ನಿಮ್ ಕತೆಯೇನೋ ಗೊತ್ತಿಲ್ಲ, ನನಗೆ ಯಾರಾದ್ರೊಬ್ರು ಪುಶ್ ಮಾಡೋರು ಇಲ್ಲದಿದ್ದರೆ ವರ್ಕೌಟ್ ಮಾಡೋಕೆ ಮನಸ್ಸೇ ಬರಲ್ಲ.
ಲಾಕ್‌ಡೌನ್ ಶುರುಶುರುವಲ್ಲಿ ವರ್ಕೌಟ್ ತುಂಬ ಬೋರಿಂಗ್ ಅಂತ ಅನಿಸ್ತಿತ್ತು.
ಒಬ್ಬಳೇ ಎಕ್ಸರ್ ಸೈಸ್ ಮಾಡೋದರಲ್ಲಿ ಮಜಾನೇ ಬರ್ತಿರಲಿಲ್ಲ.
ಆಮೇಲೆ ನಾವು ಫ್ರೆಂಡ್ಸ್ ವೀಡಿಯೋ ಕಾಲ್ ಮಾಡಿ ಏಕಕಾಲಕ್ಕೆ ನಾನಿಲ್ಲಿ ಅವರಲ್ಲಿ ಎಕ್ಸರ್‌ಸೈಸ್ ಶುರು ಮಾಡಿದ್ವಿ.
sn ananya pandey
ಸಖತ್ ಫನ್ ಅನಿಸುತ್ತೆ. ನಮ್ಗೆ ವರ್ಕೌಟ್ ಹೆಚ್ಚೆಚ್ಚು ಮಾಡ್ಬೇಕು ಅನಿಸುತ್ತೆ.
ಇದನ್ನು ನೀವೂ ಟ್ರೈ ಮಾಡಿ, ನಿಮ್ ಗೋಲ್ ಹೆಚ್ಚಾಗ್ತಾ ಹೋಗುತ್ತೆ. ನೀವು ಹೆಚ್ಚೆಚ್ಚು ಫಿಟ್ ಆಗ್ತಾ ಹೋಗ್ತೀರಿ.
ಪುಶ್‌ಅಪ್ ಬಹಳ ಚೆನ್ನಾಗಿರುತ್ತೆ. ಅಂಗೈ ಮತ್ತು ಕಾಲ್ಬೆರಳಿನ ಮೇಲೆ ಇಡೀ ದೇಹವನ್ನು ಬ್ಯಾಲೆನ್ಸ್ ಮಾಡ್ತಾ ಎಷ್ಟುಹೊತ್ತು ನಿಲ್ತೀವಿ ಅನ್ನೋದು.
ಜೊತೆಗೆ ರೋಪ್ ಎಕ್ಸರ್‌ಸೈಸ್, ಬಸ್ಕಿ ಹೊಡಿಯೋದು, ಸ್ಕಿಪ್ಪಿಂಗ್, ಜಂಪಿಂಗ್ ಇತ್ಯಾದಿ ಫ್ರೆಂಡ್ಸ್ ಜೊತೆಗೇ ಟ್ರೈ ಮಾಡಿ, ಮಜಾ ಬರುತ್ತೆ.
Kannadaprabha News