ಫಿಶ್‌ ಕರಿ ಕಳುಹಿಸಿ ಬಸುರಿ ಕರೀನಾ ಬಯಕೆ ಈಡೇರಿಸಿದ ಮಲೈಕಾ ಅಮ್ಮ!

First Published | Feb 3, 2021, 5:31 PM IST

ಕರೀನಾ ಕಪೂರ್ ಪ್ರೆಗ್ನೆಂಸಿಯ ಅಂತಿಮ ತ್ರೈಮಾಸಿಕದಲ್ಲಿದ್ದಾರೆ. ಅವರು ತಮ್ಮ ಎರಡನೇ ಮಗುವನ್ನು ಯಾವಾಗ ಬೇಕಾದರೂ ಬರ ಮಾಡಿಕೊಳ್ಳಬಹುದು. ಈ ಸಂಧರ್ಭದಲ್ಲಿ ನಟಿಯ ಫ್ರೆಂಡ್‌ ಮಲೈಕಾ ಅರೋರಾ ಅವರ ತಾಯಿ ಕರೀನಾಗಾಗಿ ಫಿಶ್‌ ಕರೀ ಮಾಡಿ ಕಳುಹಿಸಿದ್ದಾರೆ. ಆ ಮೂಲಕ ಗರ್ಭಿಣಿಯ ಬಯಕೆ ತೀರಿಸಿದ್ದಾರೆ. ಈ ವಿಷಯವನ್ನು ಕರೀನಾ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಕರೀನಾ ಕಪೂರ್ ಇನ್ಸ್ಟಾಗ್ರಾಮ್‌ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ತಮ್ಮ ಪ್ರೆಗ್ನೆಂಸಿಯ ಅನುಭವಗಳನ್ನು ಹಂಚಿ ಕೊಳ್ಳುತ್ತಲೇ ಇರುತ್ತಾರೆ. ಹೊರ ಹೋಗುವಾಗ ಅವರ ತೊಡೋ ಉಡುಪು ಸಿಕ್ಕಾಪಟ್ಟೆ ಆಕರ್ಷಣೀಯವಾಗಿರುತ್ತದೆ.
undefined
ಗಿಡಗಳಿಗೆ ನೀರುಣಿಸುವುದು, ಫೇಸ್‌ ಮಾಸ್ಕ್‌ ಅಪ್ಲೇ ಮಾಡಿಕೊಳ್ಳುವುದು, ಟಿಮ್ ಟಿಮ್‌ನನ್ನು ಮುದ್ದಾಡುವುದು ಹೀಗೆ ಅವರು ಯಾವಾಗಲೂ ತಮ್ಮದಿನನಿತ್ಯದ ಆಗುಹೋಗುಗಳನ್ನು ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ.
undefined
Tap to resize

ಎರಡನೇ ಬಾರಿಗೆ ತಾಯಿಯಾಗಲಿರುವ ಸುದ್ದಿಯನ್ನು ಘೋಷಿಸಿದಾಗಿನಿಂದ, ತನ್ನ ಪ್ರೆಗ್ನೆಂಸಿಲೈಫ್‌ಬಗ್ಗೆ ಹೆಚ್ಚು ಪೋಸ್ಟ್‌ ಮಾಡುತ್ತಿದ್ದಾರೆ.
undefined
ಕರೀನಾ ಯೋಗ ಮತ್ತು ಆಹಾರದ ಬಯಕೆ ಎರಡನ್ನೂ ಬ್ಯಾಲೆನ್ಸ್‌ ಮಾಡುತ್ತಿದ್ದಾರೆ.
undefined
ನಿನ್ನೆ, ಅವರ ಬೆಸ್ಟ್ ಫ್ರೆಂಡ್‌ ಮಲೈಕಾ ಅರೋರಾ ಅವರ ತಾಯಿ ಜಾಯ್ಸ್ ಅರೋರಾ ಸಿದ್ಧಪಡಿಸಿದ ಮೀನಿನ ಅಡುಗೆ ಬಗ್ಗೆ ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
undefined
ರುಚಿಯಾದ ಪಿಶ್‌ ಕರಿಯ ಮೂಲಕ ತಮ್ಮ ಬಯಕೆ ಪೂರೈಸಿದ್ದಕ್ಕಾಗಿ ಜಾಯ್ಸ್‌ಗೆ ಧನ್ಯವಾದ ಅರ್ಪಿಸಿದ್ದಾರೆ ಬೆಬೊ.
undefined
ಮೀನಿನ ಮಸಾಲೆಯ ಫೋಟೋಜೊತೆ 'ಧನ್ಯವಾದಗಳು @joycearora ಅತ್ಯುತ್ತಮ ಊಟವನ್ನು ನನಗೆ ನೀಡಿದ್ದಕ್ಕಾಗಿ' ಎಂದು ಬರೆದಿದ್ದಾರೆ ಕರೀನಾ.
undefined
ಹಾಗೇ ಮಲೈಕಾ ಅರೋರಾ ಕೂಡ ತಮ್ಮ ತಾಯಿ ತಯಾರಿಸಿದ ಮೀನಿನ ಕರೀಯ ಫೋಟೋವನ್ನು ಇನ್‌ಸ್ಟಾ ಸ್ಟೋರಿಯಲ್ಲಿ ಪೋಸ್ಟ್‌ ಮಾಡಿ 'ಮಾಮ್‌ @joycearora ನಿಮ್ಮ ಫೀಶ್‌ ಕರೀ ಎಪಿಕ್‌' ಎಂದು ಕ್ಯಾಪ್ಷನ್‌ ನೀಡಿದ್ದಾರೆ.ಅಂದಹಾಗೆ ಮಲೈಕಾ ಅರೋರಾ ಅಮ್ಮ ಕೇರಳ ಮೂಲದವರು. ಓಣಮ್ ಎಲ್ಲಾ ಸಾಂಪ್ರದಾಯಿಕ ಖಾದ್ಯಗಳನ್ನು ತಯಾರಿಸಿ, ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ.
undefined
ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ಪತಿ ಸೈಫ್ ಅಲಿ ಖಾನ್ ಕರೀನಾರ ಹೆರಿಗೆಯ ದಿನಾಂಕವನ್ನು ಬಹಿರಂಗಪಡಿಸಿದರು. ಈ ವಾರದಲ್ಲಿಯೇ ತಮ್ಮ ಎರಡನೇ ಮಗುವನ್ನು ನಿರೀಕ್ಷಿಸುತ್ತಿದ್ದಾರೆ ಈ ಕಪಲ್‌.
undefined
'ನಿಮಗೆ ಅದರ ಅನುಭವವಿದ್ದರೂ, ನಿಮ್ಮ ಎರಡನೆಯ ಫ್ರೆಗ್ನೆಂಸಿ ನಿಮಗೆ ಆಶ್ಚರ್ಯವನ್ನುಂಟು ಮಾಡುತ್ತದೆ. ಎರಡನೇ ಬಾರಿಗೆ ತುಂಬಾ ಸುಲಭ ಎನ್ನುತ್ತಾರೆ, ಆದರೆ ಅದು ಯಾವಾಗಲೂ ನಿಜವಲ್ಲ. ಖಂಡಿತ, ಮೊದಲ ಬಾರಿಗಿಂತ ಹೆಚ್ಚು ಅನುಭವ ಹೊಂದಿರುತ್ತೇವೆ. ಆದರೆ ಎರಡನೇ ಪ್ರೆಗ್ನೆಂಸಿ ಖಂಡಿತವಾಗಿಯೂ ಮೊದಲ ಬಾರಿಗಿಂತ ದೈಹಿಕವಾಗಿ ಭಿನ್ನವಾಗಿರುತ್ತದೆ,' ಎಂದು ಇತ್ತೀಚೆಗೆ ಹೇಳಿಕೊಂಡಿದ್ದರು ರೆಫ್ಯೂಜೀ ನಟಿ.
undefined

Latest Videos

click me!