ನಿನ್ನ ಸ್ತನ ತುಂಬಾ...ಆ ಕೆಟ್ಟ ಕಮೆಂಟ್ ಬಹಿರಂಗಪಡಿಸಿದ ನಟಿ ಆಯೇಶಾ ಖಾನ್!

First Published | May 27, 2024, 9:23 PM IST

ಬಿಗ್‌ಬಾಸ್‌ ಮೂಲಕ ಭಾರಿ ಜನಪ್ರಿಯತೆ ಪಡೆದಿರುವ ಆಯೇಶಾ ಖಾನ್, ರಿಯಾಲಿಟಿ ಶೋನಲ್ಲಿ ಕೆಲ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದರು. ಇದೀಗ ವ್ಯಕ್ತಿಯೊಬ್ಬರು ನಟಿಯ ಸ್ತನ ಕುರಿತು ಮಾಡಿರುವ ಕಮೆಂಟ್‌ನ್ನು ಬಹಿರಂಗಪಡಿಸಿದ್ದಾರೆ.
 

ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್‌ಗೆ ಎಂಟ್ರಿಕೊಟ್ಟ ಆಯೇಶಾ ಖಾನ್, ವಿನ್ನರ್ ಮುನಾವರ್ ಫಾರೂಖಿಯ ಕೆಲ ರಹಸ್ಯಗಳನ್ನು ಬಹಿರಂಗಪಡಿಸಿದ್ದರು. ಇದೀಗ ಮತ್ತೊಂದು ಸ್ಫೋಟಕ ಮಾಹಿತಿ ರಿವೀಲ್ ಮಾಡಿದ್ದಾರೆ.
 

ಸಂದರ್ಶನ ಒಂದರಲ್ಲಿ ಆಯೇಶಾ ಖಾನ್ ತಂದೆಗಿಂತ ಹೆಚ್ಚಿನ ವಯಸ್ಸಿನ ಹಿರಿಯರೊಬ್ಬರ ಮಾಡಿದ ಕೆಟ್ಟ ಕಮೆಂಟ್ ಕುರಿತು ಬಹಿರಂಗಪಡಿಸಿದ್ದಾರೆ. ಇಷ್ಟೇ ಅಲ್ಲ ಈ ಕಮೆಂಟ್‌ನಿಂದ ಆಘಾತಗೊಂಡಿರುವುದಾಗಿ ನಟಿ ಹೇಳಿದ್ದಾರೆ.
 

Tap to resize

ಮುಂಬೈನ ಮಲಾಡ್‌ನಲ್ಲಿ ವಾಸವಿದ್ದೆ. ಈ ವೇಳೆ ಒಂದು ದಿನ ಸೇವ್ ಪೂರಿ ತರಲೆಂದು ಮನೆಯಿಂದ ಕಳೆಗಿಳಿದು ಬಂದು ರಸ್ತೆಯತ್ತ ತೆರಳಿದ್ದೆ. ಈ ವೇಳೆ ಹಿರಿಯ ವಯಸ್ಸಿನ ವ್ಯಕ್ತಿಯೊಬ್ಬರು ಸ್ಕೂಟರ್ ಮೂಲಕ ತೆರಳುತ್ತಿದ್ದರು. ಸ್ಕೂಟರ್ ನಿಲ್ಲಿಸಿ ನಿನ್ನ ಸ್ತನ ತುಂಬಾ ಚೆನ್ನಾಗಿದೆ ಎಂದು ಕಮೆಂಟ್ ಮಾಡಿದರು ಎಂದು ಆಯೇಶಾ ಖಾನ್ ಹೇಳಿದ್ದಾರೆ.
 

ಅವರ ವಯಸ್ಸು ನನ್ನ ತಂದೆಗಿಂತ ಹೆಚ್ಚಿತ್ತು. ಸ್ಕೂಟರ್ ನಿಲ್ಲಿಸಿ ಈ ಕಮೆಂಟ್ ಮಾಡಿದ್ದರು. ನಾನು ತಂದೆಯ ಪರಿಚಯಸ್ಥರು ಇರಬಹುದು ಎಂದು ಹತ್ತಿರ ಹೋಗಿ ಏನೆಂದು ಕೇಳಿದ್ದೆ. ಏನೂ ಇಲ್ಲ, ನಿನ್ನ ಬೂಬ್ಸ್ ಚೆನ್ನಾಗಿದೆ ಎಂದು ಹೊರಟು ಹೋದರು ಎಂದು ನಟಿ ಹೇಳಿದ್ದಾರೆ.
 

ಅವರ ವಯಸ್ಸು, ಅವರ ಮಾತು, ಕಮೆಂಟ್ ನನಗೆ ಆಘಾತ ತಂದಿತ್ತು. ಕೆಲ ಪುರುಷರು ಎದೆ ಭಾಗವನ್ನೇ ನೋಡುತ್ತಾರೆ. ಇಷ್ಟೇ ಅಲ್ಲ ಕೆಟ್ಟದಾಗಿ ಕಮೆಂಟ್ ಮಾಡುತ್ತಾರೆ ಎಂದು ನಟಿ ಹೇಳಿದ್ದಾರೆ.

ದೇಹದ ಭಾಗಗಳ ಬಗ್ಗೆ, ಡ್ರೆಸ್ ಬಗ್ಗೆ ಕೆಟ್ಟ ಕೆಟ್ಟ ಕಮೆಂಟ್ ಮಾಡುತ್ತಾರೆ. ಎಲ್ಲಾ ಕ್ಯಾಮೆರಾಗಳು ನಮ್ಮತ್ತ ಫೋಕಸ್ ಆಗಿರುತ್ತದೆ. ಈ ವೇಳೆ ತಾಳ್ಮೆ ಕಳೆದುಕೊಂಡರೆ ನಾವೇ ತಪ್ಪಿತಸ್ಥರಾಗುತ್ತಾರೆ ಎಂದು ನಟಿ ಹೇಳಿದ್ದಾರೆ.
 

ಆಯೇಶಾ ಖಾನ್ ಹಿಂದಿ ಬಿಗ್ ಬಾಸ್‌ನಲ್ಲಿ ಕೆಲ ಸ್ಫೋಟಕ ಮಾಹಿತಿ ರಿವೀಲ್ ಮಾಡಿದ್ದರು.ಮುನಾವರ್ ಫಾರೂಖಿ ಎರಡು ಬಾರಿ ನನಗೆ ಮೋಸ ಮಾಡಿದ್ದಾನೆ ಎಂದಿದ್ದರು.
 

ಮುನಾವರ್ ನಂಬಿಕೆಗೆ ಅರ್ಹನಲ್ಲ, ಮುನಾವರ್ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದೆ. ಆದರೆ ಎರಡು ಬಾರಿ ನನಗೆ ಮೋಸ ಮಾಡಿದ್ದ ಎಂದಿದ್ದ ನಟಿ ವಿರುದ್ಧ ಟೀಕೆಗಳು ಕೇಳಿಬಂದಿತ್ತು.

Latest Videos

click me!