ಕರಣ್ ಜೋಹರ್ ಅವರು ಆವಾರ್ಡ್ ಫಂಕ್ಷನ್‌ನಲ್ಲಿ ನನಗೆ ಫೋನ್ ನಂಬರ್ ನೀಡಿದ್ದರು. ನಾನು ಅವರಿಗೆ ಕರೆ ಮಾಡಿದೆ ಮತ್ತು ನಾವು ಸ್ಟಾರ್ ಜೊತೆ ಮಾತ್ರ ಕೆಲಸ ಮಾಡುತ್ತೇವೆ, ನಿಮ್ಮೊಂದಿಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಕರಣ್ ಹೇಳಿದ್ದರು ಎಂಬ ವಿಷಯವನ್ನು 2018 ರಲ್ಲಿ ಕಾಫಿ ವಿಥ್ ಕರಣ್ ನಲ್ಲಿ ಆಯುಷ್ಮಾನ್ ಖುರಾನಾ ಬಹಿರಂಗ ಪಡಿಸಿದ್ದರು.
ಆಯುಷ್ಮಾನ್ ಕಾಲೇಜು ದಿನಗಳಿಂದಲೂ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಅವರು ಆರ್‌ಜೆಯಾಗಿ ರೇಡಿಯೊದಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. 2012 ರಲ್ಲಿ ವಿಕ್ಕಿ ಡೋನರ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು
ಮಾಧ್ಯಮ ವರದಿಗಳ ಪ್ರಕಾರ, ಆಯುಷ್ಮಾನ್ ಖುರಾನಾ 6 ಮಿಲಿಯನ್ ಡಾಲರ್ ಅಂದರೆ ಸುಮಾರು 44 ಕೋಟಿ ನಿವ್ವಳ ಮೌಲ್ಯ ಹೊಂದಿದ್ದಾರೆ. ಚಲನಚಿತ್ರಗಳಲ್ಲಿ ಕೆಲಸ ಮಾಡುವುದರ ಹೊರತಾಗಿ, ಆಯುಷ್ಮಾನ್ ಖುರಾನಾ ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಳು, ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹಣವನ್ನು ಗಳಿಸುತ್ತಾರೆ.
ಆಯುಷ್ಮಾನ್ ಖುರಾನಾ ಅವರನ್ನು ಬಾಲಿವುಡ್‌ನ ಹೊಸ ಹಿಟ್ ಮಷಿನ್ ಎಂದೂ ಕರೆಯುತ್ತಾರೆ. ಈ ಕಾರಣಕ್ಕಾಗಿಯೇ ಅವರು ಒಂದು ಚಿತ್ರಕ್ಕಾಗಿ ಸುಮಾರು ಎರಡರಿಂದ ಮೂರು ಕೋಟಿ ರೂಪಾಯಿಗಳನ್ನು ಚಾರ್ಜ್ ಮಾಡುತ್ತಾರೆ .
ಬಾಲಿವುಡ್ ನಟ ಗಾಯಕರೂ ಆಗಿದ್ದಾರೆ. ತಮ್ಮ ನಟನೆಯ ಜೊತೆಗೆ ಹಾಡುಗಾರಿಕೆಗೂ ಪ್ರಸಿದ್ಧರಾಗಿದ್ದಾರೆ ಇವರು. ಡ್ರೀಮ್ ಗರ್ಲ್, ಬಾಲಾ, ಅರ್ಟಿಕಲ್ 15, ಬಾಕ್ಸ್ ಆಫೀಸ್‌ನಲ್ಲಿ ಆಯುಷ್ಮಾನ್ ಖುರಾನಾ ಅವರ ಅತಿ ಹೆಚ್ಚು ಗಳಿಕೆಯ ಚಿತ್ರಗಳಾಗಿವೆ
ಆಯುಷ್ಮಾನ್ ತಮ್ಮ ಯಶಸ್ಸಿನ ಕ್ರೆಡಿಟ್ ತಂದೆಗೆ ನೀಡುತ್ತಾರೆ.
ಖುರಾನಾ ಅವರು BMW 5 ಸರಣಿಯ ಕಾರನ್ನು ಹೊಂದಿದ್ದಾರೆ. ಈ ಕಾರಿನ ಬೆಲೆ ಸುಮಾರು 49 ಲಕ್ಷ ರೂ. ಇದಲ್ಲದೇ, ಅವರು ಮರ್ಸಿಡಿಸ್ ಬೆಂಜ್ ಎಸ್-ಕ್ಲಾಸ್ ಎಸ್ 350 ಅನ್ನು ಹೊಂದಿದ್ದಾರೆ. ಇದರ ಬೆಲೆ ರೂ 1.19 ಕೋಟಿ.
ಆಯುಷ್ಮಾನ್ ಖುರಾನಾ ಈ ವರ್ಷ ಮರ್ಸಿಡಿಸ್-ಮೇಬ್ಯಾಕ್ ಜಿಎಲ್‌ಎಸ್ 600 ಕಾರನ್ನು ಖರೀದಿಸಿದ್ದಾರೆ. ಇದರ ಬೆಲೆ 2.43 ಕೋಟಿ. ಅದೇ ಸಮಯದಲ್ಲಿ, ಆಯುಷ್ಮಾನ್ ಖುರಾನಾ 2020 ರಲ್ಲಿ ಪಂಚಕುಲದಲ್ಲಿ ಹೊಸ ಮನೆಯನ್ನು ಖರೀದಿಸಿದ್ದಾರೆ. ಇದರ ಬೆಲೆ ಸುಮಾರು ಒಂಬತ್ತು ಕೋಟಿ ರೂಪಾಯಿಗಳು.