ಪಾಪರಾಜಿಗಳ ಮುಂದೆ ಪತಿ ಕರಣ್ ಅವರನ್ನು ಗೇಲಿ ಮಾಡಿದ Bipasha Basu

First Published | Sep 24, 2022, 4:25 PM IST

ಬಾಲಿವುಡ್‌ನ ಸುಂದರ ಜೋಡಿ ಬಿಪಾಶಾ ಬಸು (Bipaasha Basu) ಮತ್ತು ಕರಣ್ ಸಿಂಗ್ ಗ್ರೋವರ್  (Karan Singh Grover) ತಮ್ಮ ಜೀವನದಲ್ಲಿ ಪುಟ್ಟ ಅತಿಥಿಯ ಆಗಮನದ ದಿನಗಳನ್ನು ಎಂದು ಕಾತರದಿಂದ ಕಾಯುತ್ತಿದ್ದಾರೆ. ದಾಂಪತ್ಯ ಜೀವನಕ್ಕೆ  ಕಾಲಿಟ್ಟು 6 ವರ್ಷಗಳ ನಂತರ ಈ ಜೋಡಿಯ ಮನೆಗೆ ಶುಭ ಸುದ್ದಿ ಹೊರಬಂದಿದೆ. ನಟಿ ಮೊದಲ ಬಾರಿಗೆ ತಾಯಾಗಲಿದ್ದಾರೆ. ಇವರ ಬೇಬಿ ಶವರ್‌ ಫೋಟೋಗಳು ಸಖತ್‌ ವೈರಲ್‌ ಆಗಿವೆ.

 ಶುಕ್ರವಾರ ಮುಂಬೈನಲ್ಲಿ ಗರ್ಭಿಣಿ ಬಿಪಾಶಾ ಬಸು ಅವರ ಬೇಬಿ ಶವರ್ ಕಾರ್ಯಕ್ರಮ ನಡೆಯಿತು. ಈ ಆಚರಣೆಯ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಖಾಸಗಿ ಸಮಾರಂಭದಲ್ಲಿ, ದಂಪತಿಗಳ ಅತ್ಯಂತ ನಿಕಟ ಜನರು ಮಾತ್ರ ಭಾಗವಹಿಸಿದ್ದರು.

ಹೊರಹೊಮ್ಮಿದ ಫೋಟೋಗಳಲ್ಲಿ, ಬಿಪಾಶಾ ಮತ್ತು ಕರಣ್  ಇಬ್ಬರೂ ಪಾಪರಾಜಿಗಳಿಗೆ ತುಂಬಾ ಸ್ಟೈಲಿಶ್ ಶೈಲಿಯಲ್ಲಿ ಪೋಸ್ ನೀಡುತ್ತಿದ್ದಾರೆ. ಮುಂಬೈನ ಲೋವರ್ ಪರೇಲ್‌ನಲ್ಲಿರುವ ಮಾಲ್‌ನಲ್ಲಿ ನಡೆದ ಈ ವಿಶೇಷ ಸಮಾರಂಭದಲ್ಲಿ ದಂಪತಿಗಳು  ಸ್ಟೈಲಿಶ್‌ ಆಗಿ ಕಾಣಿಸಿಕೊಂಡರು.

Tap to resize

ಸೆಲೆಬ್ರೆಷನ್‌ನ ಸ್ಥಳವನ್ನು ಅತ್ಯಂತ ಸುಂದರವಾದ ಬಣ್ಣದ ಬಲೂನ್‌ಗಳಿಂದ ಅಲಂಕರಿಸಲಾಗಿತ್ತು. ಈವೆಂಟ್‌ಗಾಗಿ ಬಿಪಾಶಾ ಆರಾಮದಾಯಕವಾದ ಸ್ಲಿಟ್ ಮ್ಯಾಕ್ಸಿ ಗೌನ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮತ್ತೊಂದೆಡೆ, ಕರಣ್ ಸಿಂಗ್ ಗ್ರೋವರ್ ನೀಲಿ ಸೂಟ್‌ನಲ್ಲಿ ಹ್ಯಾಂಡ್‌ಸಮ್‌ ಆಗಿ ಕಾಣಿಸಿಕೊಂಡರು.

ಈ ಸಂದರ್ಭದಲ್ಲಿ ಇಬ್ಬರೂ ಕೇಕ್ ಕತ್ತರಿಸುವ ಮುನ್ನ ಪಾಪರಾಜಿಗೆ  ಪೋಸ್ ನೀಡಿದರು. ಮತ್ತೊಂದೆಡೆ, ಕರಣ್ ಕೇಕ್ ಕತ್ತರಿಸಿ, ಪಾಪರಾಜಿಗಳಿಗೆ ನಾನು ತಂದೆಯಾಗಲಿದ್ದೇನೆ ಎಂದು ಹೇಳಿದರು. ಅದಕ್ಕೆ  ಬಿಪಾಶಾ ಆದರೆ  ಇನ್ನೂ ಮಕ್ಕಳಂತೆ ಮಾಡುತ್ತಾನೆ ಎಂದು ಕರಣ್‌ ಅವರ ಕಾಲೆಳೆದರು. 

ಅದೇ ಸಮಯದಲ್ಲಿ, 'ಬಿಗ್ ಬಾಸ್' ಖ್ಯಾತಿಯ ಭಾರತೀಯ ಟಿವಿ ನಟಿ ಆರತಿ ಸಿಂಗ್ ಅವರು ಕಾರ್ಯಕ್ರಮಕ್ಕೆ ಆಗಮಿಸಿದರು. ಕೆಲವು ತಿಂಗಳ ಹಿಂದೆ ಬಿಪಾಶಾ ಮತ್ತು ಕರಣ್ ತಮ್ಮ ಸಾಮಾಜಿಕ ಖಾತೆಗಳ ಮೂಲಕ ತಮ್ಮ ಪ್ರೆಗ್ನೆಂಸಿಯನ್ನು ಘೋಷಿಸಿದ್ದರು.

Latest Videos

click me!