Top Feel-Good Movies: ಮತ್ತೆ ಮತ್ತೆ ನೋಡುವಂತೆ ಮಾಡುವ ಮನಸಿಗೆ‌ ಹಿತ ನೀಡುವ ಸಿನಿಮಾಗಳು

Published : Jun 20, 2025, 03:57 PM ISTUpdated : Jun 20, 2025, 04:09 PM IST

ಮನಸಿಗೆ ಹಿತ ನೀಡುವ ಅದೆಷ್ಟೋ ಸಿನಿಮಾಗಳಿವೆ. ಅವುಗಳಲ್ಲಿ ನಿಮ್ಮ ಕುತೂಹಲವನ್ನು ಕೆರಳಿಸಿ, ಕಥೆಯ ಜೊತೆಗೆ ನೀವು ಸಾಗುವಂತಹ ಸುಂದರ ಸಿನಿಮಾಗಳಿವು.

PREV
110

ಕೆಲವು ಸಿನಿಮಾಗಳು ನಮ್ಮನ್ನು ನಗೆಗಡಲಲ್ಲಿ ತೇಲಿಸಿದ್ರೆ, ಮತ್ತೆ ಕೆಲವು ಸಿನಿಮಾಗಳು ಅಳು ತರುಸುತ್ತವೆ. ಇನ್ನೂ ಕೆಲವು ಸಿನಿಮಾಗಳು ಮನಸಿಗೆ ಹಿತವನ್ನು ನೀಡುತ್ತೆ. ಮತ್ತೆ ಮತ್ತೆ ನೋಡುವಂತೆ ಮಾಡುವ, ಮನಸಿಗೆ ಹಿತವನ್ನು ನೀಡುವ ಸಿನಿಮಾಗಳ ಲಿಸ್ಟ್ ಇಲ್ಲಿದೆ.

210

ದಿ ಆರ್ಟ್ ಆಫ್ ರೇಸಿಂಗ್ ಇನ್ ದಿ ರೇನ್ (The Art of Racing In The Rain)

"ದಿ ಆರ್ಟ್ ಆಫ್ ರೇಸಿಂಗ್ ಇನ್ ದಿ ರೇನ್" ಒಂದು ಸುಂದರವಾದ ಕಥೆಯಾಗಿದೆ, ಇದು ಒಬ್ಬ ಮನುಷ್ಯ ಮತ್ತು ಅವನ ನಿಷ್ಠಾವಂತ ನಾಯಿಯ ನಡುವಿನ ಹೃದಯಸ್ಪರ್ಶಿ ಬಾಂಧವ್ಯವನ್ನು ಸರಾಗವಾಗಿ ಹೆಣೆಯುವ ಕಥೆ. ಈ ಚಿತ್ರವು ಪ್ರೇಕ್ಷಕರನ್ನು ಭಾವನಾತ್ಮಕ ರೋಲರ್ ಕೋಸ್ಟರ್ ರೈಡ್ ಮಾಡುವಂತೆ ಮಾಡುವುದಲ್ಲದೇ ಜೀವನವನ್ನೇ ಬದಲಾಯಿಸುತ್ತೆ. ಇದೊಂದು ಭಾವನಾತ್ಮಕ ಸಿನಿಮಾ ಕೂಡ ಹೌದು.

310

ನೀತಾಮ್ ಒರು ವಾನಮ್ (Nitham Oru vaanam)

ಇದೊಂದು ಫೀಲ್ ಗುಡ್ ಮೂವಿ ಅಂತಾನೆ ಹೇಳಬಹುದು. ಜೀವನ ಅಂದ್ರೆ ನಾವು ಅಂದುಕೊಂಡಂತೆ ಅಲ್ಲ, ಅದರಲ್ಲಿ ಬರೋ ಚಾಲೆಂಜಸ್ ಗಳನ್ನು ಹೇಗೆಲ್ಲಾ ನಾವು ಎದುರಿಸಬಹುದು ಅನ್ನೋದನ್ನು ತಮಾಷೆಯಾಗಿಯೇ ಹೇಳ ಹೊರಟ ಸಿನಿಮಾ ಇದು.

410

ಹೋಮ್ (Home)

ಈ ಮಲಯಾಲಂ ಸಿನಿಮಾ ಒಂದು ಸಾಮಾನ್ಯ ಮಿಡಲ್ ಕ್ಲಾಸ್ ಫ್ಯಾಮಿಲಿಯ ಕಥೆ. ಆಲಿವರ್ ಟ್ವಿಸ್ಟ್ ಎನ್ನುವ ಮಧ್ಯವಯಸ್ಕ ತನ್ನ ಮಕ್ಕಳ ಜೊತೆಗೆ ಕನೆಕ್ಟ್ ಆಗೋದಕ್ಕೆ ಸ್ಮಾರ್ಟ್ ಫೋನ್ ಸಹಾಯ ಪಡೆದಾಗ ಏನೆಲ್ಲಾ ಆಗುತ್ತದೆ, ತಂದೆ ಮಾತನ್ನು ಕಡೆಗಣಿಸಿದ ಮಗನಿಗೆ ಮುಂದೊಂದು ದಿನ ಅಪ್ಪನೇ ನಿಜವಾದ ಹೀರೋ ಅನ್ನೋದು ತಿಳಿದಾಗ ಏನಾಗುತ್ತದೆ ಅನ್ನೋದು ಸುಂದರವಾದ ಸರಳ ಕಥೆ.

510

ಮೈಅಳಗನ್ (Maiameiyazhagan)

ಈ ಚಿತ್ರವು ಹೃದಯಸ್ಪರ್ಶಿ ಮತ್ತು ಭಾವನಾತ್ಮಕ ಕಥೆಯನ್ನು ಹೊಂದಿದ್ದು, ಕುಟುಂಬ ಬಂಧಗಳ ಸಾರ ಮತ್ತು ನಮ್ಮ ಮರೆತುಹೋದ ಇತಿಹಾಸವನ್ನು ಸುಂದರವಾಗಿ ಸೆರೆಹಿಡಿಯುತ್ತದೆ. ಕೂಡು ಕುಟುಂಬದ ಕಥೆ, ಹಳ್ಳಿಯ ಜೀವನದ ಸರಳತೆ ಮತ್ತು ಪ್ರೀತಿಪಾತ್ರರಿಂದ ಸುತ್ತುವರೆದಿರುವ ಸಂತೋಷವನ್ನು ಅನುಭವಿಸುವಂತಹ ಸಿನಿಮಾ ಇದು. ಈ ಚಿತ್ರವು ನಿಮ್ಮನ್ನು ಭಾವನಾತ್ಮಕ ರೋಲರ್ ಕೋಸ್ಟರ್‌ಗೆ ರೈಡ್ ಮಾಡಿಸುತ್ತೆ. ಒಟ್ಟಲ್ಲಿ ಇದೊಂದು ಸುಂದರವಾದ ಕಥೆ.

610

777 ಚಾರ್ಲಿ (777 Charlie)

ಚಾರ್ಲಿ ಸಿನಿಮಾ ನಾಯಿ ಮತ್ತು ಮನುಷ್ಯನ ನಡುವಿನ ಆಳವಾದ ಸಂಬಂಧದ ಕುರಿತಾಗಿದೆ. ಮನುಷ್ಯರನ್ನೇ ಕಂಡರೆ ಆಗದ ವ್ಯಕ್ತಿಯೊಬ್ಬನ ಜೀವನದಲ್ಲಿ ನಾಯಿಯೊಂದು ಎಂಟ್ರಿ ಕೊಟ್ಟಾಗ ಏನೇನು ಆಗುತ್ತೆ ಅನ್ನೋದು ಕಥೆ. ಕೊನೆಯಲ್ಲಿ ಅಳಿಸುವಂತಹ ಪೂರ್ತಿಯಾಗಿ ಮನಸಿಗೆ ಹಿತ ನೀಡುವ ಕಥೆ ಇದು.

710

ಟೂರಿಸ್ಟ್ ಫ್ಯಾಮಿಲಿ (Tourist Family)

ಇದು ಕೂಡ ಮನಸಿಗೆ ಹಿತವನ್ನು ನೀಡುವ ಸಿನಿಮಾ. ಶ್ರೀಲಂಕಾದಿಂದ ಓಡಿ ಭಾರತಕ್ಕೆ ಬಂದಿರುವ ಒಂದು ಕುಟುಂಬವು ಅಲ್ಲಿ ಏನೇನು ಅನುಭವಿಸುತ್ತೆ ಅನ್ನೋದು ಕಥೆ. ಈ ಸಿನಿಮಾದಲ್ಲಿ ಹಾಸ್ಯ, ಇಮೋಷನ್ಸ್, ಪ್ರೀತಿ ಎಲ್ಲವನ್ನೂ ಸುಂದರವಾಗಿ ಚಿತ್ರಿಸಲಾಗಿದೆ.

810

ದ ಶಾವ್‌ಶಾಂಕ್ ರಿಡೆಂಪ್ಶನ್ (the shawshank redemption)

ಫ್ರಾಂಕ್ ಡಾರಾಬಾಂಟ್ ಅವರ ದಿ ಶಾವ್‌ಶಾಂಕ್ ರಿಡೆಂಪ್ಶನ್ ನೋಡಲೇಬೇಕಾದ ಸಿನಿಮಾ, ಇದು ಜೈಲಿನ ಕಥೆ ಹೇಳುವ ಸಿನಿಮಾ. ಇದರಲ್ಲಿ ಭರವಸೆ, ಸ್ನೇಹ ಮತ್ತು ಮಾನವ ಚೈತನ್ಯದ ಬಗ್ಗೆ ಆಳವಾದ ಕಥೆ ಇದೆ. ಸ್ಟೀಫನ್ ಕಿಂಗ್ ಅವರ ಕಾದಂಬರಿ ರೀಟಾ ಹೇವರ್ತ್ ಮತ್ತು ಶಾವ್‌ಶಾಂಕ್ ರಿಡೆಂಪ್ಶನ್ ಅನ್ನು ಆಧರಿಸಿದ ಈ ಚಿತ್ರದಲ್ಲಿ ಕೊಲೆ ಕೇಸ್ ಮೇಲೆ ಶಿಕ್ಷೆಗೊಳಗಾದ ಬ್ಯಾಂಕರ್ ಆಂಡಿ ಡುಫ್ರೆಸ್ನೆ ಪಾತ್ರದಲ್ಲಿ ಟಿಮ್ ರಾಬಿನ್ಸ್ ನಟಿಸಿದ್ದಾರೆ.

910

ಚಾರ್ಲಿ (Charlie)

ದುಲ್ಖರ್ ಸಲ್ಮಾನ್ ಅಭಿನಯದ ಈ ಸಿನಿಮಾ ನೋಡೊದಕ್ಕೆ ಖುಷಿ. ಇನ್ನೊಬ್ಬರಿಗೆ ನೆರವಾಗುತ್ತಾ, ಜೀವನವನ್ನು ಖುಷಿಯಾಗಿ ಜೀವಿಸೋದು ಹೇಗೆ ಅನ್ನೋದನ್ನು ಈ ಸಿನಿಮಾ ಹೇಳುತ್ತೆ. ಜೀವನ ಪ್ರೀತಿಯನ್ನು ತಿಳಿಸುವಂತಹ ಸಿನಿಮಾ ಇದಾಗಿದೆ.

1010

ಅನಂದಂ (Anandam)

ಇದು ಸಂಪೂರ್ಣವಾಗಿ ಕಾಲೇಜಿನ ಕಥೆಯನ್ನು ಹೇಳುವ ಕಥೆ. ನೀವು ಸಂಪೂರ್ಣವಾಗಿ ಈ ಎಂಜಾಯ್ ಮಾಡಬಹುದು. ತಮಾಷೆ, ಹದಿಹರೆಯದ ರೊಮ್ಯಾನ್ಸ್, ಪೂರ್ತಿ ಕಥೆ ನಿಮ್ಮನ್ನ ನೋಡಿಸಿಕೊಂಡು ಹೋಗುತ್ತದೆ.

Read more Photos on
click me!

Recommended Stories