ಅನುಷ್ಕಾ ಶರ್ಮಾ ಅವರ ತಂದೆ ಕರ್ನಲ್ ಅಜಯ್ ಕುಮಾರ್ ಶರ್ಮಾ ಭಾರತೀಯ ಸೇನೆಯಲ್ಲಿದ್ದರು. ಅದಕ್ಕಾಗಿಯೇ ಅವರ ಜೀವನದಲ್ಲಿ ಶಿಸ್ತಿಗೆ ಹೆಚ್ಚಿನ ಮಹತ್ವವಿದೆ.
ಮಾಧ್ಯಮ ವರದಿಗಳ ಪ್ರಕಾರ, ಪ್ರಿಯಾಂಕ ಚೋಪ್ರಾ ಅವರ ತಂದೆ ಸೇನೆಯಲ್ಲಿ ವೈದ್ಯರಾಗಿದ್ದರು. ಈ ಬಗ್ಗೆ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.
ರಕುಲ್ ಪ್ರೀತ್ ಸಿಂಗ್ ಅವರ ತಂದೆಯೂ ಭಾರತೀಯ ಸೇನಾ ಅಧಿಕಾರಿಯಾಗಿದ್ದರು. ರಕುಲ್ ಪ್ರೀತ್ ಸಿಂಗ್ ಬಾಲಿವುಡ್, ಟಾಲಿವುಡ್ ಅಂಗಳದಲ್ಲಿ ಬ್ಯುಸಿಯಾಗಿರುವ ನಟಿಯಾಗಿದ್ದಾರೆ.
ನೇಹಾ ಧೂಪಿಯಾ ಅವರ ತಂದೆ ಭಾರತೀಯ ನೌಕಾಪಡೆಯಲ್ಲಿ ಅಧಿಕಾರಿಯಾಗಿದ್ದರು. ಸಿನಿಮಾಗಳಿಂದ ದೂರವಿರೋ ನೇಹಾ ಧೂಪಿಯಾ ತಮ್ಮದೇ ಶೋಗಳನ್ನು ನಡೆಸುತ್ತಿದ್ದಾರೆ.
ನಿಮ್ರತ್ ಕೌರ್ ಅವರ ತಂದೆ ಮೇಜರ್ ಭೂಪಿಂದರ್ ಸಿಂಗ್ ಉಗ್ರರ ವಿರುದ್ಧ ಹೋರಾಡುತ್ತಾ ಹುತಾತ್ಮರಾದರು. ನಿಮ್ಮತ್ ಕೌರ್ ಉದಯನ್ಮೋಕ ಕಲಾವಿದೆಯಾಗಿದ್ದಾರೆ.
ಚಿತ್ರಾಂಗದಾ ಸಿಂಗ್ ಅವರ ತಂದೆ ಕರ್ನಲ್ ನಿರಂಜನ್ ಸಿಂಗ್ ಸೇನೆಯಲ್ಲಿದ್ದರು. ಚಿತ್ರಂಗದಾ ಬಾಲಿವುಡ್ ನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಈ ಪಟ್ಟಿಯಲ್ಲಿ ಸುಷ್ಮಿತಾ ಸೇನ್ ಅವರ ತಂದೆಯ ಹೆಸರೂ ಸೇರಿದೆ. ಅವರ ತಂದೆ ವಾಯುಪಡೆಯಲ್ಲಿದ್ದರು. ಅನೇಕ ಸಂದರ್ಶನಗಳಲ್ಲಿ ಸುಷ್ಮಿತಾ ತಮ್ಮ ಕುಟುಂಬದ ಬಗ್ಗೆ ಹೇಳಿಕೊಂಡಿದ್ದಾರೆ.
ಗುಲ್ ಪನಾಗ್ ಅವರ ತಂದೆ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿದ್ದರು. ಗುಲ್ ಪನಾಗ್ 199ರ ಫೆಮಿನಾ ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು.
Mahmad Rafik