ಅಪರೂಪದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಈ ಬಾಲಿವುಡ್ ಸೆಲೆಬ್ರಿಟಿಗಳು!

First Published | Feb 16, 2024, 4:59 PM IST

ಸೆಲೆಬ್ರಿಟಿಗಳು ಎಂದ ಕೂಡಲೇ, ಅವರ ಬಳಿ ಸಾಕಷ್ಟು ಹಣ ಇದೆ, ಅವರಿಗೆ ಯಾವುದೇ ಸಮಸ್ಯೆಯೇ ಇರೋದಿಲ್ಲ ಎಂದು ನಾವು ಅಂದುಕೊಂಡಿರುತ್ತೇವೆ, ಆದರೆ ಹಲವು ಬಾಲಿವುಡ್ ನಟ- ನಟಿಯರು ಅಪರೂಪದ ಆರೋಗ್ಯ ಸಮಸ್ಯೆಗೆ ಒಳಗಾಗಿದ್ದಾರೆ, ಅದರ ಬಗ್ಗೆ ತಿಳಿಯೋಣ.

ಅಮಿತಾಬ್ ಬಚ್ಚನ್ (Amitabh Bachchan): ಅಮಿತಾಬ್ ಬಚ್ಚನ್ ಅವರು ಮಸ್ತೇನಿಯಾ ಗ್ರಾವಿಸ್ (Myasthenia gravis) ಎಂಬ ಕ್ರಾನಿಕ್ ಆಟೋ ಇಮ್ಯೂನ್ ಕಾಯಿಲೆಯಿಂದ ಬಳಲುತ್ತಿದ್ದಾರೆ, ಇದು ಅಸ್ಥಿಪಂಜರದ ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ.

ಅನುಷ್ಕಾ ಶರ್ಮಾ (Anushka Sharma): ಬಾಲಿವುಡ್ ನಟಿ ಅನುಷ್ಕಾ ಶರ್ಮಾಗೆ ಉಬ್ಬಿದ ಡಿಸ್ಕ್ ಸಮಸ್ಯೆ ( bulging disk) ಇದೆ, ಈ ಸ್ಥಿತಿಯಲ್ಲಿ ಬೆನ್ನುಮೂಳೆಯ ಮೂಳೆಗಳ ನಡುವೆ ರಬ್ಬರ್ ಡಿಸ್ಕ್ ಛಿದ್ರಗೊಳ್ಳುತ್ತದೆ. 

Latest Videos


ಸಲ್ಮಾನ್ ಖಾನ್ (Salman Khan): ಸಲ್ಮಾನ್ ಖಾನ್ ಟ್ರೈಜೆಮಿನಲ್ ನ್ಯೂರಾಲ್ಜಿಯಾ (Trigeminal neuralgia,) ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ, ಇದು ಮುಖದ ಟ್ರೈಜೆಮಿನಲ್ ನರದ ಮೇಲೆ ಪರಿಣಾಮ ಬೀರುವ ದೀರ್ಘಕಾಲದ ಸ್ಥಿತಿಯಾಗಿದ್ದು, ದವಡೆಗಳಲ್ಲಿ ನೋವನ್ನು ಉಂಟುಮಾಡುತ್ತದೆ.

ಯಾಮಿ ಗೌತಮ್ (Yami Gautam ): ಯಾಮಿ ಗೌತಮ್ ಕೆರಾಟೋಸಿಸ್ ಪಿಲಾರಿಸ್ (keratosis pilaris)ನಿಂದ ಬಳಲುತ್ತಿದ್ದಾರೆ, ಇದು ಚರ್ಮದ ಮೇಲೆ ಪದೇ ಪದೇ ಒಣ ತೇಪೆಗಳು ಮತ್ತು ಸಣ್ಣ ಕೆಂಪು ಉಬ್ಬುಗಳಿಗೆ ಕಾರಣವಾಗುತ್ತದೆ

ರಣಬೀರ್ ಕಪೂರ್ (Ranbir Kapoor): ರಣಬೀರ್ ಕಪೂರ್ ಅವರ ಮೂಗಿನ ಸೆಪ್ಟಮ್ (nasal septum) ಬೇರೆಡೆಗೆ ತಿರುಗಿರುವ ಸಮಸ್ಯೆಯನ್ನು ಹೊಂದಿದ್ದಾರೆ, ಇದು ಮೂಗಿನ ಹೊಳ್ಳೆಗಳ ನಡುವಿನ ಗೋಡೆಯಾದ ಸೆಪ್ಟಮ್ ನ ಸ್ಥಾನ ಪಲ್ಲಟ ಮಾಡುವಂತಹ ಸ್ಥಿತಿಯಾಗಿದೆ.

ಹೃತಿಕ್ ರೋಷನ್ (Hrithik Roshan): ಹೃತಿಕ್ ರೋಷನ್ ತಲೆಗೆ ಗಾಯವಾದ ನಂತರ ಕ್ರಾನಿಕ್ ಸಬ್ಡ್ಯೂರಲ್ ಹೆಮಟೋಮಾದಿಂದ (chronic subdural hematoma) ಬಳಲುತ್ತಿದ್ದರು ಮತ್ತು ಯಶಸ್ವಿ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈಗ ಆರಾಮವಾಗಿದ್ದಾರೆ.

ಕತ್ರಿನಾ ಕೈಫ್ ( Katrina Kaif ): ಕತ್ರಿನಾ ಕೈಫ್ ಗೆ ಹೈಪೋರ್ಥೈರಾಯ್ಡಿಸಮ್ (hypothyroidism) ಸಮಸ್ಯೆ ಇದೆ ಅನ್ನೋದು ಇತ್ತೀಚೆಗೆ ವರದಿಯಾಗಿದೆ, ಈ ಸ್ಥಿತಿಯಲ್ಲಿ ಥೈರಾಯ್ಡ್ ಗ್ರಂಥಿ ಸಾಕಷ್ಟು ಹಾರ್ಮೋನುಗಳನ್ನು ಉತ್ಪಾದಿಸುವುದಿಲ್ಲ.
 

ಇಲಿಯಾನಾ ಡಿಕ್ರೂಜ್ (Ileana D'Cruz): ಇಲಿಯಾನಾ ಡಿಕ್ರೂಜ್ ಬಾಡಿ ಡಿಸ್ಮಾರ್ಫಿಕ್ ಅಸ್ವಸ್ಥತೆಯನ್ನು ( body dysmorphic disorder) ಹೊಂದಿದ್ದರು, ಇದೊಂದು ಮಾನಸಿಕ ಕಾಯಿಲೆಯಾಗಿದ್ದು, ಇದು ಲುಕ್ ನಲ್ಲಿ ತಪ್ಪನ್ನು ಕಂಡುಕೊಳ್ಳುವ ಮಾನಸಿಕ ಸ್ಥಿತಿಯಾಗಿದೆ. 

ವರುಣ್ ಧವನ್ (Varun Dhawan): ವರುಣ್ ಧವನ್ ವೆಸ್ಟಿಬ್ಯುಲರ್ ಹೈಪೋಫಂಕ್ಷನ್(vestibular hypofunction) ಎಂಬ ಸಮಸ್ಯೆ ಹೊಂದಿದ್ದಾರೆ, ಇದು ಒಳ ಕಿವಿಯ ಸಮತೋಲನ ಭಾಗವು ಸರಿಯಾಗಿ ಕಾರ್ಯನಿರ್ವಹಿಸದಂತಹ ಸ್ಥಿತಿಯನ್ನು ಹೊಂದಿದೆ.

ಫಾತಿಮಾ ಸನಾ ಶೇಖ್ (Fatima Sana Shaikh): ಫಾತಿಮಾ ಸನಾ ಶೇಖ್ ಅವರಿಗೆ ಮೂರ್ಛೆರೋಗವಿದೆ, ಇದರಲ್ಲಿ ಮೆದುಳಿನಲ್ಲಿ ನರಕೋಶದ ಚಟುವಟಿಕೆಗೆ ತೊಂದರೆಯಾಗುತ್ತದೆ, ಇದರಿಂದಾಗಿ ಇದು ಪದೇ ಪದೇ ಸೆಳೆತ, ಮೂರ್ಚೆ ಹೋಗುವ ಸಾಧ್ಯತೆ ಕೂಡ ಇರುತ್ತದೆ.

click me!