ಬಾಲಿವುಡ್ ಸ್ಟಾರ್ ಅಮಿತಾಭ್ ಬಚ್ಚನ್ ಮತ್ತು ಪುತ್ರ ಅಭಿಷೇಕ್‌ಗೆ ಕೊರೋನಾ ಪಾಸಿಟಿವ್.
ಇದರ ಬೆನ್ನಲ್ಲೇ ಪತ್ನಿ ಜಯಾ, ಸೊಸೆ ಐಶ್ವರ್ಯ ಮತ್ತು ಮೊಮ್ಮಗಳು ಆರಾಧ್ಯಾಗೂ ಕೊರೋನಾ ಟೆಸ್ಟ್ ಮಾಡಿಸಲಾಗಿತ್ತು.
ಮೊದಲು ಬಹಿರಂಗವಾದ ವರದಿ ಪ್ರಕಾರ ಜಯಾ, ಐಶ್ವರ್ಯ ಹಾಗೂ ಆರಾಧ್ಯಾಗೆ ನೆಗೆಟಿವ್ ಬಂದಿತ್ತು.
ಆದರೀಗ ಮರು ಪರೀಕ್ಷೆ ನಂತರ ನಟಿ ಐಶ್ವರ್ಯ ರೈ ಮತ್ತು ಪುತ್ರಿ ಆರಾಧ್ಯಾಗೂ ಪಾಟಿಸಿವ್ ಇರುವುದಾಗಿ ತಿಳಿದು ಬಂದಿದೆ.
ಎರಡನೇ ಪರೀಕ್ಷೆಯಲ್ಲೂ ಜಯಾ ಬಚ್ಚನ್‌ಗೆ ನೆಗೆಟಿವ್ ಎಂದು ತಿಳಿದು ಬಂದಿದೆ.
ಬಚ್ಚನ್ ಕುಟುಂಬದ ಜಲ್ಸಾ ಬಂಗಲೆಯನ್ನು ಮುಂಬೈ ಮಹಾನಗರ ಪಾಲಿಕೆ ಅವರು ಸ್ಯಾನಿಟೈಸ್ ಮಾಡುತ್ತಿದ್ದಾರೆ.
ಮುಂಬೈನಾ ನಾನಾವತಿ ಆಸ್ಪತ್ರೆಯಲ್ಲಿ ಅಮಿತಾಭ್ ಮತ್ತು ಅಭಿಷೇಕ್ ಚಿಕಿತ್ಸೆ ಪಡೆಯುತ್ತಿದ್ದಾರೆ.
8 ಆರಾಧ್ಯಾಗೆ ಕೊರೋನಾದ ಯಾವುದೇ ಲಕ್ಷಣಗಳು ಕಂಡು ಬರದಿದ್ದರೂ ಪಾಸಿಟಿವ್ ವರದಿ ಬಂದಿರುವುದು ಕುಟುಂಬದವರಿಗೆ ಆತಂಕವುಂಟುಮಾಡಿದೆ .
Suvarna News