17ನೇ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ ನಟಿ ಡಿಂಪಲ್; ಡಬಲ್ ವಯಸ್ಸಾಗಿರುವ ಗಂಡನನ್ನು ಬಿಟ್ಟಿದ್ದು ಯಾಕೆ?

Published : Mar 21, 2024, 05:13 PM IST

ಸ್ಟಾರ್ ನಟಿ ಆಗುತ್ತಿದ್ದಂತೆ ಮದುವೆ ಮಾಡಿಕೊಂಡು ಮಗು ಕೂಡ ಮಾಡಿಕೊಂಡ ನಟಿ ಡಿಂಪಲ್. ಲೈಫ್‌ ಸ್ಟೋರಿ ಸಿಕ್ಕಾಪಟ್ಟೆ ಡಿಫರೆಂಟ್....

PREV
18
17ನೇ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ ನಟಿ ಡಿಂಪಲ್; ಡಬಲ್ ವಯಸ್ಸಾಗಿರುವ ಗಂಡನನ್ನು ಬಿಟ್ಟಿದ್ದು ಯಾಕೆ?

70ರ ದಶಕದಲ್ಲಿ ಬಾಲಿವುಡ್‌ ಚಿತ್ರರಂಗದವನ್ನು ರೂಲ್ ಮಾಡಿದ ನಟಿ ಡಿಂಪಲ್ ಕಪಾಡಿಯಾ ಮತ್ತು ಸ್ಟಾರ್ ನಟ ರಾಜೇಶ್‌ ಖನ್ನಾ ಲವ್‌ ಸ್ಟೋರಿ ಸಖತ್ ಡಿಫರೆಂಟ್.

28

ಮೊದಲ ಸಿನಿಮಾ ಬಾಬಿ ರಿಲೀಸ್ ಆಗುವ ಮುನ್ನವೇ ರಾಜೇಶ್‌ ಖನ್ನಾರನ್ನು ಮದುವೆ ಮಾಡಿಕೊಂಡ ಡಿಂಪಲ್, ಇಬ್ಬರು ಮುದ್ದಾದ ಹೆಣ್ಣುಮಕ್ಕಳಿಗೆ ಜನ್ಮ ನೀಡುತ್ತಾರೆ. ಆದರೆ ವೈಯಕ್ತಿಕ ಕಾರಣಗಳಿಂದ ಇಬ್ಬರು ಕೆಲವು ವರ್ಷಗಳ ನಂತರ ದೂರವಾಗುತ್ತಾರೆ.

38

ಅಹಮದಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಡಿಂಪಲ್ ಮತ್ತು ರಾಜೇಶ್ ಮೊದಲು ಭೇಟಿಯಾಗಿದ್ದು.ಆಗ ಡಿಂಪಲ್ ಅವರಿಗೆ 16 ವರ್ಷ ಮತ್ತು ರಾಜೇಶ್ ಖನ್ನಾ ಅವರಿಗೆ ಡಬಲ್​ ವಯಸ್ಸು ಅಂದರೆ 32 ವರ್ಷ.

48

ಡಿಂಪಲ್ ಕಪಾಡಿಯಾ ಬಾಬಿ ಚಿತ್ರೀಕರಣದಲ್ಲಿದ್ದಾಗ, ರಾಜೇಶ್ ಖನ್ನಾ ಅವರೇ ಮದುವೆ ಪ್ರಪೋಸಲ್‌ ಮುಂದಿಟ್ಟರು. ಮದುವೆಯಲ್ಲಿ ಹಾಕಿದ್ದ ಮೆಹೇಂದಿ ಮಾಸುವ ಮೊದಲೇ ಚಿತ್ರೀಕರಣದಲ್ಲಿ ಪಾಲ್ಗೊಂಡರು ಡಿಂಪಲ್. ಮೊದಲ ಸಿನಿಮಾ ದೊಡ್ಡ ಹಿಟ್ ತಂದುಕೊಟ್ಟಿತ್ತು.

58

ಡಿಂಪಲ್ ಕಪಾಡಿಯಾ 17 ನೇ ವಯಸ್ಸಿನಲ್ಲಿ ಟ್ವಿಂಕಲ್ ಖನ್ನಾಗೆ (Twinkle Khanna) ಜನ್ಮ ನೀಡಿದ್ದರು, 1977ರಲ್ಲಿ ರಿಂಕಿ ಖನ್ನಾ ಜನಿಸಿದ್ದರು.  ರಾಜೇಶ್‌ ಒತ್ತಾಯದಿಂದ ಸಿನಿಮಾರಂಗದಿಂದ ದೂರ ಉಳಿದುಬಿಟ್ಟರು.

68

ಏಕೆಂದರೆ ಚಿತ್ರರಂಗದಲ್ಲಿ ಉತ್ತುಂಗದಲ್ಲಿ ಇರುವಾಗಲೇ ಪತ್ನಿ ಚಿತ್ರದಲ್ಲಿ ನಟಿಸುವುದನ್ನು ರಾಜೇಶ್​ ಸಹಿಸಲಿಲ್ಲ. ಆದ್ದರಿಂದ 12 ವರ್ಷಗಳ ಡಿಂಪಲ್​ ಚಿತ್ರದಲ್ಲಿ ಪಾಲ್ಗೊಳ್ಳಲಿಲ್ಲ. ಡಿಂಪಲ್  ತಮ್ಮ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ.

78

ಯಶಸ್ವಿ ನಟಿಯಾಗಿರುವ ಸಮಯದಲ್ಲಿ ಚಿತ್ರರಂಗದಿಂದ ದೂರ ಉಳಿಯಬೇಕಾಗಿತ್ತು ಅನ್ನೋದು  ಖಿನ್ನತೆಗೆ ತಳ್ಳಿತ್ತು. ಆಕೆ ಎಲ್ಲವನ್ನೂ ಪತಿ ರಾಜೇಶ್​ ಖನ್ನಾ ಅವರನ್ನು ಕೇಳಿಯೇ ಮಾಡಬೇಕಿತ್ತು.

88

1982 ರಲ್ಲಿ, ರಾಜೇಶ್ ಖನ್ನಾ ಮತ್ತು ಡಿಂಪಲ್ ಕಪಾಡಿಯಾ ಬೇರೆಯಾಗಲು ನಿರ್ಧರಿಸಿದ್ದರು. ನಂತರ ಸಾಗರ್ ಚಿತ್ರದ ಮೂಲಕ ಪುನರಾಗಮನ ಮಾಡಿದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories