ನಟಿ ಇಲಿಯಾನಾ ಡಿ ಕ್ರೂಜ್ ಅವರು ಬಾಲ್ಯದಿಂದಲೂ ಬಾಡಿ ಶೇಮ್ ಅನುಭವಗಳ ಬಗ್ಗೆ ಮಾತನಾಡಿದ್ದಾರೆ.
ನಿಮ್ಮ ಬಗ್ಗೆ ಇನ್ನೊಬ್ಬರ ಮಾತು ಮುಖ್ಯವಲ್ಲ, ನಿಮ್ಮ ಕುರಿತು ನಿಮ್ಮ ಮಾತು ಮುಖ್ಯ ಎಂದು ಮನಸಿಗೆ ಕಲಿಸಲು ತುಂಬಾ ಕಷ್ಟವಿದೆ ಎಂದಿದ್ದಾರೆ ಬರ್ಫಿ ನಟಿ
ಆ ದಿನಗಳು ನನಗೆ ನೆನಪಿದೆ. ಇದು ವಿಲಕ್ಷಣವೂ ಹೌದು. ಏಕೆಂದರೆ ಇದು ತುಂಬಾ ಆಳವಾಗಿ ಬೇರೂರಿರುವ ಗಾಯವಾಗಿದೆ ಎಂದಿದ್ದಾರೆ.
ನಾನು 12 ನೇ ವಯಸ್ಸಿನಿಂದಲೇ ಬಾಡಿ-ಶೇಮಿಂಗ್ ಅನುಭವಿಸಿದೆ. ನಾನು ಪ್ರೌಢಾವಸ್ಥೆ ದಾಟಿ ಬೆಳೆಯುತ್ತಿದ್ದೆ. ಆ ಸಂದರ್ಭ ನಿಮ್ಮ ಬ್ಯಾಕ್ ಏಕೆ ದೊಡ್ಡದಾಗಿದೆ? ಎಂದು ಪ್ರಶ್ನಿಸುತ್ತಿದ್ದರು ಜನ.
ನಿಮ್ಮ ಬಗ್ಗೆ ಉಳಿದವರು ಏನು ಹೇಳುತ್ತಿದ್ದಾರೆಂದು ನೀವು ನಂಬಲು ಪ್ರಾರಂಭಿಸುತ್ತೀರಿ. ಹಾಗಾಗಿ ಇದು ತುಂಬಾ ಆಳವಾಗಿ ಬೇರೂರಿರುವ ಗಾಯವಾಗುತ್ತದೆ ಎಂದಿದ್ದಾರೆ ಇಲಿಯಾನ.
ಬಾಡಿ ಶೇಮಿಂಗ್ ಬಗ್ಗೆ ನನ್ನ ಇನ್‌ಸ್ಟಾಗ್ರಾಂನಲ್ಲಿ ಕನಿಷ್ಠ 10 ಮೆಸೇಜ್ ಆದರೂ ಇರುತ್ತವೆ. ಆದ್ದರಿಂದ ಯಾವಾಗಲೂ ನಿಮ್ಮ ಬಗ್ಗೆ ಯಾರಾದರೂ ಏನಾದರೂ ಹೇಳುತ್ತಿದ್ದರೆ ಅದನ್ನೆದುರಿಸುವುದು ಕಷ್ಟ ಎಂದಿದ್ದಾರೆ.
ನಾನು ಜನರಿಗೆ ಹೇಳೋದಿಷ್ಟೇ.. ದಯವಿಟ್ಟು ನೀವು ಹೆಚ್ಚು ಸೂಕ್ಷ್ಮವಾಗಿರಿ, ಏಕೆಂದರೆ ನಿಮ್ಮ ಮಾತು ಬೇರೆಯವರ ಮೇಲೆ ಎಷ್ಟು ಪರಿಣಾಮ ಬೀರಬಹುದು ಎಂಬುದು ನಿಮಗೆ ಅರ್ಥವಾಗುವುದಿಲ್ಲ ಎಂದಿದ್ದಾರೆ.
ಇಲಿಯಾನಾ ಕೊನೆಯ ಬಾರಿಗೆ ದಿ ಬಿಗ್ ಬುಲ್ ನಲ್ಲಿ ಕಾಣಿಸಿಕೊಂಡರು.
ಇದರಲ್ಲಿ ಅವರು ಮೀರಾ ರಾವ್ ಎಂಬ ಪತ್ರಕರ್ತೆಯ ಪಾತ್ರವನ್ನು ನಿರ್ವಹಿಸಿದರು.