ಎನ್‌ಟಿಆರ್-ಎಎನ್‌ಆರ್ ಜೊತೆಯಾಗಿ ಬರೋಬ್ಬರಿ 15 ಸಿನಿಮಾಗಳಲ್ಲಿ ನಟಿಸಿದ್ದರು. ಇದು ಅಪರೂಪದ ದಾಖಲೆ. 70ರ ದಶಕದಲ್ಲಿ ಎನ್‌ಟಿಆರ್ ಜೊತೆ ಜಯಸುಧಾ, ಜಯಪ್ರದಾ, ಶ್ರೀದೇವಿ, ವಾಣಿಶ್ರೀ, ಶಾರದಾ, ಲಕ್ಷ್ಮಿ, ಜಯಚಿತ್ರ ಹೀಗೆ ಹಲವು ನಾಯಕಿಯರು ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಶ್ರೀದೇವಿ, ಜಯಸುಧಾ, ಜಯಪ್ರದಾ ಮುಂಚೂಣಿಯಲ್ಲಿದ್ದಾರೆ.
ಎನ್‌ಟಿಆರ್, ಎಎನ್‌ಆರ್ ಅವರ ಮಲ್ಟಿಸ್ಟಾರರ್ ರಾಮಕೃಷ್ಣುಲು ಚಿತ್ರದಲ್ಲಿ ಜಯಸುಧಾ, ಜಯಪ್ರದಾ ನಾಯಕಿಯರಾಗಿ ನಟಿಸಿದ್ದರು. ಎನ್‌ಟಿಆರ್ ಜೊತೆ ಜಯಸುಧಾ ಜೋಡಿಯಾದರೆ, ಎಎನ್‌ಆರ್ ಜೊತೆ ಜಯಪ್ರದಾ ನಟಿಸಿದ್ದರು. ಈ ಸಿನಿಮಾದ ಲಾಂಚಿಂಗ್ ಅನ್ನಪೂರ್ಣ ಸ್ಟುಡಿಯೋದಲ್ಲಿ ನಡೆದಿತ್ತು. ಶಿವಾಜಿ ಗಣೇಶನ್ ಈ ವೇಳೆ ಉಪಸ್ಥಿತರಿದ್ದು, ಸಿನಿಮಾಗೆ ಕ್ಲಾಪ್ ಮಾಡಿದ್ದರು.