ಸಂಗೀತಾ ಬಿಜ್ಲಾನಿ-ಅನುಷ್ಕಾ, ಕ್ರಿಕೆಟಿಗರಿಗೆ ಬೋಲ್ಡ್‌ ಆದ ನಟಿಯರು!

Suvarna News   | Asianet News
Published : Aug 29, 2020, 08:17 PM ISTUpdated : Aug 29, 2020, 08:23 PM IST

ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಪತ್ನಿ ನಟಿ ಅನುಷ್ಕಾ ಶರ್ಮಾ ಪ್ರೆಗ್ನೆಂಸಿ ಸುದ್ದಿಯಿಂದ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ವಿರಾಟ್-ಅನುಷ್ಕಾರಂತೆ, ಕ್ರಿಕೆಟ್‌ ಹಾಗೂ ಸಿನಿಮಾ ಕ್ಷೇತ್ರದ ಹಲವು ಜೋಡಿಗಳ ಉದಾಹರಣೆಗಳಿವೆ. ತಾರೆಯರು ಮತ್ತು ಕ್ರಿಕೆಟಿಗರ ನಂಟು ಬಹಳ ಹಿಂದಿನಿಂದಲೂ ಇದೆ. ಸಂಗೀತಾ ಬಿಜ್ಲಾನಿಯಿಂದ ಅನುಷ್ಕಾವರೆಗೆ ಕ್ರಿಕೆಟಿಗರಿಗೆ ಮನ ಸೋತಿರುವ ನಟಿಯರು ಸಾಕಷ್ಷು ಜನ ಇದ್ದಾರೆ. ಕ್ರಿಕೆಟಿಗರನ್ನು ಮದುವೆಯಾಗಿರುವ ಬಾಲಿವುಡ್‌ ನಟಿಯರ ವಿವರ ಇಲ್ಲಿದೆ.

PREV
18
ಸಂಗೀತಾ ಬಿಜ್ಲಾನಿ-ಅನುಷ್ಕಾ, ಕ್ರಿಕೆಟಿಗರಿಗೆ ಬೋಲ್ಡ್‌ ಆದ ನಟಿಯರು!

ಶರ್ಮಿಳಾ ಟ್ಯಾಗೋರ್- 
ಶರ್ಮಿಳಾ ಟ್ಯಾಗೋರ್ ಅವರ ಕಾಲದ ಅತ್ಯುತ್ತಮ ಮತ್ತು ಮನಮೋಹಕ ನಟಿ. ಕ್ರಿಕೆಟಿಗ ಮನ್ಸೂರ್ ಅಲಿ ಖಾನ್ ಪಟೌಡಿ ಅವರನ್ನು 1969 ರಲ್ಲಿ ವಿವಾಹವಾದರು. ಸೈಫ್ ಅಲಿ ಖಾನ್, ಸೋಹಾ ಅಲಿ ಖಾನ್, ಸಬಾ ಅಲಿ ಖಾನ್ ಅವರ ಮಕ್ಕಳು.

28

ಅನುಷ್ಕಾ ಶರ್ಮಾ-
ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ 2018ರಲ್ಲಿ ಇಟಲಿಯಲ್ಲಿ ವಿವಾಹವಾದರು. ಇತ್ತೀಚೆಗೆ ಅನುಷ್ಕಾ ತಮ್ಮ ಪ್ರೆಗ್ನೆಂಸಿಯನ್ನು ಆನೌನ್ಸ್‌ ಮಾಡಿದ್ದಾರೆ.  ಮುಂದಿನ ವರ್ಷದ ಜನವರಿಯಲ್ಲಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಲಿದ್ದಾರೆ.

38

ಸಂಗೀತ ಬಿಜ್ಲಾನಿ-
ಹಿಂದಿ ಚಿತ್ರರಂಗದ ಸುಂದರ ನಟಿ ಮತ್ತು ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರ ಲವ್‌ಸ್ಟೋರಿ ಸಾಕಷ್ಟು ಸುದ್ದಿಯಲ್ಲಿತ್ತು. 80ರ ದಶಕದಲ್ಲಿ ಭೇಟಿಯಾದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. 1996ರಲ್ಲಿ ವಿವಾಹವಾದರು, ಆದರೆ ಈ ಮದುವೆ ಹೆಚ್ಚು ಕಾಲ ಉಳಿಯಲಿಲ್ಲ ಮತ್ತು 2010 ರಲ್ಲಿ ಇಬ್ಬರೂ ಬೇರ್ಪಟ್ಟರು. 

48

ಗೀತಾ ಬಾಸ್ರಾ-
ನಟಿ ಗೀತಾ ಬಾಸ್ರಾ ಮತ್ತು  ಹರ್ಭಜನ್ ಸಿಂಗ್  2015ರಲ್ಲಿ ಮದುವೆಯಾದರು. ಸಂದರ್ಶನವೊಂದರಲ್ಲಿ, 'ನಾವು ಮೊದಲು ಸ್ನೇಹಿತರಾಗಿ ಇರೋಣ ಮತ್ತು ಮುಂದೆ ನೋಡಣ' ಎಂದು ಗೀತಾ ಹೇಳಿದ್ದರು ಎಂದು ಹರ್ಭಜನ್ ಹೇಳಿದ್ದಾರೆ. ಕೆಲವು ತಿಂಗಳ ನಂತರ ಇಬ್ಬರೂ ಡೇಟಿಂಗ್ ಪ್ರಾರಂಭಿಸಿ, ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

58

ಸಾಗರಿಕಾ ಘಾಟ್ಗೆ-
'ಚಕ್ ದೇ ಇಂಡಿಯಾ' ಚಿತ್ರದ ಮೂಲಕ ಪ್ರಸಿದ್ಧಿಯಾದ ನಟಿ ಸಾಗರಿಕಾ ಘಾಟ್ಗೆ ಕ್ರಿಕೆಟಿಗ ಜಹೀರ್ ಖಾನ್ ಅವರನ್ನು ವಿವಾಹವಾಗಿದ್ದಾರೆ. ತಮ್ಮ ರಿಲೆಷನ್‌ಶಿಪ್‌ ಬಗ್ಗೆ ಸಾಕಷ್ಟು ಸಮಯ ರಹಸ್ಯ ಕಾಪಾಡಿಕೊಂಡ ಜೋಡಿ ನಂತರ, ಅವರು ಇದ್ದಕ್ಕಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಅವರ ನಿಶ್ಚಿತಾರ್ಥದ ಸುದ್ದಿಯೊಂದಿಗೆ ಎಲ್ಲರನ್ನೂ ಆಶ್ಚರ್ಯಗೊಳಿಸಿದರು. ಜಹೀರ್ ಮತ್ತು ಸಾಗರಿಕಾ ಅವರು ಯುವರಾಜ್-ಹ್ಯಾಜೆಲ್ ವಿವಾಹ ಸಮಾರಂಭದಲ್ಲಿ ತಮ್ಮ ನಿಶ್ಚಿತಾರ್ಥವನ್ನು ಅಧಿಕೃತವಾಗಿ ಆನೌನ್ಸ್‌ ಮಾಡಿದ್ದರು.

68

ರೀನಾ ರಾಯ್-
ಬಾಲಿವುಡ್‌ನ ಪ್ರಮುಖ ನಟಿಯರಲ್ಲಿ ಒಬ್ಬರಾದ ರೀನಾ ರಾಯ್, ಶತ್ರುಘ್ನಾ ಸಿನ್ಹಾ ಅವರೊಂದಿಗಿನ ಬ್ರೇಕಪ್‌ ನಂತರ ಪಾಕಿಸ್ತಾನದ ಕ್ರಿಕೆಟಿಗ ಮೊಹ್ಸಿನ್ ಖಾನ್‌ ಆವರನ್ನು ವಿವಾಹವಾದರು. ಕ್ರಿಕೆಟಿಗ ಮೊಹ್ಸಿನ್ ಖಾನ್ ಹಿಂದಿ ಚಿತ್ರಗಳಾದ 'ಬಂತ್ವಾರ' ಮತ್ತು 'ಸಾಥಿ' ಚಿತ್ರಗಳಲ್ಲಿ ತಮ್ಮ ಅದೃಷ್ಟವನ್ನು ಪ್ರಯತ್ನಿಸಿದರು. ಆದರೆ ಮದುವೆ ಹೆಚ್ಚು ಕಾಲ ಉಳಿಯಲಿಲ್ಲ ಮತ್ತು 90 ರ ದಶಕದಲ್ಲಿ ಇಬ್ಬರು ತಮ್ಮದೇ ಆದ ಹಾದಿಯನ್ನು ಆರಿಸಿಕೊಂಡರು.

78

ನತಾಶಾ ಸ್ಟಾಂಕೋವಿಕ್-
ಇತ್ತೀಚೆಗೆ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು  ಪತ್ನಿ ನಟಿ ಕಮ್‌ ಮಾಡೆಲ್‌ ನತಾಶಾ ಸ್ಟಾಂಕೋವಿಕ್  ಜನವರಿಯಲ್ಲಿ, ಇಬ್ಬರೂ ತಮ್ಮ ನಿಶ್ಚಿತಾರ್ಥದ ಸುದ್ದಿಯಿಂದ ಎಲ್ಲರಿಗೂ  ಸರ್‌ಪ್ರೈಸ್‌ ನೀಡಿದ್ದರು. ಇದರ ನಂತರ, ರಹಸ್ಯವಾಗಿ ಲಾಕ್‌ಡೌನ್‌ನಲ್ಲಿ ವಿವಾಹವಾಗಿ  ಪೋಷಕರಾಗುವ ಸುದ್ದಿಯೊಂದಿಗೆ ಅಭಿಮಾನಿಗಳಿಗೆ ಡಬಲ್ ಆಶ್ಚರ್ಯವನ್ನು ನೀಡಿದರು. ಈಗ ಗಂಡು ಮಗುವೂ ಆಗಿದೆ.

88

ಹ್ಯಾಜೆಲ್ ಕೆಚ್-
ಕ್ರಿಕೆಟಿಗರಾದ ಯುವರಾಜ್ ಸಿಂಗ್ ಮತ್ತು ಹ್ಯಾ ಜೆಲ್ ಕೀಚ್ ಪರಸ್ಪರ ಡೇಟಿಂಗ್ ಮಾಡಿದ ನಂತರ  2016 ರಲ್ಲಿ ಸಪ್ತಪದಿ ತುಳಿದರು. ಬಾಡಿಗಾರ್ಡ್ ಚಿತ್ರದಲ್ಲಿ ಹ್ಯಾಜೆಲ್‌ ಸಲ್ಮಾನ್ ಖಾನ್ ಮತ್ತು ಕರೀನಾ ಕಪೂರ್ ಅವರೊಂದಿಗೆ ಕೆಲಸ ಮಾಡಿದ್ದಾರೆ.

click me!

Recommended Stories