ಕೇದಾರನಾಥದಲ್ಲಿ ಬಿಜೆಪಿ ನಾಯಕನ ಮಗನ ಜೊತೆ ಕಾಣಿಸಿಕೊಂಡ ಸಾರಾ ಆಲಿ ಖಾನ್…ಡೇಟಿಂಗ್ ಮಾಡ್ತಿದ್ಯಾ ಜೋಡಿ?

Published : Oct 31, 2024, 05:02 PM ISTUpdated : Nov 01, 2024, 09:23 AM IST

ಬಾಲಿವುಡ್ ನಟಿ ಸಾರಾ ಆಲಿ ಖಾನ್ ಕೇದಾರನಾಥನ ದರ್ಶನ ಪಡೆದಿದ್ದು, ಅವರ ಜೊತೆಗೆ ಬಿಜೆಪಿ ನಾಯಕರೊಬ್ಬರ ಮಗ ಕೂಡ ಇದ್ದು, ಇದೀಗ ಡೇಟಿಂಗ್ ರೂಮರ್ಸ್ ಕೇಳಿ ಬರ್ತಿದೆ. 

PREV
16
ಕೇದಾರನಾಥದಲ್ಲಿ ಬಿಜೆಪಿ ನಾಯಕನ ಮಗನ ಜೊತೆ ಕಾಣಿಸಿಕೊಂಡ ಸಾರಾ ಆಲಿ ಖಾನ್…ಡೇಟಿಂಗ್ ಮಾಡ್ತಿದ್ಯಾ ಜೋಡಿ?

ಸಾರಾ ಅಲಿ ಖಾನ್ ಇತ್ತೀಚೆಗೆ ಕೇದಾರನಾಥಕ್ಕೆ ಭೇಟಿ ನೀಡಿದ್ದು, ಅವರ ಒಂದಷ್ಟು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ, ಇದರಲ್ಲಿ ಸಾರಾ ಮಾಡೆಲ್ ಅರ್ಜುನ್ ಪ್ರತಾಪ್ ಬಾಜ್ವಾ ಅವರೊಂದಿಗೆ ಕಾಣಿಸಿಕೊಂಡಿದ್ದು. ಇಬ್ಬರೂ ದೇವರ ಮುಂದೆ ನಮಸ್ಕರಿಸುತ್ತಿದ್ದಾರೆ. ಅರ್ಜುನ್ ಸಾರಾ ಪಕ್ಕದಲ್ಲಿ ನಿಂತಿದ್ದಾನೆ. ಹಾಗಾಗಿ ಇವರಿಬ್ಬರು ಡೇಟಿಂಗ್ ಮಾಡ್ತಿದ್ದಾರೆ ಎನ್ನುವ ಸುದ್ದಿ ಸದ್ದು ಮಾಡ್ತಿದೆ. 
 

26

ಸಾರಾ ಅಲಿ ಖಾನ್ ಬಾಲಿವುಡ್ ಸ್ಟಾರ್ ಆಗಿದ್ದು, ಅವರ ರಿಲೇಶನ್ ಶಿಪ್ ಬಗ್ಗೆ ತಿಳಿದುಕೊಳ್ಳೋಕೆ ಜನ ಕುತೂಹಲದಿಂದಿರುತ್ತಾರೆ . ಆದ್ರೆ ಸಾರಾ ಮಾತ್ರ ಹೆಚ್ಚಾಗಿ ತಮ್ಮ ರಿಲೇಶನ್’ಶಿಪ್ ಬಗ್ಗೆ ಸೈಲೆಂಟ್ ಆಗಿರೋದಕ್ಕೆ ಇಷ್ಟಪಡ್ತಾರೆ. ಇದೀಗ ಅರ್ಜುನ್ ಪ್ರತಾಪ್ ಜೊತೆ ಕೇದರನಾಥದಲ್ಲಿ ಕಾಣಿಸಿಕೊಂಡಿದ್ದು, ಜನರು ಇವರಿಬ್ಬರು ಡೇಟಿಂಗ್ ಮಾಡುವ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. 
 

36

ಇತ್ತೀಚೆಗೆ, ಸಾರಾ ಕೆಲವು ಸ್ನೇಹಿತರೊಂದಿಗೆ ಕೇದಾರನಾಥಕ್ಕೆ (Kedarnath) ಟ್ರಾವೆಲ್ ಮಾಡಿದ್ದು, ಸೂಪರ್ ಮಾಡೆಲ್ ಅರ್ಜುನ್ ಪ್ರತಾಪ್ ಬಾಜ್ವಾ ಅವರೊಂದಿಗಿನ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಹಾಗಾಗಿ ಸಾರಾ ಮತ್ತು ಅರ್ಜುನ್ ಡೇಟಿಂಗ್ ಮಾಡುತ್ತಿದ್ದಾರೆಯೇ ಎಂದು ಪ್ರಶ್ನಿಸುತ್ತಿದ್ದಾರೆ ಜನ. 
 

46

ವೈರಲ್ ಆಗಿರುವ ಚಿತ್ರಗಳಲ್ಲಿ, ಸಾರಾ ಅಲಿ ಖಾನ್ (Sara Ali Khan) ಮತ್ತು ಅರ್ಜುನ್ ಪರಸ್ಪರ ಪಕ್ಕದಲ್ಲಿ ನಿಂತು ದೇವರನ್ನು ಪೂಜಿಸುತ್ತಿರುವುದನ್ನು ಕಾಣಬಹುದು.  ಆದರೆ ಇಬ್ಬರೂ ಡೇಟಿಂಗ್ ಮಾಡುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಇಬ್ಬರೂ ಫ್ರೆಂಡ್ಸ್ ಅಂತಾನೂ ಜನ ಹೇಳ್ತಿದ್ದಾರೆ. ಆದರೆ ಯಾವುದು ನಿಜಾ, ಯಾವುದು ಸುಳ್ಳು ಅನ್ನೋದು ಗೊತ್ತಿಲ್ಲ.
 

56

ಅರ್ಜುನ್ ಪ್ರತಾಪ್ ಬಾಜ್ವಾ ಯಾರು?
ಅರ್ಜುನ್ ಪ್ರತಾಪ್ ಬಾಜ್ವಾ (Arjun Pratap Bajwa) ಸೂಪರ್ ಮಾಡೆಲ್ ಮತ್ತು ನಟ. ರೋಹಿತ್ ಮತ್ತು ವರುಣ್ ಬಾಲ್ ಅವರಂತಹ ಡಿಸೈನರ್ ಡ್ರೆಸ್ ಗಳಿಗೆ ಇವರು ರ್ಯಾಂಪ್ ವಾಕ್ ಮಾಡ್ತಾರೆ. ಅಷ್ಟೇ ಅಲ್ಲ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ನಿರ್ದೇಶಕ ಗಿರೀಶ್ ಮಲಿಕ್ ಅವರ 'ಬ್ಯಾಂಡ್ ಆಫ್ ಮಹಾರಾಜಾಸ್' ಚಿತ್ರದಲ್ಲೂ ಅರ್ಜುನ್ ಕಾಣಿಸಿಕೊಂಡಿದ್ದಾರೆ. 

66

ಅರ್ಜುನ್ ಬಿಜೆಪಿ ರಾಜಕಾರಣಿಯ ಮಗ
ಅರ್ಜುನ್ ಪ್ರತಾಪ್ ಬಾಜ್ವಾ ಅವರು ಪಂಜಾಬ್ನ ಭಾರತೀಯ ಜನತಾ ಪಕ್ಷದ (BJP) ಪ್ರಸ್ತುತ ಉಪಾಧ್ಯಕ್ಷರಾಗಿರುವ ರಾಜಕಾರಣಿ ಫತೇಹ್ ಜಂಗ್ ಸಿಂಗ್ ಬಜ್ವಾ ಅವರ ಪುತ್ರ.  ಹಾಗಾಗಿ ಎಲ್ಲೆಡೆ ಬಿಜೆಪಿ ನಾಯಕನ ಮಗನೊಂದಿಗೆ ಸಾರಾ ಆಲಿ ಖಾನ್ ಡೇಟಿಂಗ್ ಮಾಡುವ ಬಗ್ಗೆ ರೂಮರ್ಸ್ ಹರಡುತ್ತಿದೆ. 
 

Read more Photos on
click me!

Recommended Stories