ಬಾಲಿವುಡ್ ಉದ್ಯಮದ ಕಪೂರ್ ಕುಟುಂಬದ ಕುಡಿಗಳನ್ನು ಜಗತ್ತಿಗೆ ಸ್ವಾಗತಿಸಿದ ಮೊದಲ ವ್ಯಕ್ತಿ ಡಾ.ರುಸ್ತಮ್ ಸೂನಾವಾಲಾ ಭಾನುವಾರ ನಿಧನರಾಗಿದ್ದಾರೆ. ರುಸ್ತಮ್ ಸೂನಾವಾಲಾ ಕಪೂರ್ ಕುಟುಂಬದ ಆಪ್ತರಾಗಿದ್ದರು.
ಕರೀನಾ, ಕರೀಷ್ಮಾ, ರಣ್‌ಬೀರ್ ನಿಂದ ಹಿಡಿದು ರಾಹಾ ಹೆರಿಗೆಯನ್ನು ಡಾ.ರುಸ್ತಮ್ ಸೂನಾವಾಲಾ ಮಾಡಿಸಿದ್ದರು. ಕಪೂರ್ ಕುಟುಂಬದ ಮಾತ್ರವಲ್ಲದೇ ಬಾಲಿವುಡ್ ತಾರೆಯರ ನೆಚ್ಚಿನ ವೈದ್ಯರಾಗಿದ್ದರು.
ಕರೀನಾ ಮತ್ತು ಕರಿಷ್ಮಾ ಅವರ ತಾಯಿ ಬಬಿತಾ ಅವರ ಹೆರಿಗೆಯನ್ನು ಮಾಡಿದ್ದು ಮಾತ್ರವಲ್ಲದೆ ನೀತು ಕಪೂರ್ ಅವರ ಹೆರಿಗೆಯನ್ನೂ ಮಾಡಿಸಿದ್ದರು. 1991ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ ದಂಪತಿ ಪುತ್ರಿ ವಮಿಕಾಳನ್ನು ಸಹ ಡಾ.ರುಸ್ತಮ್ ಸೂನಾವಾಲಾ ಅವರೇ ಮೊದಲು ಜಗತ್ತಿಗೆ ಸ್ವಾಗತಿಸಿದ್ದರು. ತೈಮೂರು, ಜೇಹ್, ವಮಿಕಾ ಸೇರಿದಂತೆ ಬಿಟೌನ್ ಸ್ಟಾರ್ ಮಕ್ಕಳನ್ನು ಸ್ವಾಗತಿಸಿದ್ದಾರೆ.