ಬಿಹಾರ ಪೊಲೀಸರು ಇದೀಗ ಮುಂಬೈ ಅಧಿಕಾರಿ ವರ್ಗದೊಂದಿಗೆ ಅನಿವಾರ್ಯವಾಗಿ ಪೈಟ್ ಗೆ ನಿಂತಿದ್ದಾರೆ.
undefined
ಈ ಬಗ್ಗೆ ಮಾತನಾಡಿರುವ ಬಿಹಾರ ಡಿಜಿಪಿ ಜಿ ಪಾಂಡೆ, ಮಹಾರಾಷ್ಟ್ರ ಸರ್ಕಾರ ಅವರ ಪೊಲೀಸ್ ವ್ಯವಸ್ಥೆ ಬಗ್ಗೆ ಹೆಮ್ಮೆ ಪಡಬೇಕು! ಸುಶಾಂತ್ ಸಾವನ್ನಪ್ಪಿ ಐವತ್ತು ದಿನ ಕಳೆದರೂ ಒಂದೇ ಒಂದು ಮಾಹಿತಿ ಕಲೆ ಹಾಕಿಲ್ಲ. ಮಾಹಿತಿ ಮೂಲಗಳನ್ನು ಉದ್ದೇಶಪೂರ್ವಕವಾಗಿ ಮುಚ್ಚಿ ಹಾಕಿದೆ ಎಂದು ಆರೋಪಿಸಿದ್ದಾರೆ.
undefined
ಸುಶಾಂತ್ ಸಿಂಗ್ ಸಾವಿನ ಪ್ರಕರಣ ಇದೀಗ ಎರಡು ರಾಜ್ಯಗಳ ಅಂದರೆ ಮಹಾರಾಷ್ಟ್ರ ಮತ್ತು ಬಿಹಾರದ ನಡುವಿನ ಪೈಟ್ ಆಗಿ ಬದಲಾಗಿದೆ.
undefined
ತನಿಖೆಗೆ ತೆರಳಿದ್ದ ವಿನಯ್ ತಿವಾರಿ ಅವರನ್ನು ಕ್ವಾರಂಟೈನ್ ಮಾಡಿದ್ದನ್ನು ಬಿಹಾರ ಸಿಎಂ ನಿತೀಶ್ ಕುಮಾರ್ 'ಇದು ಸೂಕ್ತ ಅಲ್ಲ' ಎಂದು ಹೇಳಿದ್ದಾರೆ.
undefined
ಪಾಟ್ನಾ ಐಜಿಪಿ ಸಂಜಯ್ ಸಿಂಗ್ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್ ಗೆ ಪತ್ರ ಬರೆದಿದ್ದು ವಿನಯ್ ತಿವಾರಿ ಅವರನ್ನು ಕ್ವಾರಂಟೈನ್ ನಿಂದ ಬಿಡಗಡೆ ಮಾಡಿ ತನಿಖೆಗೆ ಅನುವು ಮಾಡಿಕೊಡಬೇಕು ಎಂದು ಕೇಳಿಕೊಂಡಿದ್ದಾರೆ.
undefined
ಸುಶಾಂತ್ ಸಿಂಗ್ ತಂದೆ ನೀಡಿದ ದೂರಿನ ಆಧಾರದಲ್ಲಿ ಬಿಹಾರ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
undefined
ತನಿಖೆಯನ್ನು ಮುಂಬೈ ಪೊಲೀಸರಿಂದ ಸಿಬಿಐಗೆ ನೀಡಬೇಕು ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿನ ಸಹ ಮುಂಬೈ ಹೈಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ.
undefined
ಇಲ್ಲಿ ಬಂದು ತನಿಖೆ ಮಾಡಲು ಬಿಹಾರ ಪೊಲೀಸರುಯಾವುದೇ ಹಕ್ಕು ಹೊಂದಿಲ್ಲ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.
undefined
ನಟಿ ರಿಯಾ ಚಕ್ರವರ್ತಿ ಸೇರಿ ಅನೇಕರ ಮೇಲೆ ಪ್ರಕರಣ ದಾಖಲಾಗಿದೆ.
undefined