ಬಾಲಿವುಡ್ ನಟ ಪರೇಶ್ ರಾವಲ್ ಪತ್ನಿ ಮಿಸ್ ಇಂಡಿಯಾ ವಿನ್ನರ್… ಇವರ ಲವ್ ಸ್ಟೋರಿ ಸಿನಿಮಾ ಕಥೆಯಂತಿದೆ!

First Published | Nov 30, 2024, 11:50 AM IST

ಬಾಲಿವುಡ್ ನ ಅದ್ಭುತ ನಟ ಪರೇಶ್ ರಾವಲ್ ಅವರ ಲವ್ ಸ್ಟೋರಿ ತುಂಬಾನೆ ಇಂಟ್ರೆಸ್ಟಿಂಗ್ ಆಗಿದೆ. ಬಾಸ್ ನ ಮಗಳನ್ನು ಇಷ್ಟಪಡೋದ್ರಿಂದ ಹಿಡಿದು, ಆಕೆಯನ್ನು ಮಿಸ್ ಇಂಡಿಯಾ ವಿನ್ನರ್ ಆಗಿಸುವಲ್ಲಿವರೆಗೂ ಪರೇಶ್ ಪ್ರೀತಿಯೇ ಸ್ವರೂಪ್ ಗೆ ಭವಸೆಯಾಗಿತ್ತು. 
 

ಬಾಲಿವುಡ್ ನಟ ಪರೇಶ್ ರಾವಲ್ (Paresh Rawal)ಮತ್ತು ಅವರ ಪತ್ನಿ ಸ್ವರೂಪ್ ಸಂಪತ್ ಅವರ ಪ್ರೇಮಕಥೆ ಆರಂಭವಾಗಿದ್ದು, ಮುಂಬೈನಲ್ಲಿ ಅಂತರ್ ಕಾಲೇಜು ನಾಟಕದಲ್ಲಿ ಪರೇಶ್ ರಾವಲ್ ನಾಟಕವನ್ನು ಸ್ವರೂಪ್ ನೋಡಿ, ಮೆಚ್ಚಿಕೊಂಡ ಮೇಲೆ ಶುರುವಾಗಿದ್ದು. ಅವರ ಪವರ್ ಪ್ಯಾಕ್ಡ್ ನಾಟಕ ನೋಡಿ ಇಂಪ್ರೆಸ್ ಆದ ಸ್ವರೂಪ್ ಮೆಚ್ಚುಗೆಯನ್ನು ವ್ಯಕ್ತಪಡಿಸಲು ವೇದಿಕೆಯ ಹಿಂದೆ ಹೋಗಿ ಪರೇಶ್ ರಾವಲ್ ಭೇಟಿಯಾಗಿ, ನಿಮ್ಮ ಅಭಿಮಾಇ ನಾನು ಎಂದು ಒಪ್ಪಿಕೊಂಡಿದ್ದರು.. 
 

ಗುಲಾಬಿ ಬಣ್ಣದ ಸೀರೆಯಲ್ಲಿ ಸ್ವರೂಪ್ ನನ್ನು (Swaroop Samapat) ನೋಡಿದ ಕ್ಷಣದಿಂದ ಆಕೆಯ ಮೇಲೆ ಲವ್ ಆಗಿ ಬಿಟ್ಟಿತ್ತಂತೆ ಪರೇಶ್ ರಾವಲ್ ಗೆ. ಆದ್ರೆ ಇವರ ಸ್ನೇಹಿತರು ಮಾತ್ರ, ಆಕೆ ನಮ್ಮ ಬಾಸ್ ಮಗಳು, ಆಕೆಯನ್ನು ಫಾಲೋ ಮಾಡೋದು, ಲವ್ ಮಾಡೋದೆಲ್ಲಾ ಮಾಡ್ಬೇಡ ಎಂದಿದ್ದರಂತೆ. ಆದರೆ ಪರೇಶ್ ಮಾತ್ರ ಆಕೆ ಯಾರದ್ದೇ ಮಗಳಾಗಿರಲಿ,  ಯಾರ ಸಹೋದರಿ, ಅಮ್ಮನೇ ಆಗಿರಲಿ, ಆದ್ರೆ ನಾನು ಮದುವೆ ಆಗೋದೇ ಆದ್ರೆ ಆಕೆಯನ್ನೆ ಎಂದು ಧೈರ್ಯವಾಗಿ ಎಲ್ಲರೆದುರು ಹೇಳಿದ್ರಂತೆ ಪರೇಶ್. 
 

Tap to resize

ನಂತರ ನಿಧಾನವಗೈ ಬ್ಬರೂ ಆಗಾಗ್ಗೆ ಭೇಟಿಯಾಗಲು ಪ್ರಾರಂಭಿಸಿದರು, ಇಬ್ಬರ ಸ್ನೇಹದಲ್ಲಿ ತುಂಬಾನೆ ಗಾಢವಾದ ಬಂಧವೂ ಇತ್ತು. ಮೊದಲ ಬಾರಿಗೆ ಡೇಟಿಂಗ್ ಕರೆಯೋ ಸಾಹಸ ಮಾಡಿದ ಪರೇಶ್, ನನ್ನ ಹತ್ರ ಒಂದು ಎಕ್ಸ್ಟ್ರಾ ಮೂವಿ ಟಿಕೇಟ್ ಇದೆ, ಬರ್ತ್ಯಾ ಸಿನಿಮಾ ನೋಡೋಕೆ ಎಂದಿದ್ರಂತೆ, ಸ್ವರೂಪ್ ಕೂಡ ಒಪ್ಪಿಗೆ ಸೂಚಿಸಿದ್ದರಂತೆ. ಮೊದಲ ಡೇಟಿಂಗ್ ನಲ್ಲಿ ಆಕೆ ತನ್ನ ಹಿಡಿಯೋದಕ್ಕಾಗಿ ಪರೇಶ್ ಕಾಯುತ್ತಿದ್ದರಂತೆ, ಆದರೆ ಅದು ಸಾಧ್ಯಾನೆ ಆಗಿಲ್ವಂತೆ. ಎರಡನೇ ಡೇಟಿಂಗ್ ವೇಳೆ, ಆಕೆಯೇ ಬಂದು ಪರೇಶ್ ಕೈ ಹಿಡಿದಿದ್ದರಂತೆ. ಇದು ಪರೇಶ್ ಪಾಲಿಗೆ ಅತ್ಯಂತ ಖುಷಿಯ  ಕ್ಷಣವಾಗಿತ್ತು ಅನ್ನೋದನ್ನ ಅವ್ರೇ ಹೇಳಿದ್ದಾರೆ. 
 

ಇವರ ಪ್ರೀತಿಯನ್ನು ಅಷ್ಟು ಸುಲಭವಾಗಿ ಮನೆಯವರು ಒಪ್ಪಿಕೊಂಡಿರಲಿಲ್ಲ, ಸುಮಾರು 12 ವರ್ಷಗಳೇ ಅದಕ್ಕಾಗಿ ಕಾಯಬೇಕಾಗಿತ್ತು ಈ ಜೋಡಿ. ಈ ಸಮಯದಲ್ಲಿ, ಸ್ವರೂಪ್ ಅವರ ತಂದೆ ಮಿಸ್ ಇಂಡಿಯಾ ಸ್ಪರ್ಧೆಗೆ ಸೇರಲು ಹೇಳಿದ್ದರಂತೆ, ಆದರೆ ಸ್ವರೂಪ್ ಗೆ ಆ ಬಗ್ಗೆ ವಿಶೇಷವಾಗಿ ಆಸಕ್ತಿ ಇರಲಿಲ್ಲವಂತೆ. ಆದರೆ ಇದನ್ನ ಪರೇಶ್ ಬಳಿ ಹೇಳಿದಾಗ, ಪರೇಶ್ ಸ್ವರೂಪ್ ಗೆ ಬೆಂಬಲ ನೀಡಿ, ತಾವೇ ಖುದ್ಧಾಗಿ ಮಿಸ್ ಇಂಡಿಯಾ ಸ್ಪರ್ಧೆ (Miss India Pagent) ನಡೆಯುವ ಸ್ಥಳಕ್ಕೆ ಬಿಟ್ಟು ಬಂದಿದ್ದರಂತೆ. ಜೊತೆಗೆ ಏನೇ ಆಗಲಿ ನಾನು ನಿನಗಾಗಿ ಕಾಯುತ್ತೇನೆ ಎಂದು ಭರವಸೆ ನೀಡಿದ್ದರಂತೆ ಪರೇಶ್. 
 

ಪರೇಶ್ ರಾವನ್ ಅವರ ಆತ್ಮವಿಶ್ವಾಸ ಮತ್ತು ಪ್ರೋತ್ಸಾಹದಿಂದ ಪ್ರೇರಿತರಾದ ಸ್ವರೂಪ್ ಸ್ಪರ್ಧೆಯಲ್ಲಿ ಭಾಗವಹಿಸಿದರು. ಅಷ್ಟೇ ಅಲ್ಲ 1979 ರಲ್ಲಿ ಮಿಸ್ ಇಂಡಿಯಾ ಕಿರೀಟವನ್ನು ಗೆಲ್ಲುವ ಮೂಲಕ ಇತಿಹಾಸ ರಚಿಸಿದ್ದರು.  ರಂಗಭೂಮಿ ಮತ್ತು ನಟನೆಯ ಬಗ್ಗೆ ಈ ಜೋಡಿಗಿದ್ದ ಆಸಕ್ತಿಯೇ ಅವರನ್ನ ಒಂದಾಗಿಸಿದ್ದು, ಅಷ್ಟೇ ಅಲ್ಲ ಇವರಿಬ್ಬರ ಸ್ನೇಹ, ಬದ್ಧತೆ ಎಲ್ಲವೂ ಸೇರಿ ಈ ಜೋಡಿ ಅಷ್ಟು ವರ್ಷಗಳ ಕಾಲ ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳೋದಕ್ಕೂ ಸಾಧ್ಯವಾಯ್ತು. 
 

1987 ರಲ್ಲಿ, ಹನ್ನೆರಡು ವರ್ಷಗಳ ಡೇಟಿಂಗ್ ನಂತರ, ಪರೇಶ್ ಯಾವುದೇ ಹಿಂಜರಿಕೆಯಿಲ್ಲದೆ ಸ್ವರೂಪ್ ಗೆ ಮದುವೆ ಪ್ರಪೋಸ್ (wedding proposal) ಮಾಡಿದರು, ಮತ್ತು ಇಬ್ಬರೂ ಬೆರಳೆಣಿಕೆಯಷ್ಟೇ ಸಂಬಂಧಿಕರು ಕುಟುಂಬಸ್ಥರ ಮಧ್ಯೆ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 
 

ಇವರ ಮದುವೆಗೆ ಯಾವುದೇ ಮಂಟಪ ಅಥವಾ ಸಾಂಪ್ರದಾಯಿಕ ಬೆಂಕಿ ಸುತ್ತುವ, ಪ್ರತಿಜ್ಞೆಗಳನ್ನು ಸ್ವೀಕರಿಸುವ ಯಾವುದೇ ಸಂಪ್ರದಾಯ ಇರಲಿಲ್ಲವಂತೆ. ಒಂದು ಹಳೆಯ ಮರದ ನೆರಳಿನಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.  ಅವರ ವಿವಾಹವು ಅವರ ಪ್ರೇಮಕಥೆಯಷ್ಟೇ ವಿಚಿತ್ರವಾಗಿತ್ತು. ಆದರೆ ಪರಸ್ಪರ ಗೌರವ, ತಿಳುವಳಿಕೆ ಮತ್ತು ವಾತ್ಸಲ್ಯದಿಂದ ತುಂಬಿತ್ತು.
 

ಇಂದು ಈ, ದಂಪತಿಗಳು ಅನಿರುದ್ಧ್ ಮತ್ತು ಆದಿತ್ಯ ಎಂಬ ಇಬ್ಬರು ಗಂಡು ಮಕ್ಕಳ ಹೆಮ್ಮೆಯ ಪೋಷಕರಾಗಿದ್ದಾರೆ. ಸದ್ಯ ಪರೇಶ್ ರಾವಲ್ ಹಾಗೂ ಸ್ವರೂಪ ಇಬ್ಬರೂ ಕೂಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಕ್ಕಳು ಕೂಡ ಪೋಷಕರಂತೆ ತಮ್ಮನ್ನು ತಾವು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. 
 

Latest Videos

click me!