ಕನ್ನಡಿಯಲ್ಲಿ ನನ್ನ ಮುಖ ನೋಡಿಕೊಳ್ಳುವುದಕ್ಕೂ ಇಷ್ಟವಿರಲಿಲ್ಲ: Avika Gor

First Published | Feb 1, 2022, 5:23 PM IST

ಬಾಲನಟಿಯಾಗಿ ಬಣ್ಣದ ಜರ್ನಿ ಶುರು ಮಾಡಿದ ಅವಿಕಾ ಗೋರ್ ಬಾಡಿ ಶೇಮಿಂಗ್‌ ಎದುರಿಸಿದ ದಿನಗಳ ಬಗ್ಗೆ ಹಂಚಿಕೊಂಡಿದ್ದಾರೆ.

ಹಿಂದಿ ಕಿರುತೆರೆಯಲ್ಲಿ ದೊಡ್ಡ ಸಂಚಲನ ಕ್ರಿಯೇಟ್ ಮಾಡಿದ ಧಾರಾವಾಹಿ ಬಾಲಿಕಾವಧು ನಟಿ ಅವಿಕಾ ಗೋರ್ ಬಾಡಿ ಶೇಮಿಂಗ್ ದಿನಗಳ ಬಗ್ಗೆ ಮಾತನಾಡಿದ್ದಾರೆ.

'ನಾನು ನನ್ನನೇ ತುಂಬಾ ದ್ವೇಷ ಮಾಡುತ್ತಿದ್ದೆ. ನಾನು ಹೇಗೆ ಕಾಣಿಸುತ್ತಿದ್ದೇನೆ ಎಂಬುದು ಮುಖ್ಯವಾಗಿರಲಿಲ್ಲ ಹೀಗಾಗಿ ನಟನೆ ಬಗ್ಗೆ ಗಮನ ಹರಿಸುತ್ತಿದ್ದೆ' ಎಂದು ಪಿಂಕ್ವಿಲ್ಲಾ ಸಂದರ್ಶನದಲ್ಲಿ ಹೇಳಿದ್ದಾರೆ.

Tap to resize

'ಕನ್ನಡಿಯಲ್ಲಿ ನನ್ನ ಮುಖ ನೋಡಿಕೊಳ್ಳುವುದಕ್ಕೂ ಇಷ್ಟವಿರಲಿಲ್ಲ. ನನಗೆ ನೆಗೆಟಿವ್ ಫೀಲಿಂಗ್ ಬರುತ್ತಿತ್ತು. ನಾನು ಒಂದು ದಿನ ಮುನ್ನವೇ costumes ಟ್ರಯಲ್ ಮಾಡುತ್ತಿದ್ದೆ'

 'ನಾನು ನನ್ನ ಬೆಸ್ಟ್‌ ಕಾಣಿಸಿಕೊಳ್ಳಬೇಕು ಎನ್ನುವುದು ನನಗಿರಲಿಲ್ಲ. ಹೇಗಿದ್ದರೂ ನಡೆಯುತ್ತದೆ ಎಂದುಕೊಂಡಿದ್ದೆ. ಜನರು ಒಪ್ಪಿಕೊಂಡಿದ್ದರು'

'ನಾನು ನನ್ನ ವೀಕ್ಷಕರ ಜೊತೆ ಮಾತನಾಡುತ್ತಿದ್ದೆ ಅವರು ನನ್ನ ಪ್ರತಿಭೆ ಮತ್ತು ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು'

 'ನನ್ನ ನಟನೆಗೆ ಮೆಚ್ಚುಗೆ ಹರಿದು ಬರುತ್ತಿದ್ದ ಕಾರಣ ಯಾವ ಗ್ಲಾಮರ್‌ ಬಗ್ಗೆನೂ ನಾನು ತಲೆ ಕೆಡಿಸಿಕೊಳ್ಳಲಿಲ್ಲ. ನಾನು ತುಂಬಾನೇ ನೆಗೆಟಿವ್ ಆಗಿದ್ದೆ'

ಈಗ ಹಿಂದಿ ಚಿತ್ರರಂಗ ಮತ್ತು ಧಾರಾವಾಹಿಯಲ್ಲಿ ಅವಿಕಾ ಬ್ಯುಸಿಯಾಗಿದ್ದಾರೆ. ಎರಡು ಧಾರಾವಾಹಿ ಮತ್ತು ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

Latest Videos

click me!