ಬಿಗ್‌ ಬಿ ಮೊಮ್ಮಗಳು ಜಾವೇದ್‌ ಜಾಪ್ರಿ ಮಗನ ಜೊತೆ ಡೇಟ್‌ ಮಾಡ್ತಿದ್ದಾಳಾ?

First Published | Dec 29, 2020, 2:50 PM IST

ಅಮಿತಾಬ್ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ತುಂಬಾ ಸಕ್ರಿಯಳಾಗಿದ್ದಾಳೆ. ನವ್ಯಾ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂ ಪ್ರೊಫೈಲ್‌ ಪಬ್ಲಿಕ್‌ ಮಾಡಿದ್ದಾಳೆ. ಈಕೆ ಒಂದು ಪೋಟೋ ಶೇರ್‌ ಮಾಡಿದ್ದು, ಅದರಲ್ಲಿ ಹೆಂಚಿನ ಮೇಲೆ ಕುಳಿತಿದ್ದಾಳೆ. ಕೂದಲಿನಿಂದ ತ್ನನ ಮುಖವನ್ನು ಮುಚ್ಚಿಕೊಂಡಿದ್ದಾಳೆ. ಆ ಫೋಟೊಗೆ ಜಾವೇದ್ ಜಾಫ್ರಿ ಮಗ ಮಿಜಾನ್ ಜಾಫ್ರಿ ಮಾಡಿರುವ ಕಾಮೆಂಟ್‌ ಸಖತ್‌ ವೈರಲ್‌ ಆಗಿದೆ. ನವ್ಯಾ ಹಾಗೂ ಮಿಜಾನ್‌ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ರೂಮರ್‌ಗೆ ತುಪ್ಪ ಸುರಿದ ಹಾಗೇ ಆಗಿದೆ. 

ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟೀವ್‌ ಇರುವ ನವ್ಯಾರ ಇನ್ಸ್ಟಾಗ್ರಾಮ್‌ಫೋಟೋಗೆ ಇತ್ತೀಚೆಗೆ ಮೀಜನ್ ಮಾಡಿದ ಕಾಮೆಂಟ್ ಬಿಟೌನ್‌ನಲ್ಲಿ ಸುದ್ದಿಯಾಗಿದೆ.
ನವ್ಯಾ ಮುಖವನ್ನು ಮುಚ್ಚಿಕೊಂಡಿರುವ ಫೋಟೋಗೆ 'ನಿಮ್ಮ ಮುಖವನ್ನು ತೋರಿಸಬಹುದೇ? ಎಂದು ಕಾಮೆಂಟ್‌ ಮಾಡಿ ಜೊತೆಗೆ ಹಾರ್ಟ್‌ಎಮೋಜಿಯನ್ನು ಹಂಚಿಕೊಂಡಿದ್ದಾರೆ ಮಿಜಾನ್‌.
Tap to resize

ಅವರ ಕಾಮೆಂಟ್‌ಗೆ ಅಭಿಮಾನಿಗಳು ಸಹ ಬೆಂಬಲಿಸಿದ್ದಾರೆ ಹಾಗೂ ಮುಖ ತೋರಿಸಲು ನವ್ಯಾಗೆ ರಿಕ್ವೆಸ್ಟ್‌ ಮಾಡಿಕೊಂಡಿದ್ದಾರೆ.
ಅಮಿತಾಬ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಈ ವರ್ಷ ಮೇ ತಿಂಗಳಲ್ಲಿ ಪದವಿ ಪಡೆದರು. ನ್ಯೂಯಾರ್ಕ್‌ನ ಫೋರ್ಡ್ಹ್ಯಾಮ್ ವಿಶ್ವವಿದ್ಯಾಲಯದಿಂದ ಡಿಜಿಟಲ್ ತಂತ್ರಜ್ಞಾನದಲ್ಲಿ ಪದವಿ ಪಡೆದಿದ್ದಾಳೆ.
24 ವರ್ಷದ ನವ್ಯಾ ಹೆಚ್ಚಾಗಿ ಸ್ನೇಹಿತರೊಂದಿಗೆ ಪಾರ್ಟಿ ಮಾಡುವುದನ್ನು ಕಾಣಬಹುದು. ನವ್ಯಾ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಜೊತೆ ಉತ್ತಮ ಬಾಂಡಿಗ್‌ ಹೊಂದಿದ್ದಾಳೆ.
ನವ್ಯಾ ಅವರ ತಂದೆ ನಿಖಿಲ್ ನಂದಾ ಬೆಂಗಾವಲು ಗುಂಪಿನಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.
ನವ್ಯಾ ಪಿಯಾನೋ ನುಡಿಸಲು ಇಷ್ಟಪಡುತ್ತಾಳೆ. ಕೆಲವು ವರ್ಷಗಳ ಹಿಂದೆ ತನ್ನ ಅಜ್ಜ ಅಮಿತಾಬ್ ಬಚ್ಚನ್ ಅವರೊಂದಿಗೆ ಪಿಯಾನೋ ನುಡಿಸುತ್ತಿರುವ ಫೋಟೋ ಕಂಡುಬಂದಿತ್ತು.
ನವ್ಯಾ ಅವರು 2016ರಲ್ಲಿ ಲಂಡನ್‌ನ ಸೆವೆನ್ ಓಕ್ಸ್ ಸ್ಕೂಲ್‌ನಿಂದ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಶಾರುಖ್ ಅವರ ಮಗ ಆರ್ಯನ್ ಕೂಡ ಈ ಶಾಲೆಯಲ್ಲಿದ್ದರು.
ನವ್ಯಾ ನವೇಲಿ ಮತ್ತು ಜಾವೇದ್ ಜಾಫ್ರಿ ಅವರ ಪುತ್ರ ಮೀಜಾನ್ ಫೋಟೋ 2018 ರ ಮೇನಲ್ಲಿ ವೈರಲ್ ಆಗಿತ್ತು. ಇದರಲ್ಲಿ ಇಬ್ಬರೂ ಪಾರ್ಟಿಯಲ್ಲಿ ಕ್ಲೋಸ್‌ ಆಗಿ ಕಾಣಿಸಿಕೊಂಡರು.
ಇದಕ್ಕೂ ಮೊದಲು ಜುಲೈ 2017ರಲ್ಲಿ, ಇಬ್ಬರೂ ಪಾರ್ಟಿಯಿಂದ ಹಿಂದಿರುಗಿದಾಗ, ಮೀಜಾನ್ ಕಾರಿನಲ್ಲಿ ಮುಖವನ್ನು ಮರೆಸಿಕೊಂಡಿದ್ದರು. ಅಂದಿನಿಂದ, ಅವರ ಸಂಬಂಧದ ಚರ್ಚೆ ಮಾಧ್ಯಮಗಳಲ್ಲಿ ಪ್ರಾರಂಭವಾಯಿತು.
ಆದರೆ, ನಂತರ ಸಂದರ್ಶನವೊಂದರಲ್ಲಿ, 'ನಾವು ಒಂದೇ ಫ್ರೆಂಡ್‌ ಜೋನ್‌ನಿಂದ ಬಂದಿದ್ದೇವೆ. ಅವಳು ನನ್ನ ತಂಗಿಯ ಅತ್ಯುತ್ತಮ ಸ್ನೇಹಿತೆ ಮತ್ತು ನನ್ನ ಸ್ನೇಹಿತೆ ಕೂಡ. ನಾನು ಯಾರೊಂದಿಗೂ ಸಂಬಂಧ ಹೊಂದಿಲ್ಲ' ಎಂದು ಎಂದು ಮೀಜಾನ್ ಸ್ಪಷ್ಟಪಡಿಸಿದ್ದರು.
ಸಂಜಯ್ ಲೀಲಾ ಭನ್ಸಾಲಿ ಅವರ 'ಮಲಾಲ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ ಮೀಜನ್ ಜಾಫ್ರಿ.
ಶೀಘ್ರದಲ್ಲೇ ಶಿಲ್ಪಾ ಶೆಟ್ಟಿ ಅವರೊಂದಿಗೆ ಹಂಗಮಾ 2 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಶಿಲ್ಪಾ ಮತ್ತು ಮೀಜನ್ ಜೊತೆ ಪರೇಶ್ ರಾವಲ್ ಮತ್ತು ಪ್ರಣಿತಾ ಸುಭಾಷ್ ಕೂಡ ಇದ್ದಾರೆ.

Latest Videos

click me!