ಈ ಕಾರಣಕ್ಕೆ ಬ್ರೇಕ್‌‌ ಆಯಿತು ಪ್ರೀತಿ ಜಿಂಟಾ ಮತ್ತು ನೆಸ್ ವಾಡಿಯಾ ಸಂಬಂಧ‌!

Suvarna News   | Asianet News
Published : Feb 03, 2021, 05:53 PM ISTUpdated : Feb 03, 2021, 06:04 PM IST

ಬಾಲಿವುಡ್‌ನಲ್ಲಿ ಡಿಂಪಲ್ ಗರ್ಲ್ ನಟಿ ಪ್ರೀತಿ ಜಿಂಟಾ ಇತ್ತೀಚೆಗೆ ತಮ್ಮ 46ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಜನವರಿ 31, 1975ರಂದು ಜನಿಸಿದ ಪ್ರೀತಿಯ ಹೆಸರು ಮದುವೆಗಿಂತ ಮೊದಲು, ಉದ್ಯಮಿ ನೆಸ್ ವಾಡಿಯಾ ಜೊತೆ ಕೇಳಿಬರುತ್ತಿತ್ತು. ಪ್ರೀತಿ ಜಿಂಟಾ ಮತ್ತು ನೆಸ್ ವಾಡಿಯಾ ಐದು ವರ್ಷಗಳ ಕಾಲ ನಿಕಟ ಸಂಬಂಧ ಹೊಂದಿದ್ದರು. ಫಿಲ್ಮ್ ಪಾರ್ಟಿಗಳು, ಪ್ರಶಸ್ತಿ ಸಮಾರಂಭಗಳಲ್ಲಿ ಮತ್ತು ಕ್ರಿಕೆಟ್ ಮೈದಾನದಲ್ಲಿ ಈ ಜೋಡಿ ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಿತ್ತು. ಸ್ನೇಹದಿಂದ ಪ್ರಾರಂಭವಾದ ಸಂಬಂಧ ಪ್ರೀತಿಗೆ ತಿರುಗಿತ್ತು. ನೆಸ್ ಅವರ ಆಜ್ಞೆಯ ಮೇರೆಗೆ ಪ್ರೀತಿ ಬಾಲಿವುಡ್‌ನಿಂದ ಸಹ  ದೂರವಾಗಿದ್ದರಂತೆ. ಆದರೆ, ನೆಸ್ ವಾಡಿಯಾರ ತಾಯಿ ಈ ಪ್ರೀತಿಯನ್ನು ಒಪ್ಪಲಿಲ್ಲ. ಅದಕ್ಕೇ ಮುರಿಯಿತಾ ಈ ಸಂಬಂಧ?

PREV
111
ಈ ಕಾರಣಕ್ಕೆ ಬ್ರೇಕ್‌‌ ಆಯಿತು ಪ್ರೀತಿ ಜಿಂಟಾ ಮತ್ತು ನೆಸ್ ವಾಡಿಯಾ ಸಂಬಂಧ‌!

ಪ್ರೀತಿ ಮತ್ತು ನೆಸ್ ವಾಡಿಯಾ ಇಬ್ಬರೂ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದರು. 2008ರಲ್ಲಿ ಜೊತೆಯಾಗಿ ಐಪಿಎಲ್‌ನ ಕಿಂಗ್ಸ್ ಇಲೆವೆನ್ ಪಂಜಾಬ್ ಅನ್ನು ಖರೀದಿಸಿದರು ಮತ್ತು ಬ್ಯುಸಿನೆಸ್‌ ಪಾರ್ಟ್‌ನರ್‌ಗಳಾದರು. ಆದರೀಗ ಒಬ್ಬರ ಮುಖವನ್ನು ಮತ್ತೊಬ್ಬರು ನೋಡೋಲ್ಲ.

211

ಒಂದು ಕಾಲದಲ್ಲಿ ತಮ್ಮ ಸಂಬಂಧದಿಂದ ಸುದ್ದಿಯಾದ  ಈ ಇಬ್ಬರು ಸೆಲೆಬ್ರೆಟಿಗಳು  2009ರಲ್ಲಿ ಬೇರೆಯಾದರು. ಅಂದಿನಿಂದ ನೆಸ್ ಮತ್ತು ಪ್ರೀತಿ ಕೇವಲ ಬ್ಯುಸಿನೆಸ್‌ ಪಾರ್ಟ್‌ನರ್ಸ್‌ ಮಾತ್ರ. ಮ್ಯಾಚ್‌ ಸಮಯದಲ್ಲಿ ಇಬ್ಬರೂ ಹಾಜರಿರುತ್ತಾರೆ. ಆದರೆ ಮಾತನಾಡಿಕೊಳ್ಳುವುದಿಲ್ಲ.

311

ಮೇ 30, 2014ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪಂದ್ಯ ನಡೆಯಿತು. ಅದರಲ್ಲಿ ನೆಸ್ ವಾಡಿಯಾ ತಮ್ಮ ತಾಯಿ ಮತ್ತು ಸೋದರಳಿಯರೊಂದಿಗೆ ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ತಡವಾಗಿ ಬಂದರು. 

411

ಆದ್ದರಿಂದ ಅವರಿಗೆ ವಿಐಪಿ ಬಾಕ್ಸ್‌ನಲ್ಲಿ  ಸ್ಥಾನ ಸಿಗಲಿಲ್ಲ. ಅವರಿಗಾಗಿ ರಿಸರ್ವ್‌ ಮಾಡಿದ್ದ ಸೀಟ್‌ಗಳಲ್ಲಿ ಪ್ರೀತಿ ಜಿಂಟಾ ಅವರ ಸ್ನೇಹಿತರು ಕುಳಿತ್ತಿದ್ದರು ಮತ್ತು  ಅವರನ್ನು 10-15 ನಿಮಿಷಗಳ ಕಾಲ ಕಾಯುವಂತೆ ಕೇಳಲಾಯಿತು.  

511

ಈ ಸಮಯದಲ್ಲಿ, ನೆಸ್ ವಾಡಿಯಾ ಅವರಿಗೆ ಕಾಯ್ದಿರಿಸಿದ ಸೀಟ್‌ಗಳು ಏನಾಯಿತು ಎಂಬುದರ ಕುರಿತು ಮಾತನಾಡಲು ಪ್ರೀತಿ ಬಳಿ ಹೋದರು. ಆಗ ಅವರ ನಡುವೆ ತೀವ್ರ ಚರ್ಚೆ ನೆಡೆಯಿತು. ಜನರಿಂದ ತಪ್ಪಿಸಿಕೊಳ್ಳಲು ಇಬ್ಬರೂ ವಿಐಪಿ ಬಾಕ್ಸ್‌ನಿಂದ ಕಾರ್ಪೊರೇಟ್ ಆಫೀಸ್‌ಗೆ ಹೋದರು. 

611

ಈ ವಿಚಾರವಾಗಿ ನೆಸ್‌ವಾಡಿಯಾ ವಿರುದ್ಧ ದೂರನ್ನೂ ದಾಖಲಿಸಿದ್ದರು ಪ್ರೀತಿ.

711

ದೂರಿನಲ್ಲಿ ಪ್ರೀತಿ, ನೆಸ್ ತಮಗೆ ಕಿರುಕುಳ, ನಿಂದನೆ ಮತ್ತು ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದರು. ಅಲ್ಲದೇ, ನೆಸ್ ನನ್ನ ಮುಖಕ್ಕೆ ಸುಡುವ ಸಿಗರೇಟನ್ನು ಎಸೆದು ಕೋಣೆಗೆ ಬೀಗ ಹಾಕಿದ್ದ, ಎಂದೂ ಆರೋಪಿಸಿದ್ದರು. 

811

ಆದರೆ, ನೆಸ್ ಈ ಆರೋಪಗಳನ್ನು ತಳ್ಳಿ ಹಾಕಿದರು. ಅಷ್ಟು ದಿನ ಜೊತೆಯಾಗಿ, ಬ್ಯೂಸಿನೆಸ್ ಸಹ ಆರಂಭಿಸಿದ ಜೋಡಿಯ ನಡುವೆ ಬಿರುಕು ಬಿಟ್ಟಿತು. 2009ರಲ್ಲಿ ಈ ಜೋಡಿ ಬ್ರೇಕ್ ಆಗಿರುವ ವಿಷಯ ಖಚಿತವಾಯಿತು.

911

ಆದರೆ, ಇಬ್ಬರೂ ಸಾರ್ವಜನಿಕವಾಗಿ ಇದರ ಬಗ್ಗೆ ಏನನ್ನೂ ಹೇಳಲಿಲ್ಲ. ಈ ಜೋಡಿ ಬೇರೆಯಾಗಲು ನೆಸ್ ತಾಯಿ ಕಾರಣ ಎನ್ನುತ್ತಾರೆ. ಈ ಮೊದಲು ನೆಸ್‌ ತಾಯಿ ಈ ಸಂಬಂಧದ ಬಗ್ಗೆ ಪ್ರತಿಕ್ರಿಯಿಸಿದ್ದು, ನೆಸ್ ಯಾವ ಜೀಬ್ರಾ ಜೊತೆ ಬೇಕಾದರೂ ಮದುವೆಯಾಗಲಿ, ನನಗೇನೂ ವ್ಯತ್ಯಾಸ ತಿಳಿಯೋಲ್ಲ ಎನ್ನುವ ಮೂಲಕ ಜಿಂಟಾಗೆ ಟಾಂಟ್ ಕೊಟ್ಟಿದ್ದರು.

1011

ನೆಸ್‌ನ ಬಿಲಿಯನೇರ್ ತಂದೆ ನುಸ್ಲಿ ವಾಡಿಯಾ 'ವಾಡಿಯಾ ಗ್ರೂಪ್ಸ್ ಕಂಪನಿ'ಯ ಒಡೆಯ. ತಾಯಿ ಮೌರೀನ್ ವಾಡಿಯಾ ಫ್ಯಾಶನ್ ನಿಯತಕಾಲಿಕೆ 'ಗ್ಲಾಡ್ರಾಗ್ಸ್' ಓನರ್‌. ನೆಸ್ ಪಾಕಿಸ್ತಾನ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾರ ಮರಿಮ್ಮಗ. ನೆಸ್ ಅವರ ವಾಡಿಯಾ ಗ್ರೂಪ್ ಕಂಪನಿಗಳಲ್ಲಿ ಒಂದಾದ ಬ್ರಿಟಾನಿಯಾ ಇಂಡಸ್ಟ್ರಿ ನಿರ್ದೇಶಕರೂ ಹೌದು.

1111

ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರ ಏಕೈಕ ಪುತ್ರಿ ದಿನಾ, ಪಾರ್ಸಿ ಉದ್ಯಮಿ ನೆವಿಲ್ಲೆ ವಾಡಿಯಾ ಅವರನ್ನು ವಿವಾಹವಾದರು. ದಿನಾ ಖ್ಯಾತ ಉದ್ಯಮಿ ನುಸ್ಲಿ ವಾಡಿಯಾ ಮತ್ತು ನೆಸ್ ವಾಡಿಯಾ ಅವರ ಅಜ್ಜಿ.

click me!

Recommended Stories