ಮುರಿದ ಬಿದ್ದ ಮೊದಲ ದಾಂಪತ್ಯ.. ತರಾತುರಿಯಲ್ಲಿ 2ನೇ ಮದುವೆಗೆ ಸಜ್ಜಾದ ಖ್ಯಾತ ಬಾಲಿವುಡ್ ನಟಿ!

Published : Jan 04, 2026, 01:07 PM IST

ಪ್ರೀತಿ ವಿಷಯದಲ್ಲಿ ಕೆಲವೊಮ್ಮೆ ಕೆಲವರು ಸೋತು ಸುಣ್ಣವಾಗುತ್ತಾರೆ. ಯಾವುದೋ ಕಾರಣಕ್ಕೆ ಪ್ರೀತಿಯನ್ನು ಕಳೆದುಕೊಳ್ಳುತ್ತಾರೆ. ಯಾರದು ಸರಿ ಯಾರದು ತಪ್ಪು ಅಂತ ಡಿಬೇಟ್ ಮಾಡುತ್ತ ಕುಳಿತುಕೊಂಡು ಕಾಲಾಹರಣ ಮಾಡುವ ಬದಲು ಮತ್ತೊಂದು ಮದುವೆಗೆ ಸಜ್ಜಾಗುತ್ತಾರೆ ಹಲವರು. ಈ ನಟಿಯ ಕಥೆ ನೋಡಿ..

PREV
111

5ನೇ ವರ್ಷಕ್ಕೆ ಮುರಿದು ಬಿತ್ತು ಮೊದಲ ದಾಂಪತ್ಯ

ಬಾಲಿವುಡ್ ನಟಿಯೊಬ್ಬರ ನೋವಿನ ಕಥೆ ಇದು.. ಇಷ್ಟಪಟ್ಟು ಮಾಡಿಕೊಂಡಿದ್ದ ಮದುವೆ ಕೇವಲ 5 ವರ್ಷಕ್ಕೇ ಮುರಿದು ಬಿತ್ತು. ಆದರೆ, ಎಷ್ಟು ಅಂತ ಕೊರಗೋದು ಇನ್ನೂ ಎಂದು ದಿಟ್ಟ ಹೆಜ್ಜೆಯಿಟ್ಟ ನಟಿ ಇದೀಗ ಇರುವ ನೋವು ಮರೆತು ತಮ್ಮ 40ನೇ ವರ್ಷದಲ್ಲಿ 2ನೇ ಮದುವೆಗೆ ಸಿದ್ಧವಾಗಿದ್ದಾರೆ. ತಮ್ಮ ಸಹನಟನೊಂದಿಗೆ ಮತ್ತೆ ಹಸೆಮಣೆ ಏರಲು ಈ ಖ್ಯಾತ ನಟಿ ಸಜ್ಜಾಗಿದ್ದಾರೆ. ಹಾಗಿದ್ದರೆ ಇದೇನು ಕಥೆ? ಮುಂದೆ ನೋಡಿ..

211

ನಟಿ ಕೀರ್ತಿ ಕುಲ್ಹರಿ ಕೂಡ ಈಗ ಅದನ್ನೇ ಮಾಡಿದ್ದಾರೆ. ಮದುವೆ ಮುರಿದುಬಿತ್ತು ಅಂತ ಕೊರಗುತ್ತಾ ಕುಳಿತಿಲ್ಲ. ಬದಲಿಗೆ ಮತ್ತೊಂದು ಸಂಬಂಧಕ್ಕೆ ಸಿದ್ಧವಾಗಿದ್ದಾರೆ. ಹಾಗಂತ ಅವರೇ ಇನ್‌ಸ್ಟಾಗ್ರಾಂ ಪೋಸ್ಟ್‌ ಮೂಲಕ ಈ ಸಂಗತಿಯನ್ನು ಹಂಚಿಕೊಂಡಿದ್ದಾರೆ.

311

ಜಗವೇ ಒಂದು ನಾಟಕರಂಗ. ಸರಳ ರೇಖೆಯಂತೆ ಬದುಕು ಸಾಗುತ್ತಿರಬೇಕು. ಯಾರ ಬಗ್ಗೆ ಆಲೋಚನೆ ಮಾಡದೇ ಮುನ್ನಡೆಯುತ್ತಿರಬೇಕು. ಒಂದು ಸಂಬಂಧ ಹೊರಟುಹೋದರೆ ಮತ್ತೊಂದರಲ್ಲಿ ಬೀಳಬೇಕು ಎಂಬ ಕಾಲ ಇದು. ಅದರಂತೆ ಕೀರ್ತೀ ಮುಂದೆ ಸಾಗುತ್ತಿದ್ದಾರೆ.

ಹೌದು, ನಟಿ ಕೀರ್ತಿ ಕುಲ್ಹರಿ ಅವರು ಬಾಲಿವುಡ್‌ನ ಕನಸುಕಂಗಳ ಚೆಲುವೆ. ಕಳೆದ 15 ವರ್ಷಗಳಿಂದ ಹಲವಾರು ಚಿತ್ರಗಳಲ್ಲಿ ಮತ್ತು ವೆಬ್ ಸರಣಿಗಳಲ್ಲಿ ಕೃತಿ ಕಾಣಿಸಿಕೊಂಡಿದ್ದಾರೆ. ತಮ್ಮ ಅಭಿನಯದ ಮೂಲಕ ಅಸಂಖ್ಯಾತ ಜನರ ಹೃದಯವನ್ನು ಕೂಡ ಗೆದ್ದಿದ್ದಾರೆ.

411

ನಟಿ ಕೀರ್ತಿ ಕುಲ್ಹರಿ ಅಭಿನಯಿಸಿದ ಕೆಲ ಪ್ರಮುಖ ಚಿತ್ರಗಳು ಹಾಗೂ ವೆಬ್ ಸರಣಿಗಳ ಲಿಸ್ಟ್ ಇಲ್ಲಿದೆ.. ಪಿಂಕ್, ಇಂಧು ಸರ್ಕಾರ್, ಉರಿ -ದಿ ಸರ್ಜಿಕಲ್ ಸ್ಟ್ರೈಕ್, ಮಿಷನ್ ಮಂಗಲ್, ಮುಂತಾದ ಸಿನಿಮಾಗಳು ಹಾಗೂ ಕ್ರಿಮಿನಲ್ ಜಸ್ಟಿಸ್, ಹೂಮನ್, ಫೋರ್ ಮೋರ್ ಶಾಟ್ಸ್, ಎಂಬ ಜನಪ್ರಿಯ ವೆಬ್ ಸರಣಿಗಳಲ್ಲಿ ಕೀರ್ತಿ ನಟಿಸಿದ್ದಾರೆ.

511

ಅದರಲ್ಲಿಯೂ ವಿಶೇಷವಾಗಿ "ಫೋರ್ ಮೋರ್ ಶಾಟ್ಸ್" ಕೀರ್ತಿ ಕುಲ್ಹರಿ ಅವರಿಗೆ ಅಪಾರವಾದ ಹೆಸರು-ಕೀರ್ತಿ ತಂದು ಕೊಡ್ತು. 2019ರಿಂದ ಈ ವೆಬ್ ಸರಣಿಯ ಭಾಗವಾಗಿರುವ ಕೃತಿ ಇಲ್ಲಿಯವರೆಗೆ ನಾಲ್ಕು ಸೀಸನ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.

611

ಇಂಥ ಕೀರ್ತಿ ಕೀರ್ತಿ ಕುಲ್ಹರಿ ಸದ್ಯ ತಮ್ಮನ್ನು ಖ್ಯಾತಿಯ ಶಿಖರಕ್ಕೆ ತಲುಪಿಸಿದ "ಫೋರ್ ಮೋರ್ ಶಾಟ್ಸ್ ಫೀಸ್"ನ ಚಿತ್ರೀಕರಣದಲ್ಲಿ ಭಾಗವಹಿಸುತ್ತಲೇ ತಮ್ಮ ಸಹನಟ ರಾಜೀವ್ ಸಿದ್ಧಾರ್ಥಗೆ ಮನ ಸೋತಿದ್ದಾರೆ, ಪ್ರೀತಿಯಲ್ಲಿ ಬಿದ್ದಿದ್ದಾರೆ.

711

ರಾಜೀವ್ ಪ್ರೀತಿಯಲ್ಲಿ ತಾವು ಬಿದ್ದಿರುವ ವಿಚಾರವನ್ನು ಸದ್ಯ ಕೀರ್ತಿ ಕುಲ್ಹರಿ ಅವರು ಹೊಸ ವರ್ಷದ ಸಂಭ್ರಮದಲ್ಲಿ ಹಂಚಿಕೊಂಡಿದ್ದಾರೆ. ರಾಜೀವ್ ಸಿದ್ದಾರ್ಥ ಅವರ ಜೊತೆ ತಾವು ಕಳೆದ ಸುಂದರ ಕ್ಷಣಗಳ ಫೋಟೊಗಳನ್ನು ಹಂಚಿಕೊಂಡಿರುವ ಕೃತಿ "ಒಂದು ಚಿತ್ರ ಸಾವಿರ ಪದಗಳಿಗೆ ಸಮ" ಎಂದು ಬರೆದುಕೊಂಡಿದ್ದಾರೆ.

811

ಸದ್ಯ ಕೀರ್ತಿ ಕುಲ್ಹರಿ ಮತ್ತು ರಾಜೀವ್ ಸಿದ್ಧಾರ್ಥ ಅವರಿಗೆ ಹಲವರು ಶುಭಾಶಯಗಳನ್ನು ಕೋರುತ್ತಿದ್ದಾರೆ. ಇನ್ನು ನವೆಂಬರ್ 2025ರಲ್ಲಿ ರಾಜೀವ್ ಜೊತೆ ತೀರಾ ಅತ್ಯಾಪ್ತವಾದ ಫೋಟೊಗಳನ್ನು ಕೀರ್ತಿ ಹಂಚಿಕೊಂಡಿದ್ದರು. ಆಗಲೇ ಹಲವರು ಇವರ ಸಂಬಂಧದ ಕುರಿತು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈಗ ಅಧಿಕೃತ ಘೋಷಣೆ ಕೂಡ ಹೊರ ಬಿದ್ದಿದೆ.

911

ಈ ಮೊದಲು, ನಟಿ ಕೀರ್ತಿ ಕುಲ್ಹರಿ ಅವರು ಸಾಹಿಲ್ ಸೆಹಗಲ್ ಅವರ ಜೊತೆ ಮದುವೆಯಾಗಿದ್ದರು. ಜಾಹೀರಾತಿನ ಚಿತ್ರೀಕರಣದ ಸಮಯದಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಈ ಹಿನ್ನೆಲೆ ತಡ ಮಾಡದ ಕೀರ್ತಿ ತಮ್ಮ "ಪಿಂಕ್"ಚಿತ್ರ ಬಿಡುಗಡೆಯಾದ ಬೆನ್ನಲ್ಲೇ 2016ರಲ್ಲಿ ಮದುವೆಯಾಗಿದ್ದರು. ಆದರೆ..ಈ ಸಂಬಂಧ ಕೇವಲ ಐದೇ ವರ್ಷಕ್ಕೆ ಮುರಿದು ಬಿತ್ತು.

1011

ಇನ್ನು ಜೊತೆಯಲ್ಲಿ ಬದುಕಲು ಸಾಧ್ಯವೇ ಇಲ್ಲ ಎನ್ನುವ ತೀರ್ಮಾನಕ್ಕೆ ಬಂದ ಈ ಇಬ್ಬರು 2021ರಲ್ಲಿ ಪರಸ್ಪರ ದೂರವಾದರು. ಪರಸ್ಪರ ಸಮ್ಮತಿಯ ಮೇರೆಗೆ ನಾವು ಇಬ್ಬರು ದೂರವಾಗುತ್ತಿದ್ದೇವೆ ಎಂದು ಹೇಳಿದ್ದ ಕೀರ್ತಿ ಕುಲ್ಹರಿ ಇದು ಕೇವಲ ಪೇಪರ್ ಮೇಲೆ (ಡಿವೋರ್ಸ್ ಪತ್ರ ) ಅಲ್ಲ. ನಿಜ ಜೀವನದಲ್ಲಿಯೂ ನಾವು ದೂರವಾಗುತ್ತಿದ್ದೇವೆ ಎಂದು ತಮ್ಮ ವಿಚ್ಚೇದನದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.

1111

ಈಗ ರಾಜೀವ್ ಸಿದ್ಧಾರ್ಥ ಅವರ ಜೊತೆ ಕೀರ್ತಿ ಕುಲ್ಹರಿ ತಮ್ಮ ಬದುಕಿನ ಎರಡನೇ ಇನ್ನಿಂಗ್ಸ್‌ ಶುರುಮಾಡಲು ರೆಡಿಯಾಗಿದ್ದಾರೆ. ಹೊಸ ಬದುಕು ಹಸನಾಗಿರಲಿ ಎಂದು ಹಲವರು ಹಾರೈಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories