ಫೋಟೋಗಳು: ಅಮೀಷಾ ಪಟೇಲ್‌ರ ಬೋಲ್ಡ್‌ ಬಿಕಿನಿ ಲುಕ್‌ ವೈರಲ್‌!

First Published | Sep 15, 2021, 7:29 PM IST

20 ವರ್ಷಗಳ ಹಿಂದೆ ಬಿಡುಗಡೆಯಾದ 'ಗದರ್: ಏಕ್ ಪ್ರೇಮ್ ಕಥಾ' ಚಿತ್ರದ ಸಕಿನಾ ಪಾತ್ರವನ್ನು ನಿರ್ವಹಿಸಿದ ನಟಿ ಅಮೀಶಾ ಪಟೇಲ್‌ಗೆ 45 ವರ್ಷ. ಅಮೀಷಾ ಇನ್ನೂ ಮದುವೆಯಾಗಿಲ್ಲ. ಇತ್ತೀಚೆಗೆ, ಅಮೀಷಾ ಪಟೇಲ್ ತನ್ನ ಕೆಲವು ಬಿಕಿನಿ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ, ಈಜು ಕೊಳದ ಬಳಿ ನೀಲಿ ಬಿಕಿನಿಯಲ್ಲಿ ಪೋಸ್ ನೀಡುತ್ತಿರುವ ಅಮೀಷಾಳನ್ನು ಕಾಣಬಹುದು. ನಟಿ  ಈ ಬೋಲ್ಡ್‌ ಲುಕ್‌ ಸಕತ್‌ ವೈರಲ್‌ ಆಗಿದೆ.

ಅಮೀಷಾ ತನ್ನ ಬಿಕಿನಿ ಲುಕ್‌ನ ಕೆಲವು ಚಿಕ್ಕ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಆಕೆ ಟೂ ಪೀಸಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ, ಅಮೀಷಾ ಸನ್‌ಗ್ಲಾಸ್‌ ಧರಿಸಿದ್ದಾರೆ. ಅಮೀಷಾ ಅವರ ಈ ವಿಡಿಯೋ ಕೆಲವೇ ಗಂಟೆಗಳಲ್ಲಿ 5 ಮತ್ತು ಒಂದೂವರೆ ಲಕ್ಷಕ್ಕೂ ಹೆಚ್ಚು ವ್ಯೂವ್ಸ್‌ ಗಳಿಸಿದೆ.
 

'ಕಹೋ ನಾ ಪ್ಯಾರ್ ಹೈ' ನಂತಹ ಸೂಪರ್‌ಹಿಟ್ ಚಿತ್ರದ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಅಮೀಷಾ ಪಟೇಲ್ ಅವರ ಕೇವಲ ಮೂರು ಅಥವಾ ನಾಲ್ಕು ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸನ್ನು ಗಳಿಸಿವೆ. ಈ ಚಿತ್ರಗಳಲ್ಲಿ 'ಗದರ್: ಏಕ್ ಪ್ರೇಮ್ ಕಥಾ', 'ಹುಮರಾಜ್' ಮತ್ತು ತಮಿಳು ಚಿತ್ರ 'ಪುದಿಯ ಗೀತೆ' ಸೇರಿವೆ.

Tap to resize

ಅಮೀಷಾ ಅವರು ಕ್ಯಾಥೆಡ್ರಲ್ ಮತ್ತು ಮುಂಬೈನ ಜಾನ್ ಕ್ಯಾನನ್ ಶಾಲೆಯಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ನಂತರ ಟಫ್ಟ್ಸ್ ವಿಶ್ವವಿದ್ಯಾಲಯದಲ್ಲಿ ಅವರು ಅರ್ಥಶಾಸ್ತ್ರದಲ್ಲಿ ಚಿನ್ನದ ಪದಕವನ್ನು ಗಳಿಸಿದ್ದರು. 45 ವರ್ಷದ ಅಮೀಶಾ ಪಟೇಲ್ ಇನ್ನೂ ಮದುವೆಯಾಗಿಲ್ಲ. 

ಕೆಲವು ವರ್ಷಗಳ ಹಿಂದೆ ಅಮಿಶಾ ಪಟೇಲ್ ಬಿಗ್ ಬಾಸ್ ಸೀಸನ್ 13 ರಲ್ಲಿ ಕಾಣಿಸಿಕೊಂಡಿದ್ದರು. ಇದಷ್ಟೇ ಅಲ್ಲ, ಸಲ್ಮಾನ್ ಖಾನ್ ಜೊತೆ ಶೋನ ಪ್ರೀಮಿಯರ್‌ನಲ್ಲೂ ಅವರು ಕಾಣಿಸಿಕೊಂಡರು. ಆದರೆ ನಂತರ ಅವರು ಮತ್ತೆ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿಲ್ಲ.

ಇಲ್ಲಿಯವರೆಗೆ ಸುಮಾರು 35 ಚಿತ್ರಗಳಲ್ಲಿ ಕೆಲಸ ಮಾಡಿರುವ ಅಮೀಷಾ, ಹೃತಿಕ್ ರೋಷನ್, ಸನ್ನಿ ಡಿಯೋಲ್, ಬಾಬಿ ಡಿಯೋಲ್, ಸಲ್ಮಾನ್ ಖಾನ್, ಸೈಫ್ ಅಲಿ ಖಾನ್, ಅನಿಲ್ ಕಪೂರ್, ಸಂಜಯ್ ದತ್ ಮತ್ತು ಅಕ್ಷಯ್ ಖನ್ನಾ ಅವರ ಜೊತೆ ಕೆಲಸ ಮಾಡಿದ್ದಾರೆ,

ಆದರೆ ಹೃತಿಕ್ ರೋಷನ್, ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಹೊರತುಪಡಿಸಿ, ಇತರ  ಯಾವುದೇ ಸ್ಟಾರ್ಸ್‌ ಜೊತೆ ಅಮೀಷಾ ಪಟೇಲ್ ಮಾಡಿದ ಚಿತ್ರಗಳು ಹೆಚ್ಚಿನ ಯಶಸ್ಸನ್ನು ಪಡೆಯಲಿಲ್ಲ.

ಅಮೀಷಾರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾ, ಹೆತ್ತವರೊಂದಿಗೆ ಆಸ್ತಿ ವಿಚಾರವಾಗಿ ಅವರ ನಡುವೆ ಬಹಳ ದಿನಗಳಿಂದ ವಿವಾದವಿದೆ. ತನ್ನ ತಂದೆ 12 ಕೋಟಿ ರೂ.ಗಳನ್ನು ದೋಚಿದ್ದಾರೆ ಎಂದು ಅಮೀಷಾ ಆರೋಪಿಸಿದ್ದರು. 

ನಟಿಯ ಪ್ರಕಾರ, ಆಕೆಯ ತಂದೆ ತನ್ನ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಅಮೀಷಾ ಒಮ್ಮೆ ಮಾಧ್ಯಮಗಳ ಮುಂದೆ ತನ್ನ ತಾಯಿ ಚಪ್ಪಲಿಯಿಂದ ಹೊಡೆದ ನಂತರ ಮನೆಯಿಂದ ಹೊರಹಾಕಿದರು ಎಂದೂ  ಹೇಳಿದರು. 

Latest Videos

click me!