ಅನುಷ್ಕಾ, ಪ್ರಭಾಸ್ ಕಾಂಬಿನೇಷನ್‌ನಲ್ಲಿ ತೆರೆಕಂಡ ಬಿಲ್ಲಾ (Billa), ಮಿರ್ಚಿ (Mirchi) , ಬಾಹುಬಲಿ1 (Baahubali) , ಬಾಹುಬಲಿ2 (Baahubali2) ಸಿನಿಮಾಗಳು ಒಂದು ಸಿನಿಮಾವನ್ನು ಮೀರಿ ಮತ್ತೊಂದು ಭರ್ಜರಿ ಯಶಸ್ಸು ಗಳಿಸಿವೆ. ಪ್ರಭಾಸ್ ಪ್ರಸ್ತುತ ವೇಗವಾಗಿ ಸಿನಿಮಾಗಳಲ್ಲಿ ನಟಿಸುತ್ತಿದ್ದರೆ ಅನುಷ್ಕಾ ನಿಧಾನವಾಗಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪ್ರಭಾಸ್ ಅನುಷ್ಕಾ ಜೋಡಿಯನ್ನು ಮತ್ತೆ ತೆರೆಯ ಮೇಲೆ ನೋಡಬೇಕೆಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಪ್ರಸ್ತುತ ಅನುಷ್ಕಾ ಒಂದು ಮಲಯಾಳಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಕಳೆದ ವರ್ಷ ಮಿಸ್ ಪೋಲಿಶೆಟ್ಟಿ Mr Polishetty (Miss Shetty Mr Polishetty) ಸಿನಿಮಾದ ಮೂಲಕ ಅನುಷ್ಕಾ ಯಶಸ್ಸು ಗಳಿಸಿದ್ದರು. ಇವರಿಬ್ಬರೂ ಮತ್ತೊಮ್ಮೆ ನಟಿಸಿದರೆ ನೋಡಬೇಕೆಂಬುದು ಅಭಿಮಾನಿಗಳ ಆಸೆ. ಇತ್ತ ಅನುಷ್ಕಾ..ಪ್ರಭಾಸ್‌ಗೆ ಟೀಜ್ ಮಾಡುವ ವಿಧಾನವೇ ಒಂಥರಾ ಗಮ್ಮತ್ತು ಅಂತೆ.