ಮೊದಲ ನೋಟದಲ್ಲೇ ಸ್ನೇಹ ಲವ್ವಲ್ಲಿ ಬಿದ್ದಿದ್ದ ಅಲ್ಲು ಅರ್ಜುನ್… ಇಲ್ಲಿದೆ ಪುಷ್ಫಾ ನಟನ ಲವ್ ಸ್ಟೋರಿ

Published : Apr 04, 2025, 02:43 PM ISTUpdated : Apr 06, 2025, 09:40 AM IST

ಟಾಲಿವುಡ್ ನಟ ಅಲ್ಲು ಅರ್ಜುನ್ ಹಾಗೂ ಪತ್ನಿ ಸ್ನೇಹ ರೆಡ್ಡಿ, ಮೊದಲು ಭೇಟಿಯಾಗಿದ್ದೆಲ್ಲಿ? ಲವ್ ಆಗಿದ್ದು ಹೇಗೆ? ಇಲ್ಲಿದೆ ಈ ಜೋಡಿಯ ಫುಲ್ ಲವ್ ಕಹಾನಿ.  

PREV
18
ಮೊದಲ ನೋಟದಲ್ಲೇ ಸ್ನೇಹ ಲವ್ವಲ್ಲಿ ಬಿದ್ದಿದ್ದ ಅಲ್ಲು ಅರ್ಜುನ್… ಇಲ್ಲಿದೆ ಪುಷ್ಫಾ ನಟನ ಲವ್ ಸ್ಟೋರಿ

ತೆಲುಗಿನ ಜನಪ್ರಿಯ ಹೀರೋ ಹಾಗೂ ಪುಷ್ಪ ಸಿನಿಮಾ ಮೂಲಕ ತಾವು ನಟ ಭಯಂಕರ ಅನ್ನೋದನ್ನು ತಿಳಿಸಿದ ನಟ ಅಲ್ಲು ಅರ್ಜುನ್ (Allu Arjun) ಮತ್ತು ಅವರ ಪತ್ನಿ ಸ್ನೇಹ ರೆಡ್ಡಿ ಪ್ರೀತಿಸಿ ಮದುವೆಯಾಗಿದ್ದು, ಈ ಜೋಡಿಯ ಮುದ್ದಾದ ಲವ್ ಸ್ಟೋರಿ ಏನು ಅನ್ನೋದನ್ನು ತಿಳಿಯೋಣ ಬನ್ನಿ. 
 

28

ಅಲ್ಲು ಅರ್ಜುನ್ ಒಬ್ಬ ನಟ, ಮತ್ತು ಸ್ನೇಹ ರೆಡ್ಡಿ (Sneha Reddy) ಒಬ್ಬ ಎಂಜಿನಿಯರ್; ಇಬ್ಬರೂ ಹೇಗೆ ಭೇಟಿಯಾದರು? ಇವರ ಲವ್ ಸ್ಟೋರಿ ಶುರುವಾಗಿದ್ದು ಹೇಗೆ? ಎನ್ನೋ ಕುತೂಹಲ ನಿಮಗೂ ಇರಬಹುದು. ಹಾಗಿದ್ರೆ ಕೇಳಿ, ಈ ಜೋಡಿಯ ಲವ್ ಸ್ಟೋರಿ ಯಾವುದೇ ರೊಮ್ಯಾಂಟಿಕ್ ಸಿನಿಮಾ ಕಥೆಗಿಂತ ಕಡಿಮೆ ಇರಲಿಲ್ಲ. 
 

38

ಒಂದು ದಶಕಕ್ಕೂ ಹೆಚ್ಚು ಹಿಂದೆ, ಅಲ್ಲು ಅರ್ಜುನ್ ತಮ್ಮ ಸ್ನೇಹಿತನ ಮದುವೆಯಲ್ಲಿ ಪಾಲ್ಗೊಳ್ಳಲು ಅಮೆರಿಕಕ್ಕೆ ಹೋಗಿದ್ದರು. ಅಲ್ಲಿ, ಅವರ ಸ್ನೇಹಿತರೊಬ್ಬರು ಅವರನ್ನು ಉದ್ಯಮಿ ಕೆ.ಸಿ. ಶೇಖರ್ ರೆಡ್ಡಿ ಮತ್ತು ಕವಿತಾ ರೆಡ್ಡಿ ಅವರ ಪುತ್ರಿ ಸ್ನೇಹಾ ರೆಡ್ಡಿ ಅವರಿಗೆ ಪರಿಚಯಿಸಿದರು.
 

48

ಲವ್ ಅಟ್ ಫಸ್ಟ್ ಸೈಟ್  (Love at First Site) ಎನ್ನುವಂತೆ, ಮೊದಲ ನೋಟದಲ್ಲೇ ಸ್ನೇಹಾ ಪ್ರೀತಿಯಲ್ಲಿ ಬಿದ್ದಿದ್ದರೂ ಅಲ್ಲು ಅರ್ಜುನ್. ಆ ಸಮಯದಲ್ಲಿ ಇಬ್ಬರೂ ಸಂತೋಷದ ಮಾತುಗಳನ್ನು ಬಿಟ್ಟು ಬೇರೇನೂ ವಿನಿಮಯ ಮಾಡಿಕೊಳ್ಳಲಿಲ್ಲ. ನಂತರ, ಅಲ್ಲು ಅರ್ಜುನ್ ಸ್ನೇಹಿತರೊಬ್ಬರು ಸ್ನೇಹಾಗೆ ಮೆಸೇಜ್ ಮಾಡುವಂತೆ ಒತ್ತಾಯಿಸಿದ್ದರಂತೆ, ಸ್ನೇಹಿತರ ಒತ್ತಾಯಕ್ಕೆ ಮಣಿದು ಅರ್ಜುನ್ ಮೆಸೇಜ್ ಕಳುಹಿಸಿದ್ದರು, ಅಚ್ಚರಿ ಎನ್ನುವಂತೆ ಸ್ನೇಹಾ ಅದಕ್ಕೆ ರಿಪ್ಲೈ ಮಾಡಿದ್ದರಂತೆ. 
 

58

ಮತ್ತೆ ಭೇಟಿಯಾಗಲು ನಿರ್ಧರಿಸುವ ಮೊದಲು ಇಬ್ಬರೂ ಫೋನ್‌ನಲ್ಲಿ ಪರಸ್ಪರ ಮಾತನಾಡಲು ಆರಂಭಿಸಿದರು. ಒಂದು ಡೇಟ್ ಮತ್ತೊಂದು ಡೇಟ್‌ಗೆ ಕಾರಣವಾಯಿತು, ಮತ್ತು ಕೊನೆಗೆ ಅವರು ಮದುವೆಯಾಗಲು ನಿರ್ಧರಿಸಿದರು. ಈ ಜೋಡಿ ಲವ್ ಮಾಡುತ್ತಿದ್ದಾಗ, ಸಂಬಂಧವನ್ನು ತುಂಬಾನೆ ಸೀಕ್ರೆಟ್ ಆಗಿಟ್ಟಿದ್ದರು.
 

68

ಇವರಿಬ್ಬರ ಬಗ್ಗೆ ಮೊದಲು ತಿಳಿದುಕೊಂಡವರು ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ (Allu Aravind). ಆರಂಭದಲ್ಲಿ, ಅರ್ಜುನ್ ಮತ್ತು ರೆಡ್ಡಿ ಅವರ ಪೋಷಕರು ಅವರ ಸಂಬಂಧವನ್ನು ಒಪ್ಪಲಿಲ್ಲ, ಆದರೆ ಈ ಜೋಡಿ ಮಾತ್ರ ಒಬ್ಬರನ್ನೊಬ್ಬರು ಬಿಟ್ಟು ಕೊಡಲು ರೆಡಿಯಾಗಿರಲಿಲ್ಲ. ಹೆತ್ತವರ ಅಸಮ್ಮತಿಗೆ ದಂಪತಿಗಳು ಮಣಿಯಲಿಲ್ಲ, ನಂತರ ಕೊನೆಗೆ ಹೇಗೋ ತಮ್ಮ ಪೋಷಕರನ್ನು ಒಪ್ಪಿಸಿದ್ದರು ಈ ಜೋಡಿ.
 

78

ಇಬ್ಬರೂ ನವೆಂಬರ್ 26, 2010 ರಂದು ಹೈದರಾಬಾದ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು ಮತ್ತು ಮೂರು ತಿಂಗಳ ನಂತರ ದಾಂಪತ್ಯ ಜೀವನಕ್ಕೆ (married life) ಕಾಲಿಟ್ಟರು. 2014ರಲ್ಲಿ, ಅವರು ತಮ್ಮ ಮಗ ಅಲ್ಲು ಅಯಾನ್ ಗೆ ಪೋಷಕರಾದರು ಮತ್ತು ನಂತರ ಅವರಿಗೆ ಅಲ್ಲು ಅರ್ಹ ಎಂಬ ಮಗಳು ಜನಿಸಿದಳು.
 

88

ಇಂದು, ಅಲ್ಲು ಅರ್ಜುನ್ ಅಪಾರ ಅಭಿಮಾನಿಗಳನ್ನು ಮತ್ತು ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಆದರೆ ಅವರು ಕೇವಲ ಒಬ್ಬ ವ್ಯಕ್ತಿಯನ್ನು ಮಾತ್ರ ಫಾಲೋ ಮಾಡ್ತಿದ್ದಾರೆ, ಅದು ಅವರ ಪತ್ನಿ ಸ್ನೇಹಾ.  ಇದು ಅಲ್ಲು ಅರ್ಜುನ್ ಮತ್ತು ಸ್ನೇಹಾಅ ರೆಡ್ಡಿಯ ಮುದ್ದಾದ ಲವ್ ಸ್ಟೋರಿ. 
 

Read more Photos on
click me!

Recommended Stories