ಮುಂಬೈ(ಡಿ. 30) ಬಾಲಿವುಡ್ ಸೆಲೆಬ್ರಿಟಿ ಪ್ರೆಗ್ನೆಂಟ್ ಅಂದರೆ ಅನುಷ್ಕಾ ಶರ್ಮಾ ಡಿಫರೆಂಟಾಗಿ ಕಾಣಿಸಿಕೊಂಡಿದ್ದಾರೆ. ಗರ್ಭಿಣಿ ಅನುಷ್ಕಾ Vogue ಮ್ಯಾಗಜೀನ್ ಗೆ ಪೋಸ್ ಕೊಟ್ಟಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪತ್ನಿ ಅನುಷ್ಕಾಗೆ ಶೀರ್ಷಾಸನ ಮಾಡಲು ಕಿಂಗ್ ವಿರಾಟ್ ಕೊಹ್ಲಿ ಸಾಥ್ ನೀಡಿದ್ದ ಪೋಟೋಗಳು ವೈರಲ್ ಆಗಿದ್ದವು. ಕಪ್ಪು ಡಾಟೆಡ್ ಪೋಲ್ಕಾ ಧರಿಸಿ ಗಂಡ ವಿರಾಟ್ ಜೊತೆಗೆ ಬೇಬಿ ಬಂಪ್ ಪ್ರದರ್ಶಿಸಿದ ಫೋಟೋ ವೈರಲ್ ಆಗಿತ್ತು. ಟೀ ಕಾಫಿ ಬೇಡ.. ನಿಯಮಿತ ಡಯಟ್ ಮಾಡಿ ಎಂದು ಅನುಷ್ಕಾ ಗರ್ಭಿಣಿಯರಿಗೆ ಟಿಪ್ಸ್ ಕೊಟ್ಟಿದ್ದರು. ವಿರಾಮದ ವೇಳೆಯಲ್ಲಿ ಸಂಗೀತ ಕೇಳುವುದು ಒಳ್ಳೆಯ ಅಭ್ಯಾಸ. ಸಂಗೀತ ಕೇಳುವಾಗ ನಿಮ್ಮ ಮೈಮನಗಳೆಲ್ಲ ಶಾಂತವಾಗಿರುತ್ತವೆ. ಮಗು ಕೂಡ ಶಾಂತ ಮನಸ್ಥಿತಿಯನ್ನು ಕಲಿಯುತ್ತದೆ. ಹಾಗೇ ಧ್ಯಾನ ಕೂಡ ಒಳ್ಳೆಯದು ಎಂದಿದ್ದರು. ಬೇಬಿ ಬಂಪ್ ಪ್ರದರ್ಶಿಸಿ ಪೋಸ್ ಕೊಟ್ಟಿರುವ ಅನುಷ್ಕಾ ಪೋಟೋಕ್ಕೆ ಬಗೆಬಗೆಯ ಕಮೆಂಟ್ ಗಳು ಬರುತ್ತಿವೆ. Actress Anushka Sharma flaunts baby bump on fashion magazine’s latest cover; looks gorgeous ಬೇಬಿ ಬಂಪ್ ಪ್ರದರ್ಶಿಸುತ್ತ ಮ್ಯಾಗಜೀನ್ ಗೆ ಪೋಸ್ ಕೊಟ್ಟ ಅನುಷ್ಕಾ