ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಆಶಾ ಭೋಸ್ಲೆ ಮೊಮ್ಮಗಳು; ಎಂಥಾ ಸುಂದರಿ ಈ ಝನಾಯ್ ಭೋಸ್ಲೆ!

First Published | Mar 12, 2024, 4:18 PM IST

ದಿ ಪ್ರೈಡ್ ಆಫ್ ಭಾರತ್ - ಛತ್ರಪತಿ ಶಿವಾಜಿ ಮಹಾರಾಜ್ ಚಿತ್ರದಲ್ಲಿ ಶಿವಾಜಿ ಮಹಾರಾಜರ ಪತ್ನಿ ರಾಣಿ ಸಾಯಿ ಭೋನ್ಸಾಲೆ ಪಾತ್ರವನ್ನು ಆಶಾ ಭೋಸ್ಲೆಯ ಮೊಮ್ಮಗಳು ಝನಾಯ್ ನಿರ್ವಹಿಸಲಿದ್ದಾರೆ.
 

ಲೆಜೆಂಡರಿ ಗಾಯಕಿ ಆಶಾ ಭೋಂಸ್ಲೆ ಅವರ ಮೊಮ್ಮಗಳು ಝನಾಯಿ ಭೋಂಸ್ಲೆ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸರ್ವ ಸಿದ್ಧರಾಗಿದ್ದಾರೆ.

ಚಿತ್ರನಿರ್ಮಾಪಕ ಸಂದೀಪ್ ಸಿಂಗ್ ಅವರ ದಿ ಪ್ರೈಡ್ ಆಫ್ ಭಾರತ್ - ಛತ್ರಪತಿ ಶಿವಾಜಿ ಮಹಾರಾಜ್ ಚಿತ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪತ್ನಿ ರಾಣಿ ಸಾಯಿ ಭೋನ್ಸಾಲೆ ಪಾತ್ರವನ್ನು ಝನಾಯ್ ನಿರ್ವಹಿಸಲಿದ್ದಾರೆ.

Tap to resize

ಝನಾಯಿಯ ಚಿತ್ರರಂಗ ಪ್ರವೇಶವನ್ನು ಪ್ರಕಟಿಸುತ್ತಾ, ಆಶಾ ಭೋಂಸ್ಲೆ Xನಲ್ಲಿ ಹೀಗೆ ಬರೆದಿದ್ದಾರೆ, 'ಮುಂಬರುವ ಭವ್ಯ ಮಹಾಕಾವ್ಯ #ThePrideofBharat ಛತ್ರಪತಿ ಶಿವಾಜಿ ಮಹಾರಾಜ್‌ನಲ್ಲಿ ನನ್ನ ಮುದ್ದಾದ ಮೊಮ್ಮಗಳು @ZanaiBhosle ಸಿನಿಮಾ ಜಗತ್ತನ್ನು ಸೇರುವುದನ್ನು ನೋಡಲು ನಾನು ನಿಜವಾಗಿಯೂ ಸಂತೋಷಗೊಂಡಿದ್ದೇನೆ. ಅವಳು ತನ್ನ ಉದ್ದೇಶಿತ ಸ್ಥಾನವನ್ನು ಪಡೆದುಕೊಳ್ಳುತ್ತಾಳೆ ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ.'

ಶಿವಾಜಿ ಮಹಾರಾಜರ ಪತ್ನಿ ರಾಣಿ ಸಾಯಿಬಾಯಿ ಅವರು ರಾಜ ಮತ್ತು ಮಾನವನ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ಆ ಪಾತ್ರವನ್ನು ಝನಾಯ್ ನಿಭಾಯಿಸಲಿದ್ದಾರೆ. 

ಪ್ರೈಡ್ ಆಫ್ ಇಂಡಿಯಾ - ಛತ್ರಪತಿ ಶಿವಾಜಿ ಮಹಾರಾಜ ಚಿತ್ರ ದೊಡ್ಡ ರೀತಿಯಲ್ಲಿ ತಯಾರಾಗುತ್ತಿದ್ದಾರೆ ಮತ್ತು ಫೆಬ್ರವರಿ 19, 2026 ರಂದು ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿಯಂದು ಬಿಡುಗಡೆಯಾಗಲಿದೆ.

ಚಿತ್ರ ನಿರ್ದೇಶಕ ಸಂದೀಪ್ ಸಿಂಗ್ ಈ ಬಗ್ಗೆ ಮಾತನಾಡಿ, ಝನಾಯ್ ತನ್ನ ಅಜ್ಜಿಯರಂತೆ ಭಾವಪೂರ್ಣವಾದ ಧ್ವನಿಯನ್ನು ಹೊಂದಿದ್ದಾರೆ ಮತ್ತು ಸಂಗೀತದ ಕಿವಿಯನ್ನು ಹೊಂದಿದ್ದಾರೆ. ಜೊತೆಗೆ ಆಕೆ ಪ್ರತಿಭಾವಂತ ನರ್ತಕಿ ಮತ್ತು ಕೌಶಲ್ಯಪೂರ್ಣ ಕಲಾವಿದೆ ಕೂಡಾ ಎಂದಿದ್ದಾರೆ. 

ಝನಾಯ್ ಬೋಸ್ಲೆಗೆ ದೂರದ ಕಸಿನ್ ಆಗಿರುವ ನಟಿ ಶ್ರದ್ಧಾ ಕಪೂರ್ ನಟಿಯ ಈ ಸಿನಿ ಜರ್ನಿ ಆರಂಭಕ್ಕೆ ಆಲ್ ದ ಬೆಸ್ಟ್ ಹೇಳಿದ್ದಾರೆ. 

'ನನ್ನ ತಂಗಿ ನಮ್ಮೆಲ್ಲರನ್ನು ರಂಜಿಸಲು ಚಿತ್ರರಂಗಕ್ಕೆ ಬರುತ್ತಿದ್ದಾಳೆ. ರಾಣಿ ಸಾಯಿಭಾಯಿ ಪಾತ್ರ ನಿರ್ವಹಿಸಲಿದ್ದಾಳೆ. ಅವಳ ಈ ಪಯಣಕ್ಕೆ ವಿಶೇ ಮಾಡಲೇಬೇಕು' ಎಂದು ಶ್ರದ್ಧಾ ಬರೆದುಕೊಂಡಿದ್ದಾರೆ. 

ಉದ್ದ ಕೂದಲುಳ್ಳ, ದೊಡ್ಡ ಕಂಗಳ ಸುಂದರಿ ಝನಾಯ್ ಭೋಸ್ಲೆ ಮುಂಚೆ ಕೊಂಚ ದಪ್ಪವಿದ್ದು ಅವರ ಫಿಟ್ನೆಸ್ ಜರ್ನಿ ಪ್ರೇರಣಾದಾಯಕವಾಗಿದೆ. 

Latest Videos

click me!