ಮಾರ್ಚ್ 13ರಂದು ಬಹುಕಾಲದ ಗೆಳೆಯನ ಜತೆ ನಟಿ ಕೃತಿ ಕರಬಂಧ ವಿವಾಹ, ಆಮಂತ್ರಣ ಪತ್ರಿಕೆ ಲೀಕ್

First Published | Mar 11, 2024, 6:52 PM IST

ಸದ್ದಿಲ್ಲದೆ ತಮ್ಮ ಬಹುಕಾಲದ ಗೆಳೆಯನೊಂದಿಗೆ ಕನ್ನಡ ನಟಿ ಕೃತಿ ಕರಬಂಧ ವಿವಾಹವಾಗುತ್ತಿದ್ದಾರೆ. ಇನ್ನೆರಡು ದಿನದಲ್ಲಿ ಮದುವೆಯಾಗಲಿದ್ದು, ಮದುವೆ ಆಮಂತ್ರಣ ಪ್ರತಿಕೆ ಲೀಕ್‌ ಆದ ಬಳಿಕ ಈ ವಿಚಾರ ಬಹಿರಂಗವಾಗಿದೆ.

ಇದೇ ಮಾರ್ಚ್ 13ರಂದು ಖ್ಯಾತ ನಟಿ ಕೃತಿ ಕರಬಂಧ ಮತ್ತು ಪುಲ್ಕಿತ್ ಸಾಮ್ರಾಟ್ ವಿವಾಹವಾಗಲಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಮದುವೆಯ ಆಮಂತ್ರಣ ಪತ್ರಿಕೆ ಲೀಕ್ ಆಗಿದೆ. 

2019 ರಲ್ಲಿ ತಮ್ಮ ಹಿಂದಿ ಭಾಷೆಯ ಪಾಗಲ್‌ಪಂತಿ ಚಿತ್ರದ ಸೆಟ್‌ನಲ್ಲಿ ಇಬ್ಬರೂ ಪ್ರೀತಿಯಲ್ಲಿ ಬಿದ್ದರು. ತಮ್ಮ ಸಂಬಂಧವನ್ನು ಅವರು ಬಹಿರಂಗವಾಗಿಯೇ ಹೇಳಿಕೊಂಡು ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ, ವಿಡಿಯೋವನ್ನು ಹಂಚಕೊಳ್ಳುತ್ತಿರುತ್ತಾರೆ.  

Tap to resize

ಒಟ್ಟಿಗೆ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿ ಕೂಡ ತುಂಬಾ ಚೆನ್ನಾಗಿದೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಾರೆ. 2018 ರಲ್ಲಿ ವೀರೇ ಕಿ ವೆಡ್ಡಿಂಗ್ ಚಿತ್ರದ ಸೆಟ್‌ಗಳಲ್ಲಿ ಇಬ್ಬರೂ ಪರಸ್ಪರ ಭೇಟಿಯಾದರು. ಅಲ್ಲಿಂದ ಅವರ ಗೆಳೆತನ ಆರಂಭವಾಯ್ತು.  

ಸಾಕಷ್ಟು ಊಹಾಪೋಹಗಳು ಮತ್ತು ನಿರೀಕ್ಷೆಗಳ ನಂತರ, ದಂಪತಿಗಳು ಮಾರ್ಚ್ 2024 ರಲ್ಲಿ ಮದುವೆಯಾಗುವುದಾಗಿ ಫೆಬ್ರವರಿ 14ರ ಪ್ರೇಮಿಗಳ ದಿನ ಅಧಿಕೃತವಾಗಿ ಘೋಷಿಸಿದ್ದರು. ಆದರೆ ದಿನಾಂಕ ತಿಳಿಸಿರಲಿಲ್ಲ.

ಇದೀಗ ಮಾರ್ಚ್ 13ರಂದು ವಿವಾಹವಾಗಲಿದ್ದು, ತೀರಾ ಹತ್ತಿರದ ಸಂಬಂಧಿಕರು ಮತ್ತು ಅತ್ಯಾಪ್ತರ ಸಮ್ಮುಖದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಮದುವೆಯಾಗಲಿದ್ದಾರೆ ಎಂದು ತಿಳಿದುಬಂದಿದೆ.

 ಮದುವೆಯ ಸುದ್ದಿಯು ಅವರ ಅಭಿಮಾನಿ ಬಳಗದಲ್ಲಿ ಸಂತೋಷ ತಂದಿದೆ. ಅನೇಕರು ನವವಧುಗಳಿಗ ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿದ್ದಾರೆ. ಸಹನಟರಿಂದ ಜೀವನ ಸಂಗಾತಿಯಾಗುವಲ್ಲಿಯವರೆಗಿನ ಅವರ ಪ್ರಯಾಣವು ಅವರ ಬಲವಾದ ನಂಬಿಕೆ ಮತ್ತು ಪರಸ್ಪರ ಗೌರವಕ್ಕೆ ಸುಂದರವಾದ ಸಾಕ್ಷಿಯಾಗಿದೆ. 

ಕನ್ನಡ, ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ಜನಪ್ರಿಯತೆ ಪಡೆದಿರುವ ಕೃತಿ ಕನ್ನಡದಲ್ಲಿ ಚಿರು ಚಿತ್ರದ ಮೂಲದ ಸ್ಯಾಂಡಲ್‌ವುಡ್‌ ಗೆ ಎಂಟ್ರಿ ಕೊಟ್ಟರು. ಬಳಿಕ ಗೂಗ್ಲಿ, ಮಾಸ್ತಿಗುಡಿ ಸೇರಿದಂತೆ 10 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ

ಮಾರ್ಚ್ 13ರಂದು ಅವರ ಮದುವೆಗೆ ಸಂಬಂಧಿಸಿದ , ಫೋಟೋ ವಿಡಿಯೋಗಳನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಮದುವೆ ಎಲ್ಲಿ ನಡೆಯಲಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ತಿಳಿದುಬಂದಿಲ್ಲ. ಮೂಲಗಳ ಪ್ರಕಾರ ಮನೇಸರ್ ನಲ್ಲಿ ಎಂದು ತಿಳಿದುಬಂದಿದೆ.

Latest Videos

click me!