ಇದಾದ ನಂತರ ಕೇಂದ್ರ ಸರ್ಕಾರದಿಂದ ನೀಡಲಾಗುವ ಪದ್ಮ ಪ್ರಶಸ್ತಿಗಳ ಬಗ್ಗೆ ಮಾತನಾಡಿ, ನನ್ನ ತಾಯಿ ವಿಜಯ ನಿರ್ಮಲ ಅವರು ಬದುಕಿದ್ದಾಗ ಅವರಿಗೆ ಪದ್ಮ ಪ್ರಶಸ್ತಿಗ ಕೊಡಿಸುವುದಕ್ಕಾಗು ದೆಹಲಿವರೆಗೂ ಹೋಗಿ ಪ್ರಯತ್ನಿಸಿದೆ. ಆದರೆ, ಸಾಧ್ಯವಾಗಲಿಲ್ಲ. ಈ ಹಿಂದೆ ಕೆಸಿಆರ್ ಸರ್ಕಾರ ಇದ್ದಾಗ ಪದ್ಮ ಪ್ರಶಸ್ತಿಗಾಗಿ ವಿಜಯ ನಿರ್ಮಲ ಅವರ ಹೆಸರನ್ನು ಶಿಫಾರಸು ಮಾಡಲಾಗಿತ್ತು. ಆದರೆ ಆಗಲೂ ಪದ್ಮ ಪ್ರಶಸ್ತಿ ಸಿಗಲಿಲ್ಲ. ನಾನು ಯಾವ ಸರ್ಕಾರವನ್ನೂ ಟೀಕಿಸುವುದಿಲ್ಲ. ಕನಿಷ್ಠ ಮರಣೋತ್ತರವಾಗಿ ಆದರೂ ಅಮ್ಮನಿಗೆ ಪದ್ಮ ಪ್ರಶಸ್ತಿ ಸಿಗುವಂತೆ ಹೋರಾಟ ಮಾಡುತ್ತೇನೆ ಎಂದು ನರೇಶ್ ಹೇಳಿದ್ದಾರೆ.