ಮುದ್ದು ಮಗನನ್ನು ಪರಿಚಯಿಸಿದ ಹಾಸ್ಯ ನಟಿ ಭಾರ್ತಿ ಸಿಂಗ್ ದಂಪತಿ; ಹೆಸರು ರಿವೀಲ್

Published : Jul 13, 2022, 09:32 AM IST

ಹಾಸ್ಯ ನಟಿ ಭಾರ್ತಿ ಸಿಂಗ್ ಮೊದಲ ಬಾರಿಗೆ ಮಗನ ಫೋಟೋವನ್ನು ಶೇರ್ ಮಾಡಿದ್ದಾರೆ. ತೆರಹೇವಾರಿ ರೀತಿಯ ಫೋಟೋಗಳನ್ನು ಭಾರ್ತಿ ಸಿಂಗ್ ಹಂಚಿಕೊಂಡಿದ್ದಾರೆ. ಭಾರ್ತಿ ಸಿಂಗ್ ಮುದ್ದಾದ ಮಗನಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ಸ್ ಹರಿದುಬರುತ್ತಿದೆ.    

PREV
110
ಮುದ್ದು ಮಗನನ್ನು ಪರಿಚಯಿಸಿದ ಹಾಸ್ಯ ನಟಿ ಭಾರ್ತಿ ಸಿಂಗ್ ದಂಪತಿ; ಹೆಸರು ರಿವೀಲ್

ಕಾಮಿಡಿ ಕ್ವೀನ್, ಡಾನ್ಸರ್ ಭಾರತಿ ಸಿಂಗ್ ಮತ್ತು ಹರ್ಷ್ ಲಿಂಬಾಚಿಯಾ ದಂಪತಿ ಗಂಡು ಮಗುವನ್ನು ಸ್ವಾಗತಿಸಿ 3 ತಿಂಗಳಾಗಿದೆ.  ಭಾರತಿ ಸಿಂಗ್ ಏಪ್ರಿಲ್ 3 ರಂದು ಮೊದಲ ಮಗುವಿಗೆ ಜನ್ಮ ನೀಡಿದ್ದರು. ಈ ಬಗ್ಗೆ ಭಾರತಿ ಸಿಂಗ್ ಪತಿ ಹರ್ಷ್ ಲಿಂಬಾಚಿಯಾ ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದರು.

210

 ಬಳಿಕ ಇಬ್ಬರು ಮಗನ ಫೋಟೋವನ್ನು ಎಲ್ಲಿಯೂ ಶೇರ್ ಮಾಡಿರಲಿಲ್ಲ. ಅಲ್ಲದೇ ಮಗನ ಹೆಸರನ್ನು ಸಹ ರಿವೀಲ್ ಮಾಡಿರಲಿಲ್ಲ. ಇದೀಗ ಮೊದಲ ಬಾರಿಗೆ ಭಾರ್ತಿ ಸಿಂಗ್ ದಂಪತಿ ಮುದ್ದು ಮಗನ ಫೋಟೋವನ್ನು ಶೇರ್ ಮಾಡಿದ್ದಾರೆ.
ಅಂದಹಾಗೆ ಇತ್ತೀಚಿಗಷ್ಟೆ ಭಾರ್ತಿ ಸಿಂಗ್ ವಿಡಿಯೋ ಶೇರ್‌ ಮಾಡಿ ತನ್ನ ಮಗನ ಅಡ್ಡ ಹೆಸರು ಬಹಿರಂಗ ಪಡಿಸಿದ್ದರು. 
 

310

ಮುದ್ದು ಮಗನಿಗೆ ಗೋಲಾ ಎಂದು ಕರೆಯುತ್ತಿದ್ದರು. ಇದರ ಹಿಂದಿನ ಕಾರಣವನ್ನು ಸಹ ಬಹಿರಂಗ ಪಡಿಸಿದ್ದರು. ಅವರು ತಮ್ಮ ಮಗ  ಗುಂಡಾಗಿ ಇದ್ದಾನೆ ಹಾಗೂ ಗೋಲಾ ಬಂದ ನಂತರ ನಮ್ಮ ಜೀವನದಲ್ಲಿ ಬಹಳಷ್ಟು ಬದಲಾವಣೆಯಾಗಿದೆ ಎಂದಿದ್ದರು.

410

ಇದೀಗ ಮೊದಲ ಬಾರಿಗೆ ಮಗನ ಫೋಟೋವನ್ನು ಶೇರ್ ಮಾಡಿದ್ದಾರೆ. ತೆರಹೇವಾರಿ ರೀತಿಯ ಫೋಟೋಗಳನ್ನು ಭಾರ್ತಿ ಸಿಂಗ್ ಹಂಚಿಕೊಂಡಿದ್ದಾರೆ. ಭಾರ್ತಿ ಸಿಂಗ್ ಮುದ್ದಾದ ಮಗನಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ಸ್ ಹರಿದುಬರುತ್ತಿದೆ.  
 

510

ಭಾರ್ತಿ ಸಿಂಗ್ ಮತ್ತು ಹರ್ಷ್ ಲಿಂಬಾಚಿಯಾ  ದಂಪತಿ ಮಗುವನ್ನು ಎತ್ತಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಗನ ಫೋಟೋವನ್ನು ರಿವೀಲ್ ಮಾಡಿ ಗಣಪತಿ ಬಪ್ಪ ಮೋರಿಯಾ ಎಂದು ಬರೆದುಕೊಂಡಿದ್ದಾರೆ. 

610

ಅಂದಹಾಗೆ ಭಾರ್ತಿ ಸಿಂಗ್ ದಂಪತಿ ಮುದ್ದಾದ ಮಗನಿಗೆ ಲಕ್ಷ್ ಎಂದು ನಾಮಾಕರಣ ಮಾಡಿದ್ದಾರೆ. ಲಕ್ಷ್ ಫೋಟೋಗೆ ಅಭಿಮಾನಿಗಳ ಜೊತೆಗೆ ಸಿನಿ ಸೆಲೆಬ್ರಿಟಿಗಳು ಸಹ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 
 

710

ಅಂದಹಾಗೆ ಭಾರ್ತಿ ಸಿಂಗ್ ಮಗುವಿಗೆ ಜನ್ಮ ನೀಡಿದ 11 ದಿನಕ್ಕೆ ಕೆಲಸಕ್ಕೆ ಮರಳಾಗಿದ್ದರು. ಭಾರ್ತಿ ಸಿಂಗ್ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಕೆಲಸ ಮತ್ತು ಮಗುವಿನ ಆರೈಕೆ ಎರಡು ಕಡೆ ಹಾಸ್ಯ ನಟಿ ಬ್ಯುಸಿಯಾಗಿದ್ದಾರೆ.  

810

ಭಾರತಿ ಸಿಂಗ್ ಮತ್ತು ಹರ್ಷ್ ಇಬ್ಬರು ಮದುವೆಗೆ ಮೊದಲು ಸುಮಾರು 7 ವರ್ಷಗಳ ಕಾಲ ಪರಸ್ಪರ ಡೇಟ್‌ ಮಾಡುತ್ತಿದ್ದರು. ಮೊದಲು ಸ್ನೇಹಿತರಾಗಿದ್ದ ಇವರ ಸಂಬಂಧ ನಂತರ ಅದು ಪ್ರೀತಿಗೆ ತಿರುಗಿತು. ರಿಯಾಲಿಟಿ ಶೋ ಕಾಮಿಡಿ ಸರ್ಕಸ್‌ನಲ್ಲಿ ಇಬ್ಬರೂ ಮೊದಲು ಭೇಟಿಯಾದರು. 

910

ಭಾರತಿ ರಿಯಾಲಿಟಿ ಶೋ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಸೇರಿದರು. ಹರ್ಷ್ ಚಿತ್ರಕಥೆಗಾರರಾಗಿದ್ದರು. ಈ ಕಾರ್ಯಕ್ರಮದ ವೇಳೆ ಇಬ್ಬರೂ ಸ್ನೇಹಿತರಾದರು. ಬಳಿಕ ಪ್ರೇಮಿಗಳಾಗಿ ನಂತರ ಇಬ್ಬರು ಮದುವೆಯಾದರು.

1010


 ಹರ್ಷ್ ಮತ್ತು ಭಾರ್ತಿ ಇಬ್ಬರು ಗೋವಾದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಿಕೊಂಡಿದ್ದರು. ಗೋವಾದಲ್ಲಿ 5 ದಿನಗಳ ಮದುವೆಯ ಸಮಾರಂಭ ನಡೆದಿತ್ತು. ಅನೇಕ ಸೆಲೆಬ್ರೆಟಿಗಳು ಮದುವೆಯಲ್ಲಿ ಭಾಗವಹಿಸಿದ್ದರು.

click me!

Recommended Stories