ಮೇಕಪ್ ಇಲ್ಲದೆ ಹೊರಬಂದ ಶಿಲ್ಪಾ ಶೆಟ್ಟಿ, ರವೀನಾ ಟಂಡನ್, ಕೀರ್ತಿ ಸುರೇಶ್; ಕ್ಯಾಮರಾ ಕಂಡು ಓಡಿಹೋದ ನಟಿಯರು! Photos

Published : May 07, 2025, 09:22 PM ISTUpdated : May 08, 2025, 10:45 AM IST

ಇತ್ತೀಚೆಗೆ ಹಲವು ಸೆಲೆಬ್ರಿಟಿಗಳು ಮುಂಬೈನ ವಿವಿಧೆಡೆ ಕಾಣಿಸಿಕೊಳ್ಳುತ್ತಿರುತ್ತಾರೆ. ಸಲೂನ್‌, ರೆಸ್ಟೋರೆಂಟ್‌ ಮುಂತಾದ ಕಡೆ ಸೆಲೆಬ್ರಿಟಿಗಳು ಹೋದಾಗೆಲ್ಲ ಪಾಪರಾಜಿಗಳು ಬಂದು ಫೋಟೋ ತೆಗೆಯುತ್ತಿರುತ್ತಾರೆ, ಶಿಲ್ಪಾ ಶೆಟ್ಟಿಯಿಂದ ರವೀನಾ ಟಂಡನ್‌ವರೆಗೆ ಮೇಕಪ್ ಇಲ್ಲದೆ ಕಾಣಿಸಿಕೊಂಡ ನಟಿಯರ ಫೋಟೋಗಳು ಇಲ್ಲಿವೆ.   

PREV
17
ಮೇಕಪ್ ಇಲ್ಲದೆ ಹೊರಬಂದ ಶಿಲ್ಪಾ ಶೆಟ್ಟಿ, ರವೀನಾ ಟಂಡನ್, ಕೀರ್ತಿ ಸುರೇಶ್; ಕ್ಯಾಮರಾ ಕಂಡು ಓಡಿಹೋದ ನಟಿಯರು! Photos

ಬಾಲಿವುಡ್‌ ನಟಿ, ಮಂಗಳೂರಿನ ನಟಿ ಶಿಲ್ಪಾ ಶೆಟ್ಟಿ ಅವರು ದುಬಾರಿ ಕಾರ್‌ನಲ್ಲಿ ಕಾಣಿಸಿಕೊಂಡರು. ಆಗ ಅವರು ಮೇಕಪ್ ಮಾಡಿರಲಿಲ್ಲ, ಆದ್ದರಿಂದ ಕಾರಿನಿಂದ ಇಳಿಯುತ್ತಿದ್ದಂತೆ, ಶಿಲ್ಪಾ ಶೆಟ್ಟಿ ಅವರ ಫೋಟೋಗಳನ್ನು ಕ್ಲಿಕ್‌ ಮಾಡಲಾಯ್ತು. ಹೀಗಾಗಿ ಅವರು ಫೋಟೋಗಳನ್ನು ಕ್ಲಿಕ್ ಮಾಡಲು ಬಿಡದಂತೆ ಓಡಿಹೋದರು.

27

ಮಾಧ್ಯಮ ಸ್ನೇಹಿ ಮತ್ತು ಯಾವಾಗಲೂ ಛಾಯಾಗ್ರಾಹಕರಿಗೆ ಪೋಸ್ ನೀಡುವ ಶಿಲ್ಪಾ ಶೆಟ್ಟಿ ಈ ಬಾರಿ ಹಾಗೆ ಮಾಡಲಿಲ್ಲ. ಅವರು ಪೋಸ್ ನೀಡದೆ ಕಾರಿನಲ್ಲಿ ಕುಳಿತರು. ಮೇಕಪ್‌ ಹಾಕದೆ ಇರೋದಿಕ್ಕೆ ಈ ಬಾರಿ ಅವರು ಗಡಿಬಿಡಿಯಲ್ಲಿ ಹೋದರು. 

37

ದಕ್ಷಿಣದ ನಟಿ ಕೀರ್ತಿ ಸುರೇಶ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಅವರು ಕಾರಿನಿಂದ ಇಳಿದು ಛಾಯಾಗ್ರಾಹಕರಿಗೆ ಪೋಸ್ ನೀಡಿದರು. ಆ ವೇಳೆ ಅವರು ಮೇಕಪ್‌ ಹಾಕಿರಲಿಲ್ಲ. ಇನ್ನು ಫಿಟ್‌ನೆಸ್‌ ಕಡೆಗೆ ಸಿಕ್ಕಾಪಟ್ಟೆ ಗಮನ ಕೊಡುತ್ತಿರುತ್ತಾರೆ. 

47

ಹಾರ್ದಿಕ್‌ ಪಾಂಡ್ಯ ಮಾಜಿ ಪತ್ನಿ, ನಟಿ ನತಾಶಾ ಸ್ಟಾಂಕೋವಿಕ್ ಜಿಮ್‌ನ ಹೊರಗೆ ಕಾಣಿಸಿಕೊಂಡರು. ಮೇಕಪ್ ಇಲ್ಲದ ನತಾಶಾ ಕ್ಯಾಮೆರಾಮನ್‌ಗೆ ನಗುತ್ತಾ ಪೋಸ್ ನೀಡಿದರು. ಇನ್ನು ಮೇಕಪ್‌ ಇಲ್ಲದೆಯೂ ನತಾಶಾ ಸಖತ್‌ ಆಗಿ ಕಾಣಿಸುತ್ತಾರೆ. 

57

ನಟಿ ಆಯಿಶಾ ಶರ್ಮಾ ಜಿಮ್‌ನ ಹೊರಗೆ ಕಾಣಿಸಿಕೊಂಡರು. ಅವರು ಛಾಯಾಗ್ರಾಹಕರೊಂದಿಗೆ ತಮಾಷೆ ಮಾಡಿ ಸ್ಟೈಲಿಶ್ ಪೋಸ್ ನೀಡಿದರು. ಆಯಿಶಾ ಯಾವಾಗಲೂ ಬೋಲ್ಡ್‌ ಅವತಾರದಲ್ಲಿಯೇ ಕಾಣಿಸುತ್ತಿರುತ್ತಾರೆ.

67

ಕೆಜಿಎಫ್‌ ಸಿನಿಮಾ ನಟಿ ರವೀನಾ ಟಂಡನ್ ಕೂಡ ಮೇಕಪ್ ಇಲ್ಲದೆ ಕಾಣಿಸಿಕೊಂಡರು. ಈ ಸಂದರ್ಭದಲ್ಲಿ ಅವರು ಹಸಿರು ಟಿ-ಶರ್ಟ್ ಮತ್ತು ಜೀನ್ಸ್ ಧರಿಸಿದ್ದರು. ಇಷ್ಟು ವರ್ಷವಾದರೂ ಕೂಡ, ಅವರು ಬಳಕುವ ಬಾಲೆಯಂತೆಯೇ ಕಾಣುತ್ತಾರೆ. 

77

ನಟಿ ನಿಮ್ರತ್ ಕೌರ್ ನಡೆಯುತ್ತಿರುವುದು ಕಂಡುಬಂದಿದ್ದು ಹೀಗೆ. ಈ ಸಂದರ್ಭದಲ್ಲಿ ಅವರು ಟ್ರ್ಯಾಕ್ ಸೂಟ್ ಧರಿಸಿದ್ದರು. ಒಟ್ಟಿನಲ್ಲಿ ಜಿಮ್‌, ರೆಸ್ಟೋರೆಂಟ್‌, ಸಲೂನ್‌ ಎಂದು ನಟ, ನಟಿಯರು ಹೊಸ ಟ್ರೆಂಡ್‌ ಶುರು ಮಾಡುತ್ತಾರೆ. 

Read more Photos on
click me!

Recommended Stories