ಮಹೇಶ್ ಬಾಬು ನಟಿಸಿದ್ದ 'ಸರಿಲೇರು ನೀಕೆವ್ವರು' 200 ಕೋಟಿ ಗ್ರಾಸ್ ಜೊತೆಗೆ ಅಮೆರಿಕದಲ್ಲಿ 2 ಮಿಲಿಯನ್ ಡಾಲರ್ ಸಂಗ್ರಹಿಸಿದೆ. 'ಸಂಕ್ರಾಂತಿಗೆ ವಸ್ತುನ್ನಾಂ' ಸಿನಿಮಾ ಕೂಡ 200 ಕೋಟಿ ರೂ. ದಾಟಿದ್ದು, 2 ಮಿಲಿಯನ್ ಡಾಲರ್ ಸಂಗ್ರಹಿಸುವ ನಿರೀಕ್ಷೆಯಿದೆ. ಈಗಿನ ನಿರ್ದೇಶಕರಲ್ಲಿ ರಾಜಮೌಳಿ ನಂತರ ಶೇ.100ರಷ್ಟು ಯಶಸ್ಸು ಕಂಡ ನಿರ್ದೇಶಕ ಅನಿಲ್ ರವಿಪುಡಿ.
ಮುಂದೆ ಏನು ಮಾಡ್ತಾರೋ ಗೊತ್ತಿಲ್ಲ, ಆದರೆ ಮೆಗಾ ಹೀರೋಗಳು ಅನಿಲ್ ಜೊತೆ ಸಿನಿಮಾ ಮಾಡಲು ಕಾಯ್ತಾ ಇದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಜೊತೆ ಸಿನಿಮಾ ಮಾಡ್ತಿದ್ದಾರೆ. ವೆಂಕಿ, ಬಾಲಯ್ಯ, ಮಹೇಶ್‌ರನ್ನು ನಿಭಾಯಿಸಿದ ಅನಿಲ್ ಚಿರು ಜೊತೆ ಹೇಗೆ ಸಿನಿಮಾ ಮಾಡ್ತಾರೆ ಅಂತಾ ಕಾದು ನೋಡಬೇಕು.