ಹರಿದು ಬರುತ್ತಿದೆ. 

ಏನೇ ಮಾಡಿದರೂ ಡಿಫರೆಂಟ್ ಆಗಿ ಮಾಡುವ ಸೋನಂ ಪ್ರೆಗ್ನೆನ್ಸಿ ವಿಚಾರವನ್ನು ಡಿಫರೆಂಟ್ ಆಗಿ ರಿವೀಲ್ ಮಾಡಿದ್ದಾರೆ. ಅಲ್ಲದೆ ಬರೆದಿರುವ ಸಾಲುಗಳು ಅದ್ಭುತವಾಗಿದೆ. 

Tap to resize

'ನಾಲ್ಕು ಕೈಗಳು ಸೇರಿಕೊಂಡು ನಿನಗೆ ಅದ್ಭುತವಾಗ ಜೀವನ ರೂಪಿಸಲು ರೆಡಿಯಾಗಿದೆ. ಎರಡು ಹೃದಯಗಳು ಸೇರಿಕೊಂಡು ನಿನ್ನ ಹೃದಯದ ಬಡಿತವಾಗಲಿದೆ'

'ಒಂದು ಫ್ಯಾಮಿಲಿ. ನಿನ್ನ ಜೀವನ ಪೂರ್ತಿ ತುಂಬಾನೇ ಪ್ರೀತಿ ಮತ್ತು ಸಪೋರ್ಟ್ ನೀಡುತ್ತದೆ. ನಿನ್ನನ್ನು ಬರ ಮಾಡಿಕೊಳ್ಳಲು ಕಾಯುತ್ತಿರುವೆವು' ಎಂದು ಸೋನಂ ಬರೆದುಕೊಂಡಿದ್ದಾರೆ.

 ಸೋನಂ ಮತ್ತು ಆನಂದ್  2018ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆನಂದ್ ಶೂ ಬ್ಯುಸಿನೆಸ್‌ ಮಾಡುತ್ತಿದ್ದಾರೆ. ಸೋನಂ ಮದುವೆ ಬಳಿಕ ಸಿನಿಮಾದಿಂದ ದೂರ ಉಳಿದುಕೊಂಡಿದ್ದಾರೆ.

ಇಬ್ಬರು ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ಸಿಹಿ ಸುದ್ದಿ ಹಂಚಿಕೊಂಡ ನಂತರ ಬಾಲಿವುಡ್, ಹಾಲಿವುಡ್ ಮತ್ತು influencerಗಳ ವಿಶ್ ಹರಿದು ಬರುತ್ತಿವೆ. 

Latest Videos

click me!