ನೂರು ವರ್ಷ ದಾಟಿರುವ ಅತಿ ಹಳೆಯ ಚಿತ್ರರಂಗ ಕಾಲಿವುಡ್. ಅಷ್ಟೇ ಅಲ್ಲ, ಭಾರತೀಯ ಸಿನಿಮಾದ ಆರಂಭಿಕ ಹಂತದಲ್ಲಿ, ದಕ್ಷಿಣ ಭಾರತದ ಹಲವು ಭಾಷಾ ಚಲನಚಿತ್ರಗಳಲ್ಲಿ ಸುಮಾರು ಶೇ.90ರಷ್ಟು ಚಿತ್ರೀಕರಣ ಕಾರ್ಯಗಳು ಆಗಿನ ಮದ್ರಾಸ್ ಪಟ್ಟಣದಲ್ಲಿ ನಡೆದಿವೆ ಎಂದರೆ ನಂಬುತ್ತೀರಾ? ಆದರೆ ಅದು ನಿಜ.
ಸುಮಾರು 1980ರ ದಶಕದ ಕೊನೆಯವರೆಗೂ ಮಲಯಾಳಂ, ತೆಲುಗು, ಕನ್ನಡ ಮತ್ತು ತಮಿಳು ಸೇರಿದಂತೆ ಹಲವು ಭಾಷಾ ಚಲನಚಿತ್ರಗಳ ಚಿತ್ರೀಕರಣ ಶೇ.80ಕ್ಕಿಂತ ಹೆಚ್ಚು ಈಗಿನ ಚೆನ್ನೈನಲ್ಲಿ ನಡೆದಿದೆ. ಅಷ್ಟರ ಮಟ್ಟಿಗೆ ಪ್ರಸಿದ್ಧವಾಗಿದ್ದ ಒಂದು ಸಿನಿಮಾ ಸ್ಟುಡಿಯೋ ಚೆನ್ನೈನಲ್ಲಿತ್ತು.