ಕಿಯಾರಾ ಅಡ್ವಾಣಿ ಸಿದ್ಧಾರ್ಥ್ ಮಲ್ಹೋತ್ರಾ ಲವ್‌ಸ್ಟೋರಿ!

First Published | Jan 23, 2021, 5:09 PM IST

ಬಾಲಿವುಡ್‌ನ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ಡೇಟಿಂಗ್ ವದಂತಿಗಳು ಬಹಳ ದಿನಗಳಿಂದ ಹರಿದಾಡುತ್ತಿವೆ. ಕೆಲವು ಪಾರ್ಟಿಗಳಲ್ಲಿ ಪಾಲ್ಗೊಳ್ಳುವುದರಿಂದ ಹಿಡಿದು, ಒಟ್ಟಿಗೆ ರಜಾ ದಿನವನ್ನು ಕಳೆಯುವವರೆಗೆ ಸುದ್ದಿಯಾಗಿದೆ. ಅವರಿಬ್ಬರೂ ಪರಸ್ಪರ ಡೇಟಿಂಗ್ ಮಾಡುವುದನ್ನು ಒಪ್ಪಿಕೊಂಡಿಲ್ಲವಾದರೂ, ಹಲವು ಸಂದರ್ಭಗಳು ಇವರ ರಿಲೆಷನ್‌ಶಿಪ್‌ನಲ್ಲಿರುವುದು ದೃಢಪಡಿಸುತ್ತದೆ. 

ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ಡೇಟಿಂಗ್ ವದಂತಿಗಳು ಬಹಳದಿನಗಳಿಂದ ಹರಿದಾಡುತ್ತಿವೆ.
ಬಹಳ ಕಾಲದಿಂದ ಡೇಟ್‌ ಮಾಡುತ್ತಿತುವ ಈ ಕಪಲ್‌ ನಡುವೆ ಇಬ್ಬರ ನಡುವೆ ಪ್ರೀತಿ ಹೇಗೆ ಅರಳಿತು ಎಂದು ನಿಮಗೆ ಗೊತ್ತಾ?
Tap to resize

ಡೇಟಿಂಗ್ ಮಾಡುವುದನ್ನು ಒಪ್ಪಿಕೊಂಡಿಲ್ಲವಾದರೂ ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುವುದು ಈ ಜೋಡಿಯ ಸಂಬಂಧದ ಸುದ್ದಿಗೆ ಪುಷ್ಠಿ ನೀಡುತ್ತಿದೆ.
ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಶೆರ್ಶಾ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಶೂಟಿಂಗ್‌ ಪ್ರಾರಂಭಿಸಿದಾಗಿನಿಂದಲೂ ಈ ಕಪಲ್‌ನ ಡೇಟಿಂಗ್ ವದಂತಿಗಳು ಎಲ್ಲೆಡೆ ಹರಿದಾಡುತ್ತಿವೆ.
ಕಳೆದ ವರ್ಷ ನ್ಯೂ ಇಯರ್‌ ಸಮಯದಲ್ಲಿ ಈ ಜೋಡಿ ಆಫ್ರಿಕಾದಲ್ಲಿ ರಜಾ ದಿನಗಳಲ್ಲಿದ್ದರು. ಇದು ಇವರಿಬ್ಬರ ನಡುವೆ ಸ್ನೇಹಕ್ಕಿಂತ ಹೆಚ್ಚಿನದು ಏನೋ ಇದೆ ಎಂಬ ಊಹಾಪೋಹಗಳನ್ನು ಹುಟ್ಟು ಹಾಕಿತು.
ಕಿಯಾರಾ ಅಡ್ವಾಣಿಯ ಮಧ್ಯರಾತ್ರಿಯ ಬರ್ತ್‌ಡೇ ಬಾಷ್‌ನಲ್ಲಿ ಸಿಧಾರ್ಥ್ ಕಾಣಿಸಿಕೊಂಡಿದ್ದು, ಡೇಟಿಂಗ್‌ ರೂಮರ್‌ಗೆ ಇನ್ನು ಹೆಚ್ಚಿನ ಬಲ ಬಂದ ಹಾಗಾಯಿತು.
ಕಿಯಾರಾ ತನ್ನ ಮನೆಯಲ್ಲಿ ಆಯೋಜಿಸಿದ್ದ ಡಿನ್ನರ್‌ಗೆ ಸಿದ್ಧಾರ್ಥ್ಪೋಷಕರನ್ನು ಆಹ್ವಾನಿಸಿದ್ದರು. ಇವರಿಬ್ಬರೂ ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ತೆಗೆದು ಕೊಂಡು ಹೋಗಲಿದ್ದಾರೆಂದೂ ಸುದ್ದಿಯಾಗಿತ್ತು.
ಈ ವರ್ಷ ಹೊಸ ವರ್ಷಕ್ಕಾಗಿ ಮಾಲ್ಡೀವ್ಸ್‌ಗೆ ಹೋದರೂ, ಇಬ್ಬರೂ ಒಟ್ಟಿಗೆ ಒಂದು ಫೋಟೋವನ್ನು ಪೋಸ್ಟ್ ಮಾಡಲಿಲ್ಲ. ಕಿಯಾರಾ ನಾನುಓಂಟಿಯಾಗಿರುವುದರಿಂದತನ್ನ ಫೋಟೋ ನಾನೇ ಕ್ಲಿಕ್ ಮಾಡಿರುವುದಾಗಿಯೂ ಹೇಳಿ ಕೊಂಡಿದ್ದರು.

Latest Videos

click me!