ಮುಂಬೈ (ಡಿ. 11) ಬಾಲಿವುಡ್ ಹೆಸರಾಂತ ನೃತ್ಯ ಸಂಯೋಜಕ, ನಿರ್ದೇಶಕ ರೆಮೋ ಡಿಸೋಜಾ(46) ಅವರಿಗೆ ಹೃದಯಾಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೋಕಿಲಾಬೆನ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ರೆಮೋ ಡಿ' ಸೋಜಾ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಆಂಜಿಯೋಗ್ರಫಿ ಮಾಡಿದ್ದಾರೆ ಮತ್ತು ಅವರು ಪ್ರಸ್ತುತ ಐಸಿಯುನಲ್ಲಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. ನೃತ್ಯ ನಿರ್ದೇಶನ ಅಲ್ಲದೆ ಬಾಲಿವುಡ್ ನ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದಾರೆ. ತುಮ್ ಬಿನ್, ಕಾಂಟೆ, ಧೂಮ್, ರಾಕ್ ಆನ್, ಯೆ ಜವಾನಿ ಹೈ ದಿವಾನಿನ ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಎಬಿಸಿಡಿ, ಎ ಫ್ಲೈಯಿಂಗ್ ಜಾಟ್, ರೇಸ್ 3" ಮತ್ತು ತೀರಾ ಇತ್ತೀಚೆಗೆ "ಸ್ಟ್ರೀಟ್ ಡ್ಯಾನ್ಸರ್" ಚಿತ್ರಗಳನ್ನು ಅವರು ನಿರ್ದೇಶನ ಮಾಡಿದ್ದಾರೆ. ಹಲವು ರಿಯಾಲಿಟಿ ಶೋಗಳಿಗೆ ನಿರ್ಣಾಯಕರಾಗಿಯೂ ಶೋ ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. Heart Attac Choreographer and director Remo D'Souza was admitted to Mumbai's hospital. ಬಾಲಿವುಡ್ ನೃತ್ಯ ಸಂಯೋಜಕ, ನಿರ್ದೇಶಕ ರೆಮೋ ಡಿಸೋಜಾಗೆ ಹೃದಯಾಘಾತ