'ವಿಜಯ್ ಮತ್ತು ನಾನು ಬಹಳ ಹಿಂದಿನಿಂದಲೂ ಫ್ರೆಂಡ್ಸ್. ಯಾವುದೇ ಸಮಸ್ಯೆ ಇರಲಿಲ್ಲ. ಅರ್ಜುನ್ ರೆಡ್ಡಿ (2017) ಬಿಡುಗಡೆಯಾದಾಗ, ಚಿತ್ರದಲ್ಲಿ ಕೆಲವು ನಿಂದನೀಯ ಪದಗಳನ್ನು ಮ್ಯೂಟ್ ಮಾಡಲಾಗಿದೆ. ವಿಜಯ್ ಥಿಯೇಟರ್‌ಗೆ ಭೇಟಿ ನೀಡಿದ್ದರು ಮತ್ತು ಮ್ಯೂಟ್ ಮಾಡಿದ ಪದಗಳು ತೆರೆಗೆ ಬಂದಾಗ, ಅವರು ತಮ್ಮ ಅಭಿಮಾನಿಗಳಿಗೆ . ಡೈಲಾಗ್‌ಗಳನ್ನು ಹೇಳಲು ಹೇಳಿದರು ಮತ್ತು ಫ್ಯಾನ್ಸ್ ಆ ಕೆಟ್ಟ ಪದಗಳನ್ನು ಕೂಗುತ್ತಿದ್ದರು. ವಿಜಯ್ ಅವರು ತೆರೆ ಮೇಲೆ ಒಳ್ಳೊಳ್ಳೆ ಪಾತ್ರವನ್ನು ನಿರ್ವಹಿಸಿದ್ದಾರೆ. ಆದರೆ ನಿಜ ಜೀವನದಲ್ಲಿ ಅವರು ಅಂತಹ ಪದಗಳನ್ನು ಹೇಳಲು ಪ್ರೇಕ್ಷಕರನ್ನು ಏಕೆ ಪ್ರೋತ್ಸಾಹಿಸುತ್ತಾರೆ? ತಾಯಿಯಾಗಿ ಆ ರೀತಿ ಪದಗಳು ನನ್ನನ್ನು ನಿಜವಾಗಿಯೂ ಅಪ್ಸೆಟ್ ಮಾಡುತ್ತದೆ. ದಯವಿಟ್ಟು ನಿಜ ಜೀವನದಲ್ಲಿ ಇಂತಹ ವಿಷಯಗಳನ್ನು ಪ್ರೋತ್ಸಾಹಿಸಬೇಡಿ, ಎಂದು ನಾನು ಈ ಬಗ್ಗೆ ವಿಜಯ್ ಅವರೊಂದಿಗೆ ಮಾತನಾಡಿದ್ದೇನೆ' ಎಂದು ಅನಸೂಯಾ ಇಂಡಿಯಾ ಟುಡೇಗೆ ತಿಳಿಸಿದರು.